ಬಾಲ ಪ್ರತಿಭೆ ಸಾತ್ವಿಕ್ ನಂದಿಲ ನಿರ್ದೇಶನದಲ್ಲಿ ಮೂಡಿ ಬಂದ ಬೊಳ್ಯಾರ್‌ದ ಸತ್ಯೊಲು ಆಲ್ಬಂ ಸಾಂಗ್‌ಗೆ ಯೂಟ್ಯೂಬ್‌ನಲ್ಲಿ ಸಾವಿರಕ್ಕೂ ಮಿಕ್ಕಿ ಲೈಕ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ.ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಹಿತ್ತಲ ಗಿಡದಲ್ಲೇ ಔಷಧಿ ಇದ್ದರೂ ದೂರ ಹೋಗಿ ಹುಡುಕಾಡುವವರೂ ಇದ್ದಾರೆ.ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪುತ್ತೂರಿನ ಬಾಲ ಪ್ರತಿಭೆ ನಿರ್ದೇಶನದಲ್ಲಿ ಮೂಡಿ ಬಂದಿರುವ ತನ್ನ ಪ್ರಥಮ ಭಕ್ತಿ ಪ್ರಧಾನವಾದ ಆಲ್ಬಂ ಸಾಂಗ್ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಆದಾ ಕೆಲವೇ ಗಂಟೆಗಳಲ್ಲಿ ಸಾವಿರಕ್ಕೂ ಮಿಕ್ಕಿ ಲೈಕ್ ಬಂದಿರುವುದು ವಿಶೇಷ.

ಬನ್ನೂರಿನ ನಂದಿಲ ನಿವಾಸಿ ಬಾಲ ಪ್ರತಿಭೆ ಸಾತ್ವಿಕ್ ನಂದಿಲ.ಇವರು ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಮತ್ತು ಗಣೇಶ್ ದಂಪತಿ ಪುತ್ರ.ಸಾತ್ವಿಕ್ ಅವರು ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.ಎಲ್ಲ ಮಕ್ಕಳು ಪ್ರತಿಭಾವಂತರೇ ಆದರೆ ಆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಸೂಕ್ತ ತರಬೇತಿ ನೀಡಿ ಪ್ರಕಾಶಕ್ಕೆ ತಂದರೆ ಅವರು ಸಾಧಕರಾಗುವುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಸಾತ್ವಿಕ್ ಅವರು ಚೆಂಡೆ, ತಬಲ, ಮೃದಂಗ, ಕ್ಲಾಪ್‌ಬಾಕ್ಸ್ ನುಡಿಸುತ್ತಾರೆ. ಯಕ್ಷಗಾನ, ನೃತ್ಯದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದು, ತನ್ನ ೩ನೇ ತರಗತಿಯಲ್ಲೇ ಕಲಾ ರಂಗಕ್ಕೆ ಇಳಿದಿದ್ದಾರೆ.ತನ್ನ ಬಿಡುವಿನ ಸಮಯದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಕಲಾವಿದರಾಗಿ ತೆರಳುತ್ತಿದ್ದ ಅವರಿಗೆ ಮೆಲ್ಕಾರ್ ಸಮೀಪದ ಬೊಳ್ಯಾರು ಮಂತ್ರದೇವತೆ ಮತ್ತು ಕೊರಗಜ್ಜನ ಸನ್ನಿಧಿಗೆ ತೆರಳಿದ ವೇಳೆ ಸಾನಿಧ್ಯಕ್ಕೆ ಭಕ್ತಿಯ ಗಾನ ಸೇವೆ ನೀಡುವ ಚಿಂತನೆ ನಡೆಸಿದಾಗ ಅಲ್ಲಿಗೆ ಬಂದಿದ್ದ ಮಂತ್ರಾಕ್ಷಿ ಕ್ರಿಯೇಷನ್ಸ್ ಮಂಗಳೂರು ಇವರ ಪರಿಚಯದೊಂದಿಗೆ ಭಕ್ತಿಪ್ರಧಾನವಾದ ಸಂಗೀತಕ್ಕೆ ಯೋಜನೆ ರೂಪಿಸಿ ತನ್ನ ನಿರ್ದೇಶನದಲ್ಲೇ ಬೊಳ್ಯಾರ್‌ದ ಸತ್ಯೊಲ್ ಎಂಬ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿ ಸೆ.೧ರಂದು ಅದರ ಬಿಡುಗಡೆಯೂ ನಡೆಯಿತು. ಬಿಡುಗಡೆಗೊಂಡ ಆಲ್ಬಮ್‌ಸಾಂಗ್‌ಗೆ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಸಾವಿರಾರು ಲೈಕ್‌ಗಳು ಬಂದಿವೆ.

ಪ್ರೇಮ್ ಮ್ಯೂಜಿಕಲ್ಸ್ ಪುತ್ತೂರು, ಮಂತ್ರಾಕ್ಷಿ ಕ್ರಿಯೇಷನ್ಸ್ ಮಂಗಳೂರು ವತಿಯಿಂದ ಸಾತ್ವಿಕ್ ನಿರ್ದೇಶನದಲ್ಲಿ ರಕ್ಷಿತ್ ಮಂಜಿಕಟ್ಟೆ ರಚಿಸಿರುವ ಮಿಥುನ್‌ರಾಜ್ ವಿದ್ಯಾಪುರ ಹಾಡಿರುವ ಬೊಳ್ಯಾರ್‌ದ ಸತ್ಯೊಲು ಎಂಬ ಆಲ್ಬಮ್‌ಸಾಂಗ್ ಅನ್ನು ಬೊಳ್ಯಾರ್ ಮಂತ್ರದೇವತೆ ಮತ್ತು ಕೊರಗಜ್ಜನ ಸನ್ನಿಧಿಯಲ್ಲಿ ಆರಾಧಕರಾದ ಆದಿತ್ಯ ಪೂಜಾರಿ ಮತ್ತು ರಾಜರಾಮ್ ಭಟ್ ಬಿಡುಡೆಗೊಳಿಸಿದರು.ರಾಜೇಂದ್ರ ಪೂಜಾರಿ, ಕಮಲ, ವಿಶ್ವನಾಥ್ ಪಂಡಿತ್ ಅತಿಥಿಗಳಾಗಿ ಆಗಮಿಸಿದ್ದರು.ಶಿವರವರು ಕಾರ್ಯಕ್ರಮ ನಿರೂಪಿಸಿದರು. ಆಲ್ಬಮ್ ಸಾಂಗ್‌ನ ನಿರ್ದೇಶನ ಮಾಡಿರುವ ಸಾತ್ವಿಕ್ ಅವರು ಪುತ್ತೂರು ಮಹಾಲಿಂಗೇಶ್ವರ ಯುವಕ ಮಂಡಲದ ಸದಸ್ಯರಾಗಿದ್ದಾರೆ. ಸಂಗೀತದ ಹಿಂದೆ ಧ್ವನಿಯಾಗಿ ಪ್ರೋಗಾಮರ್ ಅಶ್ವಿನ್ ಆರ್ಲಪದವು, ನಾದಸ್ವರದಲ್ಲಿ ಪ್ರಶಾಂತ್ ಜೋಗಿ ಸಜಿಪ, ಠಾಸೆಯಲ್ಲಿ ಕಾರ್ತಿಕ್ ಕುಂಜತಬೈಲು, ಡೋಲುವಿನಲ್ಲಿ ಪ್ರಸಾದ್ ಮಂಜನಾಡಿ, ಚೆಂಡೆಯಲ್ಲಿ ಶ್ರೀರಾಮ್ ಪ್ರೆಂಡ್ಸ್ ಪುತ್ತೂರಿನ ಲಕ್ಷ್ಮೀ ಅರ್ಪಣ್, ದಿನೇಶ್ ಪಿ.ಜಿ, ಭವನ್ ಮೆಲ್ಕಾರ್ ಸಹಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.