ದೇವಕಾರ್ಯ ಗ್ರೂಪ್‌ನ ಆಹಾರ ಪೂರೈಕೆ ವ್ಯವಸ್ಥೆಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ಪರಿಶ್ರಮ ಮತ್ತು ಪ್ರಾಮಾಣಿಕತೆ ಮುಖ್ಯ : ಸುಬ್ರಹ್ಮಣ್ಯ ಭಟ್

ಪುತ್ತೂರು: ಪರಿಶ್ರಮ ಮತ್ತು ಪ್ರಾಮಾಣಿಕತೆ ಮನುಷ್ಯನನ್ನು ಉತ್ತುಂಗಕ್ಕೆ ಏರಿಸುತ್ತದೆ. ಮಾಡುವ ಕಾರ್ಯವನ್ನು ಸಮರ್ಪಕವಾಗಿ ಮತ್ತು ಶ್ರದ್ಧೆಯಿಂದ ಮಾಡಬೇಕಾದ್ದು ಅಗತ್ಯ. ನಿರಂತರವಾಗಿ ಗುಣಮಟ್ಟದ ಸೇವೆಯನ್ನು ಒದಗಿಸುವುದೇ ಉದ್ಯಮದ ಗುರಿಯಾಗಬೇಕು. ಆಗ ಯಶಸ್ಸು ತಾನಾಗಿಯೇ ಒಲಿದುಬರುತ್ತದೆ ಎಂದು ದೇವಕಾರ್ಯ ಆಹಾರೋತ್ಪನ್ನ ಘಟಕದ ಗೌರವ ಸಲಹೆಗಾರ ಸುಬ್ರಹ್ಮಣ್ಯ ಭಟ್ ಹೇಳಿದರು.

ಅವರು ಆ.31ರಂದು ಪರ್ಲಡ್ಕದಲ್ಲಿ ದೇವಕಾರ್ಯ ಗ್ರೂಪ್ ಇದರ ವತಿಯಿಂದ ಆರಂಭಿಸಲಾದ, ಕಚೇರಿ ಮತ್ತು ಮನೆಗಳಿಗೆ ತಲಪಿಸುವ ಮಧ್ಯಾಹ್ನದ ಮನೆ ಊಟ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಪುತ್ತೂರಿನಲ್ಲಿ ಮಧ್ಯಾಹ್ನದ ಊಟ ಆಹಾರ ಕಲ್ಪನೆ ವಿನೂತನವಾದದ್ದು. ಅನೇಕರಿಗೆ ಇದರ ಅಗತ್ಯವಿದೆ. ಕಚೇರಿಗೆ ಬರುವವರಿಗೆ ಮಧ್ಯಾಹ್ನದ ಮನೆ ಊಟ ಸಿದ್ಧಗೊಂಡು ಬಂದರೆ ತುಂಬ ಉಪಯುಕ್ತ ಅನಿಸುತ್ತದೆ. ಹಾಗೆಯೇ ಅನೇಕ ಮನೆಗಳಲ್ಲಿ ಏಕಾಂಗಿಯಾಗಿರುವ ವಯಸ್ಕರಿದ್ದಾರೆ. ಅಂತಹವರಿಗೆ ಊಟದ ವ್ಯವಸ್ಥೆ ಮಾಡುವುದು ಪುಣ್ಯದ ಕೆಲಸ. ಗುಣಮಟ್ಟದ ಆಹಾರವನ್ನು ಸಿದ್ಧಪಡಿಸುವುದು ಮತ್ತು ಸರಿಯಾದ ಸಮಯಕ್ಕೆ ತಲಪಿಸಿಕೊಡುವುದು ಆದ್ಯತೆಯ ಸಂಗತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪುತ್ತೂರಿನ ದಸ್ತಾವೇಜು ಬರಹಗಾರ ಕೃಷ್ಣ ಉಪಾಧ್ಯಾಯ, ಪುತ್ತೂರಿನ ಟಿವಿ ಕ್ಲಿನಿಕ್‌ನ ಮಾಲಿಕ ಸತ್ಯಶಂಕರ್ ಭಟ್, ದೇವಕಾರ್ಯ ಆಹಾರೋತ್ಪನ್ನ ಘಟಕದ ನಿರ್ವಾಹಕ ಆದರ್ಶ ವಿ, ದೇವಕಾರ್ಯ ಗ್ರೂಪನ ಸದಸ್ಯರಾದ ಸರ್ವೇಶ್ವರಿ ಹಾಗೂ ಸುಮಿತ್ರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.