ಕೋವಿಡ್-19‌ ಹಿನ್ನೆಲೆ ಸಂಕಷ್ಟಕ್ಕೆ ಒಳಗಾದ 242  ಮದ್ರಸ ಉಸ್ತಾದರಿಗೆ 7 ಲಕ್ಷ ರೂ ಕೊರೋನ ಫಂಡ್ ವಿತರಣೆ 

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಹಾಗೂ ಜಮೀಯ್ಯತ್ತುಲ್ ಮುಅಲ್ಲಿಮೀನ್‌ನ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ 242 ಮಂದಿ ಮದ್ರಸ ಉಸ್ತಾದರಿಗೆ ಸುಮಾರು 7 ಲಕ್ಷ ರೂ. ಕೊರೋನಾ ಫಂಡ್‌ನ್ನು ಪುತ್ತೂರು ಬದ್ರಿಯಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ವಿತರಿಸಲಾಯಿತು. ಅದ್ಯಕ್ಷತೆ ವಹಿಸಿ ಕೊರೋನಾ ಫಂಡ್ ವಿತರಣೆ ಮಾಡಿದ ಕೂರ್ನಡ್ಕ ಮಸೀದಿಯ ಮುದರ್ರಿಸ್ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಕೂರ್ನಡ್ಕರವರು ಮಾತನಾಡಿ, ಮದ್ರಸ ಅದ್ಯಾಪಕರು ಇತರ ಕಸುಬಿನತ್ತ ಮುಖ ಮಾಡಿದರೆ ಅದು ಧರ್ಮದ ಅಡಿಪಾಯವನ್ನೇ ಅಪಾಯಕ್ಕೆ ತಳ್ಳಬಹುದು. ಮದ್ರಸ ಕಲಿಸಲು ಶಿಕ್ಷಕರು ಇಲ್ಲದ ಸ್ಥಿತಿ ನಿರ್ಮಾಣವಾದರೆ ಮತ್ತೆ ದುಖಿಃಸಿ ಫಲ ಇಲ್ಲ. ಅದೇ ವೇಳೆ ಇಂತಹ ಸಂಕಷ್ಟದ ಸಮಯದಲ್ಲಿ ಉಲಮಾಗಳಿಗೆ ಸಾಂತ್ವನ ನೀಡಲು ಮುಂದೆ ಬಂದ ದಾನಿಗಳನ್ನು ನಾವು ಅಭಿನಂದಿಸಬೇಕು ಮತ್ತು ಅವರಿಗಾಗಿ ದುವಾ ಮಾಡಬೇಕು. ಈ ದುನಿಯಾದ ಕ್ಷಣಿಕ ಜೀವನದಲ್ಲಿ ಸಂಪಾದಿಸಿದ ಹಣದಿಂದ ಇಂತಹ ದಾನಗಳ ಮೂಲಕ ಮರಣಾ ನಂತರವೂ ಜನಮಾನಸದಲ್ಲಿ ಚಿರಪ್ರತಿಷ್ಡೆ ಗಳಿಸಲು ಸಾದ್ಯ ಎಂದರು. ಮುಖ್ಯ ಭಾಷಣ ಮಾಡಿದ ಎಸ್.ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ ಮದ್ರಸ ಮತ್ತೆ ಆರಂಭಗೊಳ್ಳುವ ತನಕ ಕೆಲಸವಿಲ್ಲದೆ ಕಂಗಾಲಾದ ಉಸ್ತಾದರನ್ನು ಆಯಾ ಊರಿನ ಸ್ಥಿತಿವಂತರು ಸೇರಿ ದತ್ತು ಪಡೆಯಲು ಮುಂದೆ ಬರಬೇಕು. ಅದೇ ರೀತಿ ಸರಕಾರದ ವತಿಯಿಂದ ಧನ ಸಹಾಯ ಒದಗಿಸಲು ಸಂಭಂದಪಟ್ಟವರು ಪ್ರಯತ್ನಿಸ ಬೇಕೆಂದರಲ್ಲದೇ ಸಂಕಷ್ಟದ ಸಮಯದಲ್ಲಿ ಸಾಂತ್ವನ ನೀಡುವುದೇ ನಿಜವಾದ ಧರ್ಮ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮುಅಲ್ಲಿಮೀನ್ ಅಧ್ಯಕ್ಷ ರೆಂಜಾಡಿ ಅಬ್ದುಲ್ ಲತೀಫ್ ದಾರಿಮಿ ಮಾತನಾಡಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಇಬ್ರಾಹಿಂ ದಾರಿಮಿ ಕಡಬ, ಆಸಿಫ್ ಹಝ್‌ಹರಿ, ಮಿತ್ತೂರು, ಮುಪತ್ತೀಶ್ ಹಮೀದ್ ದಾರಿಮಿ ಕಕ್ಕಿಂಜಿ, ಮುಪತ್ತೀಶ್ ಉಮರ್ ದಾರಿಮಿ ಸಾಲ್ಮರ, ಮುಪತೀಸ್ ಖಾಸಿಂ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್ ಬೋಳಂತೂರು, ಕೂರ್ನಡ್ಕ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬೂಬಕ್ಕರ್ ಮುಲಾರ್, ಸಿಟಿ ಬಝಾರ್‌ನ ಹಸನ್ ಹಾಜಿ, ಜಮಿತಯ್ಯತ್ತುಲ್ ಮುಅಲ್ಲಿಮೀನ್‌ನ ಜಿಲ್ಲಾ ಖಜಾಂಚಿ ಸಂಶುದ್ದೀನ್ ದಾರಿಮಿ, ಅಬ್ದುಲ್ ಗಫೂರ್ ಹನೀಪಿ, ಜಾಬೀರ್ ಪೈಝೀ ಬನಾರಿ, ಮುಹಮ್ಮದ್ ಶರೀಪ್ ಮುಕ್ರಂಪಾಡಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್‌ನ ಕಾರ್ಯದರ್ಶಿ ಹಾಗೂ ಪುತ್ತೂರು ರೆಂಜ್ ಮದ್ರಸ ಮ್ಯಾನೇಜ್ ಮೆಂಟ್‌ನ ಅಧ್ಯಕ್ಷ ರಫೀಕ್ ಹಾಜಿ ಕೊಡಾಜೆ ಸ್ವಾಗತಿಸಿದರು. ಆತೂರು ರೇಂಜ್ ಜಮಿಯ್ಯತ್ತುಲ್ ಮುಅಲ್ಲಿಮೀನ್‌ನ ಕಾರ್ಯದರ್ಶಿ ಸಿದೀಕ್ ಪೈಝಿ ಖುರಾನ್ ಪಠಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.