Breaking News

ವಿಪಿನ್ ಕುಮಾರ್ ಅವರಿಗೆ ಸಹಪಾಠಿಗಳಿಂದ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ದರ್ಬೆಯ ಮಂಗಳಾಮೃತ ಮಂದಿರದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ವಿಪಿನ್ ಕುಮಾರ್ ಅವರಿಗೆ ಅವರ ಸಹಪಾಠಿಗಳ ವತಿಯಿಂದ ಆ.30ರಂದು ಶ್ರದ್ಧಾಂಜಲಿ ಸಭೆ ನಡೆಯಿತು

ಈ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನ ಕಾಲೇಜ್ ನ 1983-84 ರ ಸಾಲಿನ ಬಿ.ಕಾಂ ವಿಭಾಗದ ಅವರ ಸಹಪಾಠಿಗಳು ಹಾಗೂ ವಿಪಿನ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಿ, ವಿಪಿನ್ ಆತ್ಮಕ್ಕೆ ಚಿರ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಲವಾರು ಗೆಳೆಯರು ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು. ನೆನಪಿನ ನುಡಿ ನಮನದ ಜೊತೆಗೆ ವಿಪಿನ್ ಕುಮಾರ್ ಅವರ ಭಾವಚಿತ್ರವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಕೆಲವು ತಿಂಗಳ ಹಿಂದೆ  ನಿಧನರಾದ ಮಹಾಲಿಂಗ ಗಣರಾಜ ಪ್ರಸಾದ್ ಅವರಿಗೂ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು.

ಬಳಿಕ ಪುತ್ತೂರಿನ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮತ್ತು ಪುತ್ತೂರಿನ ಕರ್ಮಲದ “ಪ್ರಜ್ಞಾ” ವಿಶೇಷ ಚೇತನ ಮಕ್ಕಳ ಸಂಸ್ಥೆಗೆ ಧನಸಹಾಯ ನೀಡಲಾಯಿತು.

ಈ ಕಾರ್ಯವನ್ನು ಗೂಗಲ್ ಮೀಟ್ ನೇರ ಪ್ರಸಾರದ ಮೂಲಕ ದೇಶಾದ್ಯಂತ ಇರುವ ಅವರ ಇತರ ಸಹಪಾಠಿಗಳು ವೀಕ್ಷಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.