ಹಿಂಜಾವೇಯ ಕಾರ್ತಿಕ್ ಮೇರ್ಲ ಹತ್ಯೆಗೀಡಾಗಿ ಒಂದು ವರ್ಷ | ಸೆ.3ಕ್ಕೆ ಸಂಪ್ಯದಲ್ಲಿ ಲೋಕಾರ್ಪಣೆಯಾಗಲಿದೆ ಸ್ಮಾರಕ ಬಸ್ ತಂಗುದಾಣ 

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂಜಾವೇ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಅವರ ಬಲಿದಾನದ ದಿನವನ್ನು ಹಿಂದೂ ಜಾಗರಣಾ ವೇದಿಕೆ ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದು, ಅವರ ಹೆಸರು ಶಾಶ್ವತವಾಗಿ ಉಳಿಯಬೇಕು ಮತ್ತು ಸಾರ್ವಜನಿಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಸಂಪ್ಯದಲ್ಲಿ ಕಾರ್ತಿಕ್ ಮೇರ್ಲ ಸ್ಮಾರಕ ಸಾರ್ವಜನಿಕ ಬಸ್ ತಂಗುದಾಣ ಸೆ.3ರಂದು ಲೋಕಾರ್ಪಣೆ ಆಗಲಿದೆ. 

ಕಾರ್ತಿಕ್ ಮೇರ್ಲ ಬಲಿದಾನ ಆದ ಸ್ಥಳದಲ್ಲೇ ಸ್ಮಾರಕ ಬಸ್ ತುಂಗುದಾಣ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಸುಮಾರು ರೂ. 3ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣದ ಕೆಲಸ ಕಾರ್ಯ ನಡೆಯುತ್ತಿದೆ. ಈಗಾಗಲೇ ಕಾರ್ಕಳದಿಂದ ಶಿಲೆ ಕಲ್ಲಿನ ಕೆತ್ತನೆ ಚಿತ್ರಗಳನ್ನೊಳಗೊಂಡ ನಾಲ್ಕು ಆಧಾರ ಕಂಬಗಳನ್ನು ತಂದು ಕ್ರೈನ್ ಮೂಲಕ ಅಳವಡಿಸಲಾಗಿದೆ. ತಂಗುದಾಣದ ಹಾಸು ಸುಂದರಮಯವಾಗಲಿದ್ದು, ಅದರ ಕೆಲಸ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಬಸ್ ತಂಗುದಾಣ ಲೋಕಾರ್ಪಣೆ ಆಗುವ ದಿನವೇ  ಉಚಿತ ಆಯುಷ್ಮನ್ ಕಾರ್ಡ್ ಶಿಬಿರವೂ ನಡೆಯಲಿದೆ. ಬಸ್ ತಂಗುದಾಣವನ್ನು ಹಿಂಜಾವೇ ರಾಜ್ಯ ಪ್ರಮುಖರು, ಸಂಘ ಪರಿವಾರದ ಹಿರಿಯರು, ಶಾಸಕರು, ಜಿ.ಪಂ, ತಾ.ಪಂ ಸದಸ್ಯರು ಒಟ್ಟಾಗಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹಿಂಜಾವೇಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ತಿಳಿಸಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.