ಆನ್ ಲೈನ್ ಕಂಪೆನಿಗಳಿಂದ ಅನ್ಯಾಯ ವಿರೋಧಿಸಿ ಟ್ಟೀಟ್ ಅಭಿಯಾನ | ಪುತ್ತೂರು, ಸುಳ್ಯ, ಕಡಬ ಸ್ಥಳೀಯ ಮೊಬೈಲ್ ಮಾರಾಟ, ಸೇವಾ ವ್ಯಾಪಾರಿಗಳಿಂದ ಚಿಂತನಾ ಸಭೆ

Puttur_Advt_NewsUnder_1
Puttur_Advt_NewsUnder_1
  • ನ್ಯಾಯಯುತ ಹೋರಾಟಕ್ಕೆ ಒಗ್ಗಟ್ಡು ಮುಖ್ಯ- ಗುರುದತ್ ಕಾಮತ್
  • ಟ್ವೀಟ್ ಅಭಿಯಾನದ ಮೂಲಕ ಹೋರಾಟ- ಸಲೀಮ್
  • ಹೋರಾಟಕ್ಕಾಗಿ ಎಐಎಮ್‌ಆರ್‌ಎಯೊಂದಿಗೆ ಕೈ ಜೋಡಿಸಿ – ಮುನೀರ್
  • ಸ್ಥಳೀಯವಾಗಿ ವ್ಯವಹಾರ ನಡೆಸಿ – ಶಶಿರಾಜ್ ರೈ

ಪುತ್ತೂರು: ಆನ್ ಲೈನ್ ಕಂಪೆನಿಗಳು ಒಟ್ಟು ಸೇರಿ ಅನ್ಯಾಯ, ಬೇದಭಾವ ಮಾಡುತ್ತಿದೆ ಎಂದು ಆರೋಪಿಸಿ ರಾಷ್ಟ್ರ ವ್ಯಾಪಿ ಟ್ವೀಟ್ ಮಾಡಿ ಜನಾಭಿಪ್ರಾಯ ಮೂಡಿಸಿ, ಹೋರಾಟ ನಡೆಸಲು ಮೊಬೈಲ್ ಮಾರಾಟ ಮತ್ತು ಸೇವಾ ಕೆಂದ್ರದವರು ದೇಶವ್ಯಾಪಿ ಅಭಿಯಾನ ನಡೆಸಿದ್ದು, ದಕ್ಷಿಣ ಕನ್ನಡ, ಉಡುಪಿ ಅವಿಭಜಿತ ಜಿಲ್ಲೆಯಲ್ಲೂ ನಡೆದ ಅಭಿಯಾನದ ಬಳಿಕ ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿಗೆ ಸಂಬಂಧಿಸಿ ಆ.28ರಂದು ಪುತ್ತೂರು ಬೈಪಾಸ್ ನಲ್ಲಿರುವ ಹೊಟೇಲ್ ಅಶ್ಮಿಯಲ್ಲಿನ ಅಭಿನಂದನಾ ಮಿನಿ ಹಾಲ್ ನಲ್ಲಿ ಚಿಂತನಾ ಸಭೆ ನಡೆಯಿತು.

ನ್ಯಾಯಯುತ ಹೋರಾಟಕ್ಕೆ ಒಗ್ಗಟ್ಡು ಮುಖ್ಯ:
ದ.ಕ ಮತ್ತು ಉಡುಪಿ ಜಿಲ್ಲಾ ಅಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಷಿಯೇಶನ್ ನ ಗೌರವಾಧ್ಯಕ್ಷ ಗುರುದತ್ ಕಾಮತ್ ಅವರು ಮಾತನಾಡಿ ಮೊಬೈಲ್ ಕಂಪೆನಿಗಳು ಆನ್ಲೈನ್ ಮತ್ತು ರಿಟೈಲರ್ಸ್ ಗಳ ಮಧ್ಯ ಮಾಡುತ್ತಿರುವ ತಾರತಮ್ಯ ನಿಲ್ಲಿಸಲು, ಒಂದೇ ರೀತಿ ಯ ದರ ನಿಗದಿ, ಹಂಚಿಕೆ ಹಾಗು ಒಂದೇ ಸಮಯಕ್ಕೆ ಬಿಡುಗಡೆಯಾಗಬೇಕೆಂದು ಆಗ್ರಹಿಸಿ ನಾವು ನ್ಯಾಯಯುತವಾದ ಹೋರಾಟ ನಡೆಸಬೇಕು. ಇದಕ್ಕೆ ನಮ್ಮ ಒಗ್ಗಟ್ಡು ಅಗ್ಯತ್ಯವಿದೆ ಎಂದು ಅವರು ಹೇಳಿದರು.

ಟ್ವೀಟ್ ಅಭಿಯಾನದ ಮೂಲಕ ಹೋರಾಟ:
ಅಸೋಷಿಯೇಶನ್ ನ ಅಧ್ಯಕ್ಷ ಸಲೀಮ್ ಅವರು ಮಾತನಾಡಿ ಕೋವಿಡ್ ೧೯ ನಿಂದ ನಮ್ಮ ವ್ಯವಹಾರದಲ್ಲಿ ಸಂಕಷ್ಟ ಆಗಿದೆ. ಆದರೂ ನಾವು ನ್ಯಾಯಯುತ ಹೋರಾಟಕ್ಕಾಗಿ ಜೂನ್ ಮೊದಲ ತಿಂಗಳಲ್ಲಿ ನಾವು ಚಿಂತನಾ ಸಭೆ ಆರಂಭಿಸಿದ್ದೆವು. ಆರಂಭದಲ್ಲಿ ಮಂಗಳೂರು, ಉಡುಪಿ, ಮೂಡಬಿದ್ರೆಯಲ್ಲಿ ಸಭೆ ಆಯೊಜಿಸಿದ್ದೆವು. ನಮ್ಮ ಮೂಲ ಉದ್ದೇಶವೇ ಮೊಬೈಲ್ ಕಂಪೆನಿಗಳು ಆನ್ ಲೈನ್ ನೊಂದಿಗೆ ನಡೆಸುತ್ತಿರುವ ಬ್ಯಾಕ್ ಡೋರ್ ವ್ಯವಹಾರ ನಿಲ್ಲಿಸಬೇಕು. ನಮಗೆ ಮೊಬೈಲ್ ಸ್ಟ್ರಾಕ್ ಕೊಡಿಸಬೇಕು ಎಂದು ಹೇಳಿದ ಅವರು ನಾವೆಲ್ಲ ಟ್ವೀಟ್ ಅಭಿಯಾನದ ಮೂಲಕ ಹೋರಾಟ ನಡೆಸಬೇಕು ಎಂದು ಹೇಳಿದರು.

ಹೋರಾಟಕ್ಕಾಗಿ ಎಐಎಮ್‌ಆರ್‌ಎಯೊಂದಿಗೆ ಕೈ ಜೋಡಿಸಿ:
ದ ಕ ಜಿಲ್ಲೆ ಹಾಗು ಉಡುಪಿ ಜಿಲ್ಲಾ ಮೊಬೈಲ್ ರೆಟೈಲರ್ಸ್ ಸಂಘಟನೆಯ ಕಾರ್ಯದರ್ಶಿ ಮುನೀರ್ ಅವರು ಮಾತನಾಡಿ ಕೆಲವೇ ಕೆಲವು ವರುಷಗಳಿಂದೀಚೆಗೆ ಅಲ್ಲಲ್ಲಿ ತಲೆಎತ್ತಿದ ಆನ್‌ಲೈನ್ ಕಂಪೆನಿಗಳು ಇಂದು ಬಹಳ ವರುಷಗಳಿಂದ ಮೊಬೈಲ್ ವ್ಯಾಪಾರ ಮಾಡುತ್ತಾ ಬಂದಿರುವ ನಮ್ಮಂತಹ ಸ್ಥಳೀಯ ವ್ಯಾಪಾರಿಗಳ ವ್ಯಾಪಾರವನ್ನು ಕಸಿದುಕೊಳ್ಳುವ ಕೃತ್ಯಕ್ಕೆ ಕೈ ಹಾಕುತ್ತಿವೆ. ಇದು ಹೀಗೆ ಮುಂದುವರಿದರೆ ನಮ್ಮ ವ್ಯಾಪಾರ ಅವನತಿ ಯತ್ತ ಸಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಇದರಿಂದ ಮೊಬೈಲ್ ವ್ಯವಹಾರ ಮಾಡುತ್ತಿರುವ ಮತ್ತು ಅದನ್ನು ಅವಲಂಬಿ ಸಿರುವ ಡಿಸ್ಟ್ರಿಬ್ಯೂಟರ್, ರಿಟೆಲರ್ಸ್, ಸೇಲ್ಸ್ ಎಕ್ಸಿಕ್ಯೂ ಟಿವ್, ಸೇಲ್ಸ್ ಪ್ರಮೋಟರ್ಸ್ ಮತ್ತು ಅವರನ್ನು ಅವಲಂಬಿತವಾದ ಅವರ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಈ ಆನ್‌ಲೈನ್ ಕಂಪೆನಿಗಳು ಮತ್ತು ಮೊಬೈಲ್ ಕಂಪೆನಿಗಳಿಂದ ನಮಗೆ ನ್ಯಾಯ ಸಿಗ ಬೇಕಾದರೆ ಪ್ರತಿಯೊಬ್ಬ ಮೊಬೈಲ್ ವ್ಯಾಪಾರಸ್ಥರು ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ದೊಂದಿಗೆ ಕೈಜೋಡಿಸಬೇಕು ಎಂದರು.

ಸ್ಥಳೀಯವಾಗಿ ವ್ಯವಹಾರ ನಡೆಸಿ:
ದ.ಕ. ಮತ್ತು ಉಡುಪಿ ಜಿಲ್ಲೆಯ ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್‌ನ ಸಂಘಟನಾ ಕಾರ್ಯದರ್ಶಿಯಾಗಿರುವ ಮಾರ್ಕ್ ಟೆಲಿಕಾಂ ನ ಶಶಿರಾಜ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಲಾಕ್ ಡೌನ್ ಪರಿಸ್ಥಿತಿ ಆದ ಬಳಿಕ ಕಷ್ಟದ ಪರಿಸ್ಥಿತಿ ಆಗಿತ್ತು. ಆದರೆ ಕಂಪೆನಿಯಂದಲೇ ನಡೆದದ ಬ್ಯಾಕ್ ಡೋರ್ ವ್ಯವಹಾರದಿಂದ ಆನ್ ಲೈನ್ ನಲ್ಲಿ ಮೊಬೈಲ್ ಸಿಗುವಂತಾಯಿತು. ಈ ವ್ಯವಹಾರ ಹೀಗೆ ಮುಂದುವರಿದರೆ ಒಂದು ದಿನ ನಮ್ಮನ್ನು ನಾಶ ಪಡಿಸುವ ಕೆಲಸ ಆಗಲಿದೆ. ಕೋವಿಡ್ ೨೯ ನಿಂದಾಗಿ ಎಲ್ಲರು ಆನ್ ಲೈನ್‌ಗೆ ಮೊರೆ ಹೋಗುತ್ತಾರೆ. ಇದನ್ನು ನಿಲ್ಲಿಸಲು ನಮ್ಮಲ್ಲಿ ಒಗ್ಗಟ್ಟು ಬೇಕು. ಪ್ರಧಾನಿಯವರು ಒಕಲ್‌ಪಾರ್ ಲೋಕಲ್ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ನಾವು ಕೂಡಾ ಇತರ ವ್ಯವಹಾರಕ್ಕೆ ಸ್ಥಳೀಯ ಅಂಗಡಿಗಳನ್ನು ಹೊಂದಿಕೊಂಡಿರಬೇಕು. ಆಗ ಅವರು ಕೂಡಾ ನಮ್ಮಲ್ಲಿ ವ್ಯವಹರಿಸುತ್ತಾರೆ ಎಂದು ಹೇಳಿದರು. ವೇದಿಕೆಯಲ್ಲಿ ಅಸೋಸಿಯೇಷನ್‌ನ ಕೋ ಆರ್ಡಿನೇಟರ್ ರಿಯಾಜ್, ಜೊತೆಕಾರ್ಯದರ್ಶಿ ಶೈಲೇಂದ್ರ ಉಪಸ್ಥಿತರಿದ್ದರು. ಸೆಲ್ ಝೋನ್‌ನ ಪ್ರವೀಣ್, ಮೊಬೈಲ್ ಕೇರ್ ಸಿರಾಜುದ್ದೀನ್, ಪ್ರಕಾಶ್, ಶಬೀರ್, ಚೇತನ್ ಅತಿಥಿಗಳನ್ನು ಗೌರವಿಸಿದರು. ಶಶಿರಾಜ್ ರೈ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮೊಬೈಲ್ ಡೀಲರ್ ಪ್ರಶಾಂತ್ ಮತ್ತು ಪುತ್ತೂರು, ಸುಳ್ಯ, ಕಡಬದ ಸ್ಥಳೀಯ ಮೊಬೈಲ್ ವ್ಯಾಪಾರಸ್ಥರು ಉಪಸ್ಥಿತರಿದ್ದರು. ಆನ್‌ಲೈನ್‌ನಲ್ಲಿ ಖರೀದಿಸಿದ ಮೊಬೈಲ್‌ನ ಗ್ಯಾರೆಂಟಿ ಪಿರೇಡ್‌ನಲ್ಲಿ ಸರ್ವೀಸ್‌ಗಳನ್ನು ನಮ್ಮ ಯಾವುದೇ ವ್ಯಾಪಾರಸ್ಥರು ಮಾಡಬಾರದು ಮತ್ತು ಕರೆನ್ಸಿ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು.

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ ನಿರಂತರ ಟ್ವೀಟ್ ಮಾಡಿ ಜನಾಭಿಪ್ರಾಯ ಮೂಡಿಸಿ, ನಮ್ಮ ನ್ಯಾಯವಾದ ಬೇಡಿಕೆಯನ್ನು ಸರಕಾರಕ್ಕೆ ಮುಟ್ಟುವಂತೆ ಮಾಡಬೇಕಾಗಿದೆ. ಈ ಮೂಲಕ ಎಐ ಎಮ್ ಆರ್ ಎ ವನ್ನು ಬಲಿಷ್ಠ ಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನ ನಮಗೆ ಮೊಬೈಲ್ ಕೊಡುತ್ತಿರುವ ಕಂಪೆನಿಗಳಿಂದ ನಾವು ಪೆಟ್ಡು ತಿನ್ನುತ್ತೇವೆ. ಆನ್ ಲೈನ್ ಮೂಲಕ ನಮ್ಮನ್ನು ಓಡಿಸುವ ಷಡ್ಯಂತ್ರ ನಡೆಯುತ್ತಿದೆ. ಯಾಕೆಂದರೆ ಮೊಬೈಲ್ ಕಂಪೆನಿಗಳು ಮ್ಯಾಕ್ಸಿಮಮ್ ಆಗಿ ಆನ್‌ಲೈನ್‌ಗೆ ಸಪೋರ್ಟ್ ಮಾಡುತ್ತವೆ. ಮಾರ್ಕೆಟ್‌ನಲ್ಲಿ ಸ್ಪರ್ಧೆಯ ಬದಲು ಮುಂದೆ ವ್ಯಾಪಾರ ಆನ್‌ಲೈಗೆ ಆಗದ ಹಾಗೆ ಮಾಡಬೇಕು. ಮೊದಲು ನಮ್ಮಲ್ಲಿ ಮೊಬೈಲ್ ವ್ಯಾಪಾರ ಆದ ಬಳಿಕ ಉಳಿದರೆ ಮತ್ತೆ ಆನ್ ಲೈನ್ ಮಾರಾಟ ಮಾಡಲಿ. ಇಲ್ಲವಾದರೆ ಮುಂದಿನ ದಿನ ನಾವು ಮೊಬೈಲ್ ಮಾರಾಟದ ಬದಲು ಮೊಬೈಲ್ ಕವರ್ ಮಾರಾಟ ಮಾಡುವ ದಿನ ಬರಬಹುದು.
ಮುನೀರ್ ಜಿಲ್ಲಾ ಕಾರ್ಯದರ್ಶಿ
ಎಐ ಎಮ್ ಆರ್ ಎ

ಪುತ್ತೂರು, ಸುಳ್ಯ, ಕಡಬಕ್ಕೆ ಪದಾಧಿಕಾರಿಗಳ ಆಯ್ಕೆ
ದ.ಕ ಮತ್ತು ಉಡುಪಿ ಜಿಲ್ಲಾ ಅಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಷಿಯೇಶನ್‌ನ ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿಗೆ ಸಂಬಂಧಿಸಿ ಪದಾಧಿಕಾರಿಗಳ ಆಯ್ಕೆಯನ್ನು ಅವಿಭಜಿತ ಜಿಲ್ಲಾ ಅಸೋಸಿಯೇಷನ್ ಮೂಲಕ ನಡೆಯಿತು. ಅಧ್ಯಕ್ಷರಾಗಿ ಗೌರವಾಧ್ಯಕ್ಷರಾಗಿ ಮೊಬೈಲ್ ಕೇರ್‌ನ ಸಿರಾಜ್, ಅಧ್ಯಕ್ಷರಾಗಿ ಸೆಲ್ ಝೋನ್‌ನ ಪ್ರವೀಣ್ ಅಮೈ, ಕಾರ್ಯದರ್ಶಿಯಾಗಿ ಈಫಾ ಮೊಬೈಲ್‌ನ ಪ್ರಕಾಶ್, ಖಜಾಂಜಿಯಾಗಿ ಮೊಬೈಲ್ ಟ್ರಾಕ್ ಪುತ್ತೂರು ಇದರ ರಿಯಾಝ್, ಉಪಾಧ್ಯಕ್ಷರಾಗಿ ಶ್ರೀನಿಧಿ ಮೊಬೈಲ್ ಉಪ್ಪಿನಂಗಡಿಯ ಜಯಪ್ರಕಾಶ್, ಜತೆ ಕಾರ್ಯದರ್ಶಿ ಎಸ್ ೨ ಮೊಬೈಲ್ ಉಪ್ಪಿನಂಗಡಿಯ ಶುಕೂರು, ಉಪಾಧ್ಯಕ್ಷರಾಗಿ ಕುಂಬ್ರ ಡ್ರೀಮ್ಸ್ ಮೊಬೈಲ್‌ನ ಅಜ್ಹರ್ ಷಾ, ಜೊತೆಕಾರ್ಯದರ್ಶಿ ಈಶ್ವರಮಂಗಲ ಪಂಚಮುಖಿ ಮೊಬೈಲ್ಸ್‌ನ ಮನೋಜ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಮ್ಯೂಸಿಕ್ ವರ್ಲ್ಡ್‌ನ ಚೇತನ್ ಕುಮಾರ್, ಕಡಬಕ್ಕೆ ಸಂಬಂಧಿಸಿ ಉಪಾಧ್ಯಕ್ಷರಾಗಿ ಕಡಬ ದುರ್ಗಾಂಬ ಮೊಬೈಲ್‌ನ ದಯಾನಂದ , ಜೊತೆ ಕಾರ್ಯದರ್ಶಿಯಾಗಿ ಕಡಬದ ತನುಮೊಬೈಲ್‌ನ ಅಬ್ದುಲ್ ರಜಾಕ್, ವಿಟ್ಲಕ್ಕೆ ಸಂಬಂಧಿಸಿ ಉಪಾಧ್ಯಕ್ಷರಾಗಿ ಎಮ್.ಜಿ. ಮೊಬೈಲ್‌ನ ತೌಸಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮಾತ ಮೊಬೈಲ್‌ನ ಕಾರ್ತಿಕ್, ಸುಳ್ಯಕ್ಕೆ ಸಂಬಂಧಿಸಿ ಸುಳ್ಯಕ್ಕೆ ಸಂಬಂಧಿಸಿ ಉಪಾಧ್ಯಕ್ಷರಾಗಿ ಆರ್‌ಕುಟ್ ಮೊಬೈಲ್‌ನ ಶಬೀರ್, ಜೊತೆಕಾರ್ಯದರ್ಶಿಯಾಗಿ ತರಂಗ್ ಮೊಬೈಲ್‌ನ ಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.