Breaking News

ಎರಡು ದಿನದ ಹಿಂದೆ ಬಾಲಕನಿಗೆ ಡಿಕ್ಕಿಯಾದ ಕಾರು – ಸಿ.ಸಿ.ಕ್ಯಾಮರದಲ್ಲಿ ಸೆರೆಯಾದ ಅಪಘಾತದ ದೃಶ್ಯ ವೈರಲ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದಿನದ ಹಿಂದೆ ರಸ್ತೆ ದಾಟುತ್ತಿದ್ದ ಬಾಲಕನೊಬ್ಬನಿಗೆ ಕಾರೊಂದು ಡಿಕ್ಕಿಯಾದ ಘಟನೆಗೆ ಸಂಬಂಧಿಸಿ ಸಿ.ಸಿ.ಕ್ಯಾಮರದಲ್ಲಿ ಸೆರೆಯಾದ ಅಪಘಾತದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಪಘಾತಕ್ಕೆ ಸಂಬಂಧಿಸಿ ಇತ್ತಂಡದವರು ಮಾತುಕತೆಯಲ್ಲಿ ಮುಗಿಸಿ ಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಆ.28ರಂದು ಈ ಅಪಘಾತ ನಡೆದಿದ್ದು, ದೇರಳಕಟ್ಟೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ಮಡಿಕೇರಿಯ ತನ್ನ ಮನೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಸಂಪ್ಯ ಬಳಿ ಸ್ಥಳೀಯ 10 ವರ್ಷ ಪ್ರಾಯದ ಬಾಲಕನೊಬ್ಬ ರಸ್ತೆ ದಾಟಿದ ವೇಳೆ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ಡಿಕ್ಕಯ ರಭಸಕ್ಕೆ ಬಾಲಕ ಎಸೆಯಲ್ಪಟ್ಟು ರಸ್ತೆ ಬಿದ್ದಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ ಸವಾರರಿಗೆ ತಮ್ಮ ಬೈಕ್ ಹತೋಟಿಗೆ ಸಿಗದೆ ಡಿಕ್ಕಿಯಾಗಿರುವ ದೃಶ್ಯ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದೆ. ತಕ್ಷಣ ಕಾರಿನಿಂದ ಇಳಿದ ಮಹಿಳೆ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಬಾಲಕನ ಚಿಕಿತ್ಸಾ ಜವಾಬ್ದಾರಿ ವಹಿಸಿಕೊಂಡ ಕಾರಿನ ಚಾಲಕಿ ಮಹಿಳೆ ಮತ್ತು ಬಾಲಕನ ಮನೆಯವರು ಘಟನೆಯನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ. ಗಾಯಗೊಂಡ ಬಾಲಕ ಚೇತರಿಕೆ ಗೊಂಡಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ವಿಚಾರ ಠಾಣಾ ಮೆಟ್ಟಲೇರಿಲ್ಲ ಎಂದು ತಿಳಿದು ಬಂದಿದೆ. ಆದರೆ ಇದೀಗ ಸಿ.ಸಿ.ಕ್ಯಾಮರದಲ್ಲಿ ಸೆರೆಯಾದ ಅಪಘಾತದ ದೃಶ್ಯ ಮಾತ್ರ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.