ಸಾರ್ವಜನಿಕ ಉದ್ದೇಶಗಳಿಗೆ ಪ್ರಥಮ ಆಧ್ಯತೆ ನೀಡಿ | ಕಂದಾಯ ಇಲಾಖಾಧಿಕಾರಿಗಳ ಸಭೆಯಲ್ಲಿ ಶಾಸಕ ಮಠಂದೂರು ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾರ್ವಜನಿಕ ಉದ್ದೇಶಗಳಿಗೆ ಆವಶ್ಯಕತೆಯಿರುವ ಕೆಲಸ ಕಾರ್ಯಗಳನ್ನು ಪ್ರಥಮ ಆಧ್ಯತೆ ನೀಡಿ ಪೂರ್ಣಗೊಳಿಸುವಂತೆ ಶಾಸಕ ಸಂಜೀವ ಮಠಂದೂರು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ದರ್ಬೆ ಪ್ರವಾಸಿ ಮಂದಿರದಲ್ಲಿ ಆ.೩೧ರಂದು ನಡೆದ ಕಂದಾಯ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಸೂಚನೆ ನೀಡಿದರು. ಮನೆ ನೀವೇಶನಕ್ಕೆ ಜಾಗ ಗುರುತಿಸಿ ಮಂಜೂರುಗೊಳಿಸುವುದು, ಅಲ್ಪ ಸಂಖ್ಯಾತ ನಿಗಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಿಲಯ, ಪಾಲಿಟೆಕ್ನಿಕ್, ಸಾಮಾನ್ಯ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಜಾಗ ಆವಶಯಕತೆಯಿದ್ದು ಶೀಘ್ರ ಗುರುತಿಸಿಕೊಡುವಂತೆ ಅವರು ಸರ್ವೆಯರ್ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಫೈಲ್ ಕಚೇರಿಯಿಂದ ಕಚೇರಿಗೆ ಹೋಗಲು 3 ತಿಂಗಳು:
ಚಿಕ್ಕಮುಡ್ನೂರಿನಲ್ಲಿ ನಗರ ಸಭೆಗೆ ಮನೆ ನಿವೇಶನಕ್ಕೆ ಜಾಗ ಗುರುತಿಸಿದ್ದು ಅದನ್ನು ಸರ್ವೆ ಮಾಡಿಕೊಡುವಂತೆ ಸರ್ವೆಯರ್‌ಗೆ ಕಳೆದ ಜೂನ್ ತಿಂಗಳಲ್ಲಿ ಕಳುಹಿಸಲಾಗಿದೆ. ಆದರೆ ಇನ್ನೂ ಬಾಕಿಯಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ಶಾಸಕರ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಶಾಸಕರು, ದೆಹಲಿಯಿಂದ ಪುತ್ತೂರಿಗೆ ಬರಲು ೨೪ ಗಂಟೆ ಸಾಕಾಗುತ್ತದೆ. ಆದರೆ ಸಾರ್ವಜನಿಕ ಉದ್ದೇಶಕ್ಕೆ ಸಂಬಂಧಿಸಿದ ಫೈಲ್‌ಗಳು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಹೋಗಲು ೩ ತಿಂಗಳು ಬೇಕಾ ಎಂದು ಪ್ರಶ್ನಿಸಿದರು.

ಹೌಸ್ ಸೈಟ್‌ಗೆ 25ಎಕ್ರೆ ಬೇಡಿಕೆ:
ಮನೆ ನಿವೇಶನಕ್ಕೆ ಬಹಳಷ್ಟು ಬೇಡಿಕೆಯಿದ್ದು ಪುತ್ತೂರಿನಲ್ಲಿ ಮನೆ ನಿವೇಶನಕ್ಕೆ ಸುಮಾರು ೫೦೦೦ ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸುಮಾರು ೨೫ಎಕ್ರೆ ಜಾಗದ ಆವಶ್ಯಕತೆಯಿದೆ. ದೊಡ್ಡ ಉದ್ದೇಶಗಳಿಗೆ ದೊಡ್ಡ ನಿವೇಶನಗಳನ್ನು ಬಳಕೆ ಮಾಡಬೇಕು. ನಗರ ಸಭಾ ವ್ಯಾಪ್ತಿಯಲ್ಲಿ ಮನೆ ನಿವೇಶನಕ್ಕೆ ೧೦ ಎಕ್ರೆ ಜಾವನ್ನು ಶೀಘ್ರವೇ ಗುರುತಿಸಿಕೊಂಡುವುದು. ಕೆಮ್ಮಿಂಜೆಯಲ್ಲಿ‌ ಮನೆ‌ ನಿವೇಶಕ್ಕೆ‌ ಗುರುತಿಸಿದ‌ಜಾಗವನ್ನು ನಗರ ಸಭಾ ಅಧಿಕಾರಿಗಳು, ಕಂದಾಯ‌ ನಿರೀಕ್ಷಕರು ಹಾಗೂ ಸರ್ವೆಯರ್ ಪರಿಶೀಲನೆ ನಡೆಸಿ ಖಾದಿರಿಸಿಕೊಳ್ಳುವಂತೆ  ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಅಲ್ಪ ಸಂಖ್ಯಾತ ಇಲಾಖೆಯ ಬಹುಪಯೋಗಿ ಸೇವಾ ಕೇಂದ್ರದ ನಿರ್ಮಾಣಕ್ಕೆ ಪರ್ಲಡ್ಕದಲ್ಲಿ ಜಾಗ ಗುರುತಿಸಲಾಗಿದ್ದು ಅದಕ್ಕೆ ಮಾರ್ಗದ ಸಮಸ್ಯೆಯಿದೆ. ವಿದ್ಯಾರ್ಥಿ ನಿಲಯ, ವಸತಿಯುತ ಶಾಲೆ, ಪಾಲಿಟೆಕ್ನಿಕ್ ಮೊದಲಾದವುಗಳಿಗೆ ನಿವೇಶನದ ಆವಶ್ಯಕತೆಯಿದೆ ಎಂದು ಅಲ್ಪಸಂಖ್ಯಾತ ನಿಗಮದ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಿದ್ದು ಸೇವಾ ಕೇಂದ್ರ ನಿರ್ಮಾಣಕ್ಕೆ ಶೀಘ್ರವೇ 50 ಸೆಂಟ್ಸ್ ಜಾಗ ಕಾದಿರಿಸುವಂತೆ ಶಾಸಕರು‌ ತಿಳಿಸಿದರು.

ಪೊಲೀಸ್‌ ಇಲಾಖೆಯ ಎಸ್.ಪಿ ಕಚೇರಿಗೆ ಬನ್ನೂರಿನಲ್ಲಿ 2.5 ಎಕ್ರೆ ಜಾಗ ಗುರುತಿಸಲಾಗಿದ್ದು ಮಂಜೂರಾತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಕಂದಾಯ ಆದಿಕಾರಿಗಳು ಶಾಸಕ ಗಮನಕ್ಕೆ ತಂದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಶೀಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ ವಿಜಯ ವಿಕ್ರಂ, ಅಲ್ಪ ಸಂಖ್ಯಾತ ನಿಗಮದ ವಿಸ್ತರಣಾಧಿಕಾರಿ ಫಾರೂಕ್, ನಝೀರ್ ಹಾಗೂ ಗ್ರಾಮಕರಣಿಕರು ಸಭೆಯಲ್ಲಿ ಭಾಗವಹಿಸಿದ್ದರಸೂಚನೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.