ಅಕ್ಷಯ್ ರೈ ದಂಬೆಕ್ಕಾನ ಪರಿಕಲ್ಪನೆಯ `ವಿಜಯಿ ಭವ’ ಕಿರುಚಿತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
  • ಕೊರೋನ ಬಗ್ಗೆ ಸಂದೇಶ ಸಾರುವ ಒಳ್ಳೆಯ ಚಿತ್ರ: ಡಿ.ವಿ.ಎಸ್

ಪುತ್ತೂರು: ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನ ಮಹಾಮಾರಿಯಿಂದ ನಾವು ಹಾಗೂ ನಮ್ಮವರನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿಜಯಿ ಭವ ಒಂದು ಒಳ್ಳೆಯ ಸಂದೇಶವನ್ನು ಕೊಡುವ ಕಿರುಚಿತ್ರವಾಗಿದೆ. ಇಡೀ ತಂಡದ ಶ್ರಮ ಸಾರ್ಥಕವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

ಅವರು ಆ.31ರಂದು ಬೆಂಗಳೂರು ಡಾಲರ್ಸ್ ಕಾಲನಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಕ್ಷಯ್ ರೈ ದಂಬೆಕ್ಕಾನ ಪರಿಕಲ್ಪನೆಯ `ವಿಜಯಿ ಭವ’ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ, ಕಾರ್ಪೋರೇಟ್ ಶ್ರೀನಿವಾಸ್, ಬಿಜೆಪಿ ಬೆಂಗಳೂರು ಜಿಲ್ಲಾಧ್ಯಕ್ಷ ನಾರಾಯಣ್ ಬಿ, ಕೆ.ಆರ್.ಪುರಂ ತಾಲೂಕು ಬಿಜೆಪಿ ಅಧ್ಯಕ್ಷ ಶಿವರಾಜ್, ಬಿಜೆಪಿ ಯುವ ಮೋರ್ಛಾ ಬೆಂಗಳೂರು ಜಿಲ್ಲಾಧ್ಯಕ್ಷ ಪ್ರಶಾಂತ್ ಗೌಡ, ದಕ್ಷಿಣ ಅಧ್ಯಕ್ಷ ಅಭಿಷೇಕ್ ರೆಡ್ಡಿ, ಬಿಬಿಎಂಪಿ ಕಾರ್ಪೋರೇಟ್‌ಗಳಾದ ಬಂಡೆ ರಾಜು ಎಸ್.ಪಿ, ಪ್ರಸಾದ್ ಕುಮಾರ್, ನಾಗರಾಜ್ ಮತ್ತು ರಾರಾಜಿನಗರದ ಮಾಜಿ ಶಾಸಕ ನರೇಂದ್ರ ಬಾಬು, ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ್ ಕೌಸಲೆ ಮತ್ತಿತರರು ಉಪಸ್ಥಿತರಿದ್ದರು. ರತನ್ ಪೂಜಾರಿ ನಿರ್ದೇಶನ, ಪ್ರಮೋದ್ ಕುಮಾರ್ ಮತ್ತು ರಘು ಶೆಟ್ಟಿಯವರು ಛಾಯಾಗ್ರಹಣವಿದೆ. ಚಿತ್ರದಲ್ಲಿ ರಾಮಣ್ಣ ಗೌಡ ಮಾಡಾವು, ನಯನಾ ಶರತ್ ಕುಮಾರ್, ಲೆಹರಾದಿತ್ಯ, ಲಹರಿ ನಟಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.