ಕನ್ಯಾನ: ಕ್ರೈಸ್ತ ಯುವಕನ‌ ಮನೆಯಲ್ಲಿ ಹಿಂದೂ ಸಹೋದರಿಯರು ಪತ್ತೆ | ವಿಟ್ಲ ಠಾಣಾ ಪೊಲೀಸರ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1
  • ಸಹೋದರಿಯರ ಸಹಿತ ಮೂವರು ಪೊಲೀಸ್ ವಶಕ್ಕೆ

ವಿಟ್ಲ: ಹಿಂದೂ  ಸಹೋದರಿಯರಿಬ್ಬರು ಕ್ರೈಸ್ತ  ಯುವಕನೋರ್ವನ ಮನೆಯಲ್ಲಿರುವ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಕನ್ಯಾನ‌ ಗ್ರಾ.ಪಂ ವ್ಯಾಪ್ತಿಯ ಕೇಪುಳುಗುಡ್ಡೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕನ್ಯಾನ ಗ್ರಾಮದ ಕೇಪುಳುಗುಡ್ಡೆ ನಿವಾಸಿ ಕನ್ಯಾನದಲ್ಲಿ ಫ್ಯಾನ್ಸಿ ಅಂಗಡಿಯನ್ನು ಹೊಂದಿರುವ ಕ್ರೈಸ್ತ ಧರ್ಮದ ಯುವಕನ ಮನೆಯಲ್ಲಿ ಕರೋಪಾಡಿ ಗ್ರಾಮದ ಹಿಂದೂ ಸಹೋದರಿಯರಿಬ್ಬರು ಇರುವುದಾಗಿ ಬಂದ ಮಾಹಿತಿ ಆಧಾರದಲ್ಲಿ ದಾಳಿ ನಡೆಸಲಾಗಿದೆ. ಘಟನೆಗೆ ಸಂಬಂದಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ. ಈ ಪೈಕಿ  ಯುವತಿಯೋರ್ವಳು ಮಂಗಳೂರಿನ‌ಲ್ಲಿ ಕಲಿಯುತ್ತಿದ್ದು, ಯುವಕನ‌ ಪರಿಚಯದ ಹಿನ್ನೆಲೆಯಲ್ಲಿ ಆಕೆ ಆತನ‌ಮನೆಗೆ ಬಂದಿದ್ದು, ಅಕ್ಕ ಬಂದಿರುವ ಮಾಹಿತಿ ಅರಿತ ತಂಗಿ ಆಕೆಯನ್ನು ಬೇಟಿಯಾಗಲು ಬಂದಿರುವುದಾಗಿ ತಿಳಿದುಬಂದಿದೆ‌.   ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.