ನೂಜಿಬಾಳ್ತಿಲ ದಲ್ಲಿ ಉಚಿತ ಆಯುಷ್ಮಾನ್ ನೋಂದಣಿ

Puttur_Advt_NewsUnder_1
Puttur_Advt_NewsUnder_1

ಕಡಬ: ಸುಳ್ಯಮಂಡಲ ಬಿ ಜೆ ಪಿ ಯುವ ಮೋರ್ಚಾದ ವತಿಯಿಂದ ನೂಜಿಬಾಳ್ತಿಲದ ಕಲ್ಲುಗುಡ್ಡೆ ಸಿ ಎ ಬ್ಯಾಂಕ್ ನಲ್ಲಿ‌ ಆ.29ರಂದು ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಕೊಡಲಾಯಿತು. ಕಾರ್ಯಕ್ರಮವನ್ನು ಕಡಬ. ತಾಲೂಕು ಪಂಚಾಯತ್ ನೂತನ ಅದ್ಯಕ್ಷೆ ರಾಜೇಶ್ವರಿ ಕನ್ಯಾಮಂಗಳರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಸುಳ್ಯ ಮಂಡಲ ಬಿ ಜೆ ಪಿ ಕಿಸಾನ್ ಮೋರ್ಚಾದ ಅದ್ಯಕ್ಷ ಕಡಬ ಸಿ ಎ ಬ್ಯಾಂಕಿನ ಅದ್ಯಕ್ಷ ರಮೇಶ ಕಲ್ಪುರೆ ಅದ್ಯಕ್ಷತೆ ವಹಿಸಿದರು. ನೂತನ ಕಡಬ ತಾ ಪಂ ಉಪಾಧ್ಯಕ್ಷೆ ಜಯಂತಿ ಆರ್ ಗೌಡ ರವರು ಶುಭ ಹಾರೈಸಿದರು. ಸುಳ್ಯ ಮಂಡಲ ಬಿ ಜೆ ಪಿ ಸದಸ್ಯ ನೂಜಿಬಾಳ್ತಿಲ ರೆಂಜಿಲಾಡಿ ಬಿ ಜೆ ಪಿ ಗ್ರಾಮ ಸಮಿತಿ ಉಸ್ತುವಾರಿ ಚಂದ್ರಶೇಖರ ಗೌಡ ಹಳೆನೂಜಿ,  ಸುಳ್ಯ ಮಂಡಲ. ಬಿ ಜೆ ಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯನ್ ಕೆ, ಕಡಬ ಸಿ ಎ ಬ್ಯಾಂಕಿನ ಅದ್ಯಕ್ಷ ರಮೇಶ ಕಲ್ಪುರೆ, ಸುಳ್ಯ ಬಿ ಜೆ ಪಿ ಮಂಡಲ ಯುವ ಮೋರ್ಚಾದ ಸದಸ್ಯ ಜಯಂತ ಬರೆಮೇಲು, ನೂಜಿ ಬಾಳ್ತಿಲ ಗ್ರಾ ಪಂ ಮಾಜಿ ಉಪಾಧ್ಯಕ್ಷ, ಕಿಟ್ಟು ಕೆ ಮಾಜಿ ಸದಸ್ಯ ಹರೀಶ್ ಯನ್, ರಜಿತಾ ಕೆ, ರಾಮಚಂದ್ರ ಗೌಡ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ ಪಿ, ಬಿ ಜೆ ಪಿ ಸದಸ್ಯ ಉಮೇಶ್ ಶೆಟ್ಟಿ, ಸಾಯಿರಾಂ  ಕಡಬ ಸೇವಾಸಿಂದು ಸಾಧನಾ ಎಂಟರ್ ಪ್ರೈಸಸ್ ನ ರಚನ್, ಉ.ಹಿ.ಪ್ರಾ ಶಾಲಾ ನೂಜಿಬಾಲ್ತಿಳ ಶಾಲಾ ಎಸ್‌ ಡಿ ಎಮ್‌ ಸಿ ಮಾಜಿ ಅದ್ಯಕ್ಷ ಮೋನಪ್ಪ ಗೌಡ ಅರಿಮಜಲು, ರವೀಂದ್ರ ನಿಡ್ಡೊ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ಮಂಡಲ ಯುವ ಮೋರ್ಚಾ ಅದ್ಯಕ್ಷ ಕೃಷ್ಣ, ಉಪಾಧ್ಯಕ್ಷ ಉಮೇಶ್ ಸಾಕೊಟೆಜಾಲು, ನೂಜಿಬಾಳ್ತಿಲ 30ನೇ ಬಿ ಜೆ ಪಿ ಬೂತ್ ಸಮಿತಿ ಅದ್ಯಕ್ಷ ರವಿಪ್ರಸಾದ್ ಕರೆಂಬಿಲ, ಅಯುಷ್ಮಾನ್ ಕಾರ್ಡ್ ಬಗ್ಗೆ ಗ್ರಾಮಸ್ಥರಿಂದ ದಾಖಲೆ ಪಡೆದುಕೊಂಡು ಹೆಸರು ನೊಂದಾಯಿಸಿಕೊಂಡರು. ಸುಳ್ಯ ಮಂಡಲ  ದೀಕ್ಷಿತ್ ,ಪ್ರಸಾದ್, ಅಜಿತ್ ಆರ್ತಿಲ, ಆಯುಷ್ಮಾನ್ ನೋಂದಣಿ ಮಾಡಿಕೊಂಡು ಸ್ಥಳದಲ್ಲಿಯೇ ಕಾರ್ಡ್ ವಿತರಿಸಲು ಸಹಕರಿಸಿದರು. ಕಲ್ಲುಗುಡ್ಡೆ ಹೊನ್ನಮ್ಮ,ಕುಶಾಲಪ್ಪ ಗೌಡರಿಗೆ ತಾ ಪಂ ಅದ್ಯಕ್ಷೆ ರಾಜೇಶ್ವರಿಯವರು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಳ್ಯ ಮಂಡಲ ಯುವ ಮೋರ್ಚಾದ ಸದಸ್ಯ ಜಯಂತ ಬರೆಮೇಲು ಸ್ವಾಗಿತಿಸಿ ನೂಜಿಬಾಳ್ತಿಲ ಗ್ರಾ ಪಂ ಮಾಜಿ ಸದಸ್ಯೆ ರಜಿತಾ ಪದ್ಮನಾಭ ವಂದಿಸಿದರು. ಕಿಟ್ಟು ಕೆ ಪ್ರಾರ್ಥಿಸಿದರು. ಕಾರ್ಯದರ್ಶಿ ಸಹಕರಿಸಿದರು. ಬಿಜೆಪಿ ಸುಳ್ಯ ಮಂಡಲ, ಯುವ ಮೋರ್ಚಾದ ಸದಸ್ಯ ಸಿವಿಲ್ ಇಂಜಿನಿಯರ್ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತಾ.ಪಂ ಅಧ್ಯಕ್ಷೆ  ಅದ್ಯಕ್ಷೆ ರಾಜೇಶ್ವರಿ ಕನ್ಯಾಮಂಗಳ , ಉಪಾಧ್ಯಕ್ಷೆ ಜಯಂತಿ ಆರ್ ಗೌಡ ಉ ಹಿ ಪ್ರಾ ನೂಜಿಬಾಳ್ತಿಲ  ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.