Breaking News

ನಾನು ಓಟಿಗಾಗಿ ಬಡವರಿಗೆ ಸಹಾಯ ಮಾಡುತ್ತಿಲ್ಲ – ಅಶೋಕ್ ರೈ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಾನು ಜನರ ಓಟಿಗಾಗಿ ಬಡವರಿಗೆ ಸಹಾಯ ಮಾಡುತ್ತಿಲ್ಲ. ಕಷ್ಟದಲ್ಲಿರುವವರಿಗೆ ಸ್ಪಂದನೆ ನೀಡುವುದೇ ನಮ್ಮ ಮಾನವೀಯ ಗುಣ ಎಂದು ಉದ್ಯಮಿ, ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಅಶೋಕ್ ಕುಮಾರ್ ರೈ ಹೇಳಿದರು. ತನ್ನ ಹುಟ್ಟುಹಬ್ಬದ ಅಂಗವಾಗಿ ಸೆ. 2ರಂದು ಅಶೋಕ್ ರೈ ಅಭಿಮಾನಿ ಬಳಗ ಎಆರ್ ವಾರಿಯರ್ಸ್ ಪುತ್ತೂರು ಬ್ಲಡ್ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ʼಕೆಲವೊಂದು ಕಡೆ ನನ್ನ ಬಗ್ಗೆ ಅಶೋಕ್ ರೈ ಜನರ ಓಟಿನ ಆಕಾಂಕ್ಷೆಯಿಂದ ಸಹಾಯ ಮಾಡಿ ಹೆಸರು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಇವೆ. ಆದರೆ ಇವತ್ತಿಗೂ ನಮ್ಮ ಟ್ರಸ್ಟ್ ಮುಖಾಂತರ ನೂರಾರು ಬಡಬಗ್ಗರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಉಚಿತವಾಗಿ ಒದಗಿಸಿಕೊಡುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಅಶಕ್ತ ಕುಟುಂಬಕ್ಕೆ ಮನೆ ಕಟ್ಟಲು ನೆರವು ನೀಡುವ ಕಾರ್ಯವು ಇಂದಿಗೂ ನಡೆಯುತ್ತಿದೆ. ನಾನು ಯಾವುದೇ ಓಟಿನ ಆಸೆ ಇಟ್ಟು ಮಾಡುತ್ತಿದ್ದರೆ ಇವತ್ತು ಆ ಎಲ್ಲಾ ಕಾರ್ಯಗಳನ್ನು ನಡೆಸುತ್ತಿರಲಿಲ್ಲ’ ಎಂದು ಹೇಳಿ ಮಾಧ್ಯಮಗಳ ಮೂಲಕ ತಮ್ಮ ಬಗ್ಗೆ ಇರುವ ಆಪಾದನೆ ಬಗ್ಗೆ ರೈ ಬೇಸರ ವ್ಯಕ್ತಪಡಿಸಿದರು.

ನನ್ನಂತೆ ಇತರ ರಾಜಕಾರಣಿಗಳು, ಸಮಾಜದ ಮುಖ್ಯಸಾಲಿನಲ್ಲಿ ಇರುವವರು ಅಶಕ್ತರಿಗೆ, ಅಸಹಾಯಕರಿಗೆ ಸಹಾಯದ ಹಸ್ತ ಚಾಚುವ ಮೂಲಕ ಸ್ವಸ್ಥ ಸಮಾಜ ಕಟ್ಟುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.