ಬಿಜೆಪಿ ಕೊಳ್ತಿಗೆ ಶಕ್ತಿಕೇಂದ್ರ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಭಾರತೀಯ ಜನತಾ ಪಾರ್ಟಿ ಕೊಳ್ತಿಗೆ ಶಕ್ತಿಕೇಂದ್ರ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮವು ಸೆ.2ರಂದು ಅಂಬೇಡ್ಕರ್ ಭವನ ಪೆರ್ಲಂಪಾಡಿಯಲ್ಲಿ ನಡೆದಿರುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ‌ ರಾಧಾಕೃಷ್ಣ ಬೋರ್ಕರ್‌ರವರು ನೆರವೇರಿಸಿ ಆಯುಷ್ಮಾನ್ ಕಾರ್ಡ್‌ನ ಬಗ್ಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಪುತ್ತೂರು ತಾಲೂಕು ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ನೆಟ್ಟಣಿಗೆ ಮುಡ್ನೂರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್‌ಕುಮಾರ್ ಕೊರಂಗ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ತೀರ್ಥಾನಂದ ಗೌಡ ದುಗ್ಗಳ, ತಾಲೂಕು ಮಂಡಲದ ಕಾರ್ಯದರ್ಶಿ ಯತೀಂದ್ರ ಕೊಚ್ಚಿ ಮತ್ತು ಶಕ್ತಿಕೇಂದ್ರದ ಸಂಚಾಲಕ ಸತೀಶ ಪಾಂಬಾರು ಉಪಸ್ಥಿತರಿದ್ದರು. ಸಂಚಾಲಕ ಸತೀಶ ಪಾಂಬಾರು ಎಲ್ಲರನ್ನೂ ಸ್ವಾಗತಿಸಿ, ಪ್ರಭಾಕರ ರೈ ಕೂರ್ಬಂಡ್ಕ ವಂದಿಸಿದರು. ಉದಯಕುಮಾರ್ ಜೊತೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.