ಅಂಗನವಾಡಿ ಕೇಂದ್ರ ಮಕ್ಕಳ ಮೊದಲ ಜ್ಞಾನ ಮಂದಿರ: ಪೇರಲ್ತಡ್ಕ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಅಂಗನವಾಡಿ ಕೇಂದ್ರ ಎಂಬುದು ಊರಿಗೆ ಜ್ಞಾನ ದೇಗುಲ ಇದ್ದಂತೆ. ಪುಟಾಣಿ ಮಕ್ಕಳಿಗೆ ಅಂಗನವಾಡಿ ಕೇಂದ್ರ ಮೊದಲ ಜ್ಞಾನ ಮಂದಿರವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಇರ್ದೆ ಗ್ರಾಮದ ಪೇರಲ್ತಡ್ಕ ಎಂಬಲ್ಲಿ ನರೇಗಾ ಯೋಜನೆಯ 5 ಲಕ್ಷ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 3 ಲಕ್ಷ ಒಟ್ಟು 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಅಂಗನವಾಡಿ ಕೆಂದ್ರವನ್ನು ಆ. 29 ರಂದು ಉದ್ಘಾಟಿಸಿ ಮಾತನಾಡಿದರು. ಬಾಲವಿಕಾಸ ಸಮಿತಿಯೊಂದಿಗೆ ಊರಿಗೆ ಊರೇ ಸೇರಿ ಕೊಂಡು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಈ ಕೇಂದ್ರ ಈ ಭಾಗದಲ್ಲಿ ಒಂದು ಉತ್ತಮ ಕೇಂದ್ರವಾಗಿ ಮೂಡಿ ಬರಲಿ ಎಂದು ಹೇಳಿ ಶುಭ ಹಾರೈಸಿದರು.
 
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೆಲ್ವೀಚಾರಕಿ ಭಾರತಿ, ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬೆಟ್ಟಂಪಾಡಿ ಪಿಡಿಒ ಶಾಂತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾಣಾಜೆ ವಲಯ ಮೆಲ್ವೀಚಾರಕಿ ನಾಗರತ್ನ,  ಬಾಲ ವಿಕಾಸ ಸಮಿತಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು  ಮಕ್ಕಳ ಪೋಷಕರು, ಅಂಗನವಾಡಿ ಪುಟಾಣಿಗಳು, ಊರವರು  ಪಾಲ್ಗೊಂಡರು.
ಅಂಗನವಾಡಿ ಕಾರ್ಯಕರ್ತೆ ನೀತಾ ಸ್ವಾಗತಿಸಿ, ಬಾಲವಿಕಾಸ ಸಮಿತಿ ಅಧ್ಯಕ್ಷ ರಕ್ಷಣ್ ರೈ ವಂದಿಸಿದರು. ಚಂದ್ರಶೇಖರ ರೈ ಬಾಲ್ಯೊಟ್ಟುಗುತ್ತು ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಸಹಾಯಕಿ ಲಲಿತ ಮತ್ತೀತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.