Breaking News

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ನಿಧನ

Puttur_Advt_NewsUnder_1
Puttur_Advt_NewsUnder_1

 

ವಿಟ್ಲ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ, ಅಡಿಕೆ ಪತ್ರಿಕೆ ಪ್ರಕಾಶಕ, ಸಂಪಾದಕ ಮಂಚಿ ಶ್ರೀನಿವಾಸ ಆಚಾರ್ (73 ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.29ರಂದು  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಮಂಕುಡೆ ಮನೆತನದ ಮಂಚಿ ಶ್ರೀನಿವಾಸ ಆಚಾರ್ ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಪ್ರಕಾಶಕ ಹಾಗೂ ಸಂಪಾದಕರಾಗಿದ್ದರು.  ಪುತ್ತೂರಿನಲ್ಲಿ ಕಚೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ಕಳೆದ ಮೂರು ದಶಕಗಳಿಂದ ಅವರು ಅಡಿಕೆ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ, ಅಡಿಕೆ ಪತ್ರಿಕೆಯ ನಿರ್ವಹಣೆಗಾಗಿ ತಮ್ಮ ಗಣನೀಯ ಕೊಡುಗೆ ಕೊಡುತ್ತಾ ಬಂದಿದ್ದರು.   ಮಂಗಳೂರಿನ ಯೆಯ್ಯಾಡಿಯಲ್ಲಿ ಆಚಾರ್ ಚಿಕ್ಕ ಉದ್ಯಮವನ್ನು ನಡೆಸುತ್ತಿದ್ದರು. ಪುತ್ತೂರಿನಲ್ಲಿ ಕ್ಯಾಂಪ್ಕೋ ವತಿಯಿಂದ ಜರುಗಿದ ಯಂತ್ರಮೇಳಗಳಲ್ಲಿ ಸಕ್ರಿಯವಾಗಿದ್ದರು. ದಕ್ಷಿಣ ಕನ್ನಡದ ಎಲ್ಲಾ ಕೃಷಿ ಸಂಸ್ಥೆಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ತನ್ನ ಮನೆಯ ಒಂದು ಪಾರ್ಶ್ವದಲ್ಲಿ ಪಾರಂಪರಿಕ ಹಳೆಯ ವಸ್ತುಗಳ ಚಿಕ್ಕ ಮ್ಯೂಸಿಯಂ ಮಾಡಿದ್ದರು. ದೇಶ, ವಿದೇಶಗಳ ಅಪ್ಡೇಟ್ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ತನ್ನ ಕುಟುಂಬದ ಕುರಿತಾದ ವಂಶವೃಕ್ಷವನ್ನು ಸಿದ್ಧಪಡಿಸಿದ್ದರು. ಕುಂಟುಂಬ ಸದಸ್ಯರ ಪರಸ್ಪರ ಸಂವಹನಕ್ಕಾಗಿ ’ಪುಳ್ಳಿ ಸಂಘ’ ಎನ್ನುವ ಅವ್ಯಕ್ತ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಕೆಲವು ವಾರ್ತಾಪತ್ರವನ್ನು ಪ್ರಕಾಶಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.