ಉದ್ಯಮಿ ಅಶೋಕ್ ಕುಮಾರ್ ರೈಯವರ ಹುಟ್ಟು ಹಬ್ಬದ ಸವಿನೆನಪು | ಮರಿಕೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಅಭಿಮಾನಿ ಬಳಗ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿ  ಕಳೆದ ಮೂರು ವರ್ಷಗಳಿಂದ ಅಸಹಾಯಕ‌ ಸ್ಥಿತಿಯಿಂದ ಅಷ್ಟಕ್ಕೆ ಮೊಟಕುಗೊಂಡಿದ್ದ ಮನೆ ನಿರ್ಮಾಣಕ್ಕೆ ಉದ್ಯಮಿ ಕೋಡಿಂಬಾಡಿ ರೈ ಎಸ್ಟೇಟ್ ನ ಅಶೋಕ್ ಕುಮಾರ್ ರೈಯವರ ಅಭಿಮಾನ ಬಳಗ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಸೆ.2 ರಂದು  ಅಶೋಕ್ ಕುಮಾರ್ ರೈಯವರ ಹುಟ್ಟು ಹಬ್ಬದ ಅಂಗವಾಗಿ ಅಶೋಕ್ ಕುಮಾರ್ ರೈ ಪುತ್ತೂರು ಅಭಿಮಾನಿ ಬಳಗದ ವತಿಯಿಂದ ಮನೆ‌ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದ್ದಾರೆ.

ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪದ‌ ಮರಿಕೆ ನಿವಾಸಿ ಲಕ್ಷ್ಮೀ ಎಂಬವರು ಕಳೆದ ಮೂರು ವರ್ಷಗಳ ಹಿಂದೆ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಿ ಫೌಂಡೇಶನ್ ಹಾಕಿದ್ದರು. ಬಳಿಕ ಅವರಿಗೆ ಆರ್ಥಿಕ ಅಡಚನೆಯಿಂದಾಗಿ ಮನೆ ನಿರ್ಮಾಣವನ್ನು ಮುಂದುವರಿಸುವುದು ಅಸಾಧ್ಯವಾಗಿತ್ತು. ಇದರ ಕುರಿತು ಮಾಹಿತಿ ಪಡೆದ ಅಶೋಕ್ ಕುಮಾರ್ ರೈಯವರ ಅಭಿಮಾನಿ‌ ಬಳಗ ಉದ್ಯಮಿ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದು ಅವರ ಹುಟ್ಟು ಹಬ್ಬದ ದಿನದಂದೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಯಿತು.

ದೀಪ ಬೆಳಗಿಸಿ, ತೆಂಗಿನಕಾಯಿ ಒಡೆದು ಅಡಿಗಲ್ಲು ಹಾಕಿದ ಅಶೋಕ್ ಕುಮಾರ್ ರೈಯವರು ಮಾತನಾಡಿ, ಮನೆ ನಿರ್ಮಾಣಕ್ಕೆ ಅಸಹಾಯಕ ಸ್ಥಿತಿಯಲ್ಲಿದ್ದ ಲಕ್ಷ್ಮೀಯವರ ಬಗ್ಗೆ ಅಭಿಮಾನಿ ಬಳಗದವರು ನನ್ನ‌ಗಮನಕ್ಕೆ ತಂದಿದ್ದಾರೆ. ನನ್ನ ಅಭಿಮಾನಿ ಬಳಗದವರು ಮನೆ ನಿರ್ಮಾಣಕ್ಕೆ ಮುಂದಾಗಿದ್ದು ನಾನು ಅವರ ಜೊತೆ ಕೈಜೋಡಿಸುತ್ತೇನೆ. ನಾವೇನು ಅರಮನೆ ಕಟ್ಟಿಕೊಡಲು ಹೋಗುವುದಿಲ್ಲ. ಜೀವನ ನಿರ್ವಹಣೆಗೆ ಆವಶ್ಯಕವಾದ ಮನೆ ನಿರ್ಮಿಸಿಕೊಡವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕಾರ್ಯ ಅಭಿಮಾನಿ ಬಳಗದ ಮುಖಾಂತರ ನಡೆಯುತ್ತಿದೆ. ಇಂತಹ ಕಾರ್ಯ ಸಮಾಜದ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಆರ್ಥಿಕ ಸಂಕಷ್ಟದಲ್ಲಿರುವ ಸುಮಾರು 250 ಕುಟುಂಬಗಳನ್ನು ನಾವು ಕಂಡಿದ್ದು ಮುಂದಿನ ದಿನಗಳಲ್ಲಿ ಕನಿಷ್ಠ 3 ಸೆಂಟ್ಸ್ ಜಾಗ ನೀಡಿ ಸರಕಾರದ ಸವಲತ್ತುಗಳನ್ನು ಒದಗಿಸಿಕೊಟ್ಟು ಮನೆ ನಿರ್ಮಾಣಕ್ಕೆ ಸಹಕರಿಸುವ ಯೋಜನೆಯಿದೆ ಎಂದು ಅವರು ಹೇಳಿದರು.

ಫಲಾನುಭವಿ ಲಕ್ಷ್ಮೀ ಮಾತನಾಡಿ, ಮನೆ ನಿರ್ಮಾಣಕ್ಕೆ ತೀರಾ ಸಂಕಷ್ಟದಲ್ಲಿದ್ದ ನನಗೆ ಅಶೋಕ್ ಕುಮಾರ್ ರೈಯವರು, ವಿವಿಧ ಸಂಘಟನೆಯವರು ಹಾಗೂ ಊರವರು ಸಹಕರಿಸುತ್ತಿದ್ದಾರೆ ಎಂದರು.

ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಪ್ರಜ್ವಲ್ ರೈ ಪಾತಾಜೆ, ಕಿಶೋರ್ ಕುಮಾರ್, ಸುಜೀತ್ ಬಂಗೇರ, ರಾಧಾಕೃಷ್ಣ ಸಾಲ್ಯಾನ್, ಮನೋಜ್ ಮರಿಕೆ, ರಾಕೇಶ್ ಗೌಡ, ದೇವು ಮರೀಲ್, ರಾಕೇಶ್ ಪಂಚೋಡಿ, ರೀತೇಶ್ ಶೆಟ್ಟಿ, ಪ್ರಜೀತ್ ಸವಣೂರು, ಉದಯ ಪಾಟಾಳಿ ಬೆಳ್ಳಾರೆ,
ದೀಕ್ಷಿತ್ ರೈ ಈಶ್ವರಮಂಗಲ, ಮಹೇಶ್ ಮರಿಕೆ, ಸಂತೋಷ್ ಕುಮಾರ್ ರೈ ಕೈಕಾರ ಹಾಗೂ ಚೆನ್ನಪ್ಪ ಮರಿಕೆ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.