Breaking News

ಪರ್ಲಡ್ಕ ಗೋಳಿಕಟ್ಟೆ ಮುಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಉಚಿತ ಆಯುಷ್ಮಾನ್ ನೋಂದಾವಣೆ, ಮಾಹಿತಿ ಅಭಿಯಾನ

Puttur_Advt_NewsUnder_1
Puttur_Advt_NewsUnder_1
  • ಲಾಭದ ಒಂದು ಭಾಗ ಸಮಾಜಕ್ಕೆ ಅರ್ಪಣೆ ಶ್ಲಾಘನೀಯ – ಅಬ್ದುಲ್ ರಶೀದ್ ರೆಹ್ಮಾನಿ
  • ದವಾ ಕೇ ಸಾತ್ ದುವಾ ಬಿ ಜಾಯಿಯೆ – ಸಲೀಮ್ ಸಾಗರ್

ಪುತ್ತೂರು: ವೆಲ್‌ನೆಸ್ ಹೆಲ್ಪ್‌ಲೈನ್ ಸಹಯೋಗದೊಂದಿಗೆ ಪರ್ಲಡ್ಕ ಗೋಳಿಕಟ್ಟೆ ಮುಯ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ಸರಕಾರದ ಯೋಜನೆಯಾದ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿವಿಧ ಸವಲತ್ತುಗಳ ಮಾಹಿತಿ ಅಭಿಯಾನ ಕಾರ್ಯಕ್ರಮ ಸೆ.೧ರಂದು ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ ರಶೀದ್ ರೆಹ್ಮಾನಿ ರವರು ದುವಾಃ ಆಶೀವರ್ಚನ ನೆರವೇರಿಸಿ, ಉದ್ಘಾಟಿಸಿದರು.

ಲಾಭದ ಒಂದು ಭಾಗ ಸಮಾಜಕ್ಕೆ ಅರ್ಪಣೆ ಶ್ಲಾಘನೀಯ:
ಮಸೀದಿಯ ಖತೀಬ್ ಅಬ್ದುಲ್ ರಶೀದ್ ರೆಹ್ಮಾನಿ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕೊರೋನಾ ವ್ಯಾಪಕವಾಗಿ ಹರಡಿದೆ. ಭಾರತದಲ್ಲಿ ಶನಿವಾರ ಒಂದೇ ದಿನ ಸುಮಾರು ೮೦ಸಾವಿರ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಜಗತ್ತಿನಲ್ಲಿ ೨.೫ ಕೋಟಿ ಜನ ಕೊರೋನಾ ಸೊಂಕಿತರಾಗಿದ್ದಾರೆ. ಇದು ಅತ್ಯಂತ ಖೇದಕರ ಸಂಗತಿ, ಆದರೆ ಈ ರೋಗವನ್ನೇ ಬಂಡವಾಳ ಶಾಹಿಗಳು ದುರುಪಯೋಗ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಅಗತ್ಯವಾಗಿ ಬೇಕಾದ ಮಾರ್ಗದರ್ಶನ ಮಾಡುವುದು ಮುಖ್ಯ. ಮತ್ತೊಬ್ಬರಿಗೆ ಸಹಾಯ ಮಾಡು ಎಂಬುದು ನಮ್ಮ ಧರ್ಮದಲ್ಲಿದೆ. ಇಂತಹ ಸಂದರ್ಭದಲ್ಲಿ ಲಾಭದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುತ್ತಿರುವ ವೆಲ್‌ನೆಸ್ ಹೆಲ್ಪ್‌ಲೈನ್ ಸಂಸ್ಥೆಯ ಸಮಾಜ ಸೇವೆ ಮಾದರಿಯಾಗಿದೆ. ಮುಂದಿನ ದಿನದಲ್ಲಿ ಸಮಾಜಿಕ ಕಾರ್ಯದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಿ ಅದಕ್ಕಾಗಿ ಒಂದು ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.

ದವಾ ಕೇ ಸಾತ್ ದುವಾ ಬಿ ಜಾಯಿಯೆ :
ಇದಿನಬ್ಬ ಪೌಂಡೇಶನ್ ಮುಖ್ಯಸ್ಥ ಸಲೀಮ್ ಸಾಗರ್ ಅವರು ಮಾತನಾಡಿ ದವಾಕೆ ಸಾತ್ ದುವಾ ಬಿ ಜಾಯಿಯೇ ಎಂಬಂತೆ ಇವತ್ತು ಕೋವಿಡ್ ಸೋಂಕಿಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇದ್ದರೆ ಸಾಕು. ಔಷಧಿಯ ಜೊತೆಗೆ ಪ್ರಾರ್ಥನೆಯೂ ಬೇಕು ಎಂದು ಹೇಳಿದ ಅವರು ನಮ್ಮ ಆಹಾರದಲ್ಲಿ ಮಿತ ಇರಲಿ. ಆಗ ಯಾವ ಖಾಯಿಲೆಯೂ ನಮಗೆ ಕಾಡುವುದಿಲ್ಲ ಎಂದರು. ವೆಲ್‌ನೆಸ್ ಹೆಲ್ಪ್‌ಲೈನ್‌ನ ಮುಖ್ಯಸ್ಥ ಝಕರೀಯ ಪರ್ವೇಸ್ ಅವರು ಸಂಸ್ಥೆಯ ಸೇವಾ ಕಾರ್ಯದ ಬಗ್ಗೆ ವಿವರಿಸಿದರು. ಇದಿನಬ್ಬ ಪೌಂಡೇಶನ್‌ನ ಬಶೀರ್ ಸಾಗರ್, ಮುಯ್ಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷ ಪಿ.ಎಸ್ ಅಬ್ದುಲ್ ರಜಾಕ್ ಹಾಜಿ, ಕೋಶಾಧಿಕಾರಿ ಬಿ.ಎ ಶಕೂರ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಗಫೂರ್, ಹೆಲ್ಪ್‌ಲೈನ್‌ನ ಫರ್‌ವೆಸ್ ಮೂಸಾ, ಸಂಶುಲ್ ಉಲಮಾ ಕಾಲೇಜಿನ ಅಧ್ಯಕ್ಷ ಪಿ.ಅಬೂಬಕ್ಕರ್, ಪರ್ಲಡ್ಕ ಮಸೀದಿ ಅಧ್ಯಕ್ಷ ಪಿ.ಕೆ.ಮೊಹಮ್ಮದ್, ಇಮ್ತಿಹಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೋಳಿಕಟ್ಟೆ ಮುಯ್ಯುದ್ದೀನ್ ಜುಮ್ಮಾ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಸ್ವಾಗತಿಸಿದರು. ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು. ಸರಳ ಸಮಾರಂಭದ ಬಳಿಕ ಆಯುಷ್ಮಾನ್ ಕಾರ್ಡ್ ನೋದಾವಣೆ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ತಿದ್ದುಪಡಿಸಿ ಸೇರಿದಂತೆ ವಿವಿಧ ಸವಲತ್ತಿನ ಕುರಿತು ಮಾಹಿತಿ ಅಭಿಯಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.