Breaking News

ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘನೆ..! 40 ಮಂದಿ ವಿರುದ್ಧ ಪ್ರಕರಣ ದಾಖಲು !!

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕ್ವಾರಂಟೈನ್ ನಿಯಮ ಉಲ್ಲಂಸಿ ತಿರುಗಾಡಿರುವ 40 ಮಂದಿಯ ವಿರುದ್ಧ ಪುತ್ತೂರು ತಹಸಿಲ್ದಾರ್ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್-19ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಕ್ವಾರಂಟೈನ್‌ಗೊಳಗಾಗುವ ವ್ಯಕ್ತಿಗಳ ಬಗ್ಗೆ ಪರಿಶೀಲಿಸಿ ಕ್ವಾರಂಟೈನ್ ವಾಚ್ ಮೊಬೈಲ್ ಆಪ್‌ನಲ್ಲಿ ಅಪ್ರೋಡ್ ಮಾಡಲಾಗುತ್ತಿದೆ.ಅದರಂತೆ ಕ್ವಾರಂಟೈನ್ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ಜಿಪಿಎಸ್ ಟ್ರೇಸ್ ಆಗುತ್ತಿರುವ ಕಾರಣ ಆರೋಪಿತರು ಕ್ವಾರಂಟೈನ್‌ನಲ್ಲಿರದೆ ಮನೆಯಿಂದ ಹೊರ ಹೋಗುತ್ತಿರುವುದು ನಮೂದಾಗಿದ್ದು, ಆರೋಪಿತರ ವಿವರ ಜಿಲ್ಲಾಧಿಕಾರಿಯವರ ಕಛೇರಿಯಿಂದ ಸ್ವೀಕೃತವಾಗಿದೆ.ಆರೋಪಿಗಳು ಸಾಂಕ್ರಾಮಿಕ ರೋಗ ಕೊರೋನಾ ವೈರಸ್ ರೋಗ ತಡೆಗಟ್ಟುವಿಕೆಯ ನಿಯಮ ಉಲ್ಲಂಘನೆ ಮಾಡಿ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣರಾಗಿರುವುದಾಗಿ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಸಿಲ್ದಾರ್ ರಮೇಶ್‌ಬಾಬು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಆರೋಪಿತ 40 ಮಂದಿ ವಿರುದ್ಧ ಕಲಂ 269,270,271 ಐಪಿಸಿ ಮತ್ತು ಕಲಂ5(1)ಕರ್ನಾಟಕ ಸಾಂಕ್ರಾಮಿಕ ರೋಗ ಅಧ್ಯಾದೇಶ-2020ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳ ವಿವರ ಇನ್ನಷ್ಟೆ ಲಭಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.