ದಿ| ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ.ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯ ಪೊಲೀಸ್ ಠಾಣೆಯ ಬಳಿ ನಿರ್ಮಾಣವಾದ ಸಾರ್ವಜನಿಕ ಬಸ್ ತಂಗುದಾಣವನ್ನು ಹಿಂದೂಜಾಗರಣಾ ವೇದಿಕೆ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಜಗದೀಶ್ ಕಾರಂತ್ ಅವರ ಉಪಸ್ಥಿತಿಯಲ್ಲಿ ಸೆ.೩ ರಂದು ಬೆಳಿಗ್ಗೆ ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಿತು.

ಕಾರ್ತಿಕ್‌ನ ಸಾಮಾಜಿಕ ನಿಷ್ಠೆ, ಕಾರ್ಯದಲ್ಲಿ ಬದ್ದತೆ ಎಲ್ಲರಿಗೂ ಸ್ಪೂರ್ತಿ:
ಬಸ್ ತಂಗುದಾಣವನ್ನು ಲೋಕಾರ್ಪಣೆಗೊಂಡ ಬಳಿಕ ಹಿಂದೂ ಜಾರಣಾ ವೇದಿಕೆ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಜಗದೀಶ್ ಕಾರಂತ್ ಅವರು ಮಾತನಾಡಿ ಒಂದು ವರ್ಷದ ಹಿಂದೆ ನಮ್ಮ ಆತ್ಮೀಯ ಮಿತ್ರ, ಸಂಘಟನೆಯ ಸಹಕಾರಿ, ಹಿಂದುತ್ವದ ಹೋರಾಟಗಾರ ಕಾರ್ತಿಕನನ್ನು ನಾವು ಕಳೆದು ಕೊಂಡೆವು. ಆ ಕಾರ್ಯಕರ್ತನ ಸ್ಮರಣಾರ್ಥ ಒಂದು ಶಾಶ್ವತವಾದಂತಹ ಸ್ಮರಣಾರ್ಥ ಕಟ್ಟಡದ ಲೋಕಾರ್ಪಣೆ ಆಗಿದೆ. ಇಲ್ಲಿನ ಕಾರ್ಯಕರ್ತರ ಪರಿಶ್ರಮದಿಂದ ಈ ಕಟ್ಟಡ ಎದ್ದು ನಿಲ್ಲಲು ಕಾರಣವಾಗಿದೆ. ನಮ್ಮ ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯಕರ್ತನೆ ಆಸ್ತಿ ಮತ್ತು ಶಕ್ತಿ. ಅಂತಹ ಶಕ್ತಿಯಾಗಿ ನಮ್ಮೆಲ್ಲರ ಎದುರಿನಲ್ಲಿ ಅತಿ ಕಡಿಮೆ ಅವಧಿಯ ಕಾಲ ಬಾಳಿ ಬದುಕಿ ನಮ್ಮ ಕಣ್ಣು ಎದುರುಗಡೆ ಇಲ್ಲ ಎಂದಾಗಲೂ ತಾಲೂಕಿನ ಜಿಲ್ಲೆಯ ಕಾರ್ಯಕರ್ತರು ಇಲ್ಲಿ ಸೇರಿದ್ದಾರೆ ಎಂದಾದರೆ ಕಾರ್ತಿಕ್‌ನ ಸಾಮಾಜಿಕ ನಿಷ್ಠೆ ಮತು ಕಾರ್ಯದಲ್ಲಿರುವ ಬದ್ಧತೆ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು. ಸಾವಿರಾರು ಯುವಕರನ ನಡುವೆ ಈ ರೀತಿಯ ಜನಮನ್ನಣೆ ಪಡೆಯುವುದರ ಹಿಂದೆ ಇದ್ದ ಆತನ ಪ್ರಯತ್ನ ತನಗಾಗಿ ಅಲ್ಲ. ನನ್ನ ಸಮಾಜಕ್ಕಾಗಿ, ಧರ್ಮಕ್ಕಾಗಿ, ದೇಶ್ಕಕಾಗಿ ಅನ್ನುವ ಭಾವನೆ ಅತಿ ಕಿರಿಯ ವಯಸ್ಸಿನಲ್ಲಿ ಬಂದ್ದರಿದ ಇವತ್ತು ಆತನಿಗೆ ಜನಮನ್ನಣೆ ಸಿಕ್ಕಿದೆ ಎಂದ ಅವರು ಅವನ ಮಾನಸಿಕ ಕಳಕಲಿ ಏನಿತ್ತು. ಅವನ ಬದ್ದತೆ, ಕ್ರಿಯಶಿಲತೆ ಯಾವ ಧಿಕ್ಕಿನಲ್ಲಿತ್ತು. ಅದನ್ನು ಇವತ್ತು ಪೂರೈಸುವ ಸಂಕಲ್ಪವನ್ನು ತೊಡುವಂತಹ ಲಕ್ಷಾಂತರ ಯುವಕರು ಪುತ್ತೂರಿನಲ್ಲಿ ತಲೆ ಎತ್ತಲೆ ಬೇಕು. ಅದಕ್ಕೆ ಪ್ರೇರಣೆ ಸ್ಪೂರ್ತಿ, ಕಾರ್ತಿಕ್ ಆಗಬೇಕೆಂದು ಹೇಳಿದರು.

 

ಕಾರ್ತಿಕನ ಕೊರತೆಯನ್ನು ತುಂಬಿಸುವ ಕೆಲಸ ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ:
ಸಹಜವಾಗಿ ಒಬ್ಬ ಸೇನಾಧಿಕಾರಿ ಆಕಸ್ಮಿಕವಾಗಿ ಕಳೆದು ಹೋದರೆ ಅವರ ಹಿಂದಿನ ಸೈನಿಕರು ಎದೆಗುಂದುತ್ತಾರೆ ಎಂಬ ಮಾತಿದೆ. ಆದರೆ ಕಾರ್ತಿಕ್‌ನ ನಂತರವೂ ಕೂಡಾ ಅವನ ಜೊತೆಯಲ್ಲಿದ್ದ ಪ್ರತಿಯೊಬ್ಬ ಕಾರ್ಯಕರ್ತರು ಅವನಿಗೆ ಸರಿಸಾಟಿಯಾಗಿ ಅವನ ಕೊರತೆಯನ್ನು ತುಂಬಿಸುವ ಸಂಕಲ್ಪವನ್ನು ತೊಟ್ಟು ಸಾಮಾಜಿಕ ಕಾರ್ಯಕ್ಕೆ ತೊಡಗಿಸಿಕೊಂಡಿರುವ ರೀತಿ ಪುತ್ತೂರಿನಲ್ಲಿ ಇದು ಅವನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಯಾವ ದುಷ್ಟ ಸಮಾಜಘಾತುಕ ಶಕ್ತಿಗಳ ಷಡ್ಯಂತ್ರಕ್ಕೆ ಕಾರ್ತಿಕ್‌ನ ಬಲಿದಾನ ಆಯಿತೋ ಈ ಬಲಿದಾನವನ್ನು ವ್ಯರ್ಥ ಮಾಡುವ ಅಧಿಕಾರ ನಮಗೆ ಯಾರಿಗೂ ಇಲ್ಲ. ಅವನ ಬಲಿದಾನವನ್ನು ಸಾರ್ಥಕ ಮಾಡಲು ಇರುವ ಒಂದೇ ಒಂದು ದಾರಿ ಎಂದರೆ ನನ್ನ ಬದ್ಧತೆ, ಧರ್ಮರಕ್ಷಣೆ, ಸಾಮಾಜಿಕ ಸುರಕ್ಷತೆ, ಇದಕ್ಕಾಗಿ ನಾವೆಲ್ಲ ಬದ್ಧರಾಗುವ ಎಂಬ ಸಂಕಲ್ಪವನ್ನು ಈ ಕಾಲಘಟ್ಟದಲ್ಲಿ ಮಾಡಿದರೆ ಅದು ನಿಜವಾಗಿ ಕಾರ್ತಿಕ್‌ನಿಗೆ ಅರ್ಪಿಸುವ ಶ್ರದ್ಧಾಂಜಲಿ ಮತ್ತು ನೂರು ಕಾರ್ತಿಕರನ್ನು ಹುಟ್ಟಿಸುವ ಶಕ್ತಿಯನ್ನು ನೀಡುತ್ತದೆ ಎಂದು ಜಗದೀಶ್ ಕಾರಂತ್ ಹೇಳಿದರು.

ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ:
ಕಾರ್ತಿಕ್ ಮೇರ್ಲ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆಯ ಜೊತೆಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ರೂಪಿಸಲಾಗಿದ್ದು, ಸುಮಾರು ೩೦೦ಕ್ಕೂ ಅಧಿಕ ಮಂದಿ ಉಚಿತ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡರು. ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ ಅವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.

 

ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನ್ಯಾಯವಾದಿ ಮಹೇಶ ಕಜೆ, ಹಿಂಜಾವೆ ಪುತ್ತೂರು ನಗರದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ, ಜಿಲ್ಲಾ ಸಂಪರ್ಕ ಪ್ರಮುಖ್ ನವೀನ್ ಕೈಕಾರ, ಹಿಂಜಾವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಪೂಜಾ ಸತೀಶ್, ರಾಜಾರಾಮ್ ಭಟ್, ಕಾರ್ತಿಕ್ ಮೇರ್ಲ ಅವರ ಸಹೋದರ ದೀಪಕ್, ಹಿಂದು ಸಂಘಟನಯ ಮುಖಂಡ ಸತ್ಯಜೀತ್ ಸುರತ್ಕಲ್, ಹಿಂಜಾವೇ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಕಾರ್ಯದರ್ಶಿ ಅಮಿತ್, ಜಿಲ್ಲಾ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ, ಮಂಗಳೂರು ವಿಭಾಗ ಅಧ್ಯಕ್ಷ ಕಿಶೋರ್, ಗಣರಾಜ ಭಟ್ ಕೆದಿಲ, ಹಿಂಜಾವೇ ವಿಟ್ಲ ಘಟಕದ ಕಾರ್ಯದರ್ಶಿ ರವಿ ಶೆಟ್ಟಿ, ಸಚಿನ್ ರೈ ಪಾಪೆಮಜಲು, ಉದ್ಯಮಿ ಸೀತಾರಾಮ ರೈ ಕೆದಂಬಾಡಿ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಉದ್ಯಮಿ ಸಂತೋಷ್ ರೈ ಕೈಕಾರ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಹೆಚ್.ಉದಯ, ಹಿಂಜಾವೇ ಪುತ್ತೂರು ನಗರ ಘಟಕದ ಅಧ್ಯಕ್ಷ ಪುಷ್ಪರಾಜ್ ದರ್ಬೆ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಬೆದ್ರಾಳ, ತಾಲೂಕು ಅಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ, ರಮೇಶ್ ರೈ ಡಿಂಬ್ರಿ, ಪ್ರಜ್ವಲ್ ರೈ ಪಾಲ್ತಾಜೆ, ಉಜ್ವಲ್ ಪ್ರಭು, ಜಯಂತ್ ಶೆಟ್ಟಿ ಕಂಬಳತಡ್ಡ, ಧನು ಪಟ್ಲ, ಮನೋಜ್ ಪುತ್ತೂರು, ಗಿರೀಶ್ ಕೂಡುರಸ್ತೆ, ರಾಜೇಶ್ ಪಂಚೋಡಿ, ಪುಷ್ಪರಾಜ್ ಸವಣೂರು, ಸಚಿನ್ ಸವಣೂರು, ಅವಿನಾಶ್ ಪುರುಷರಕಟ್ಟೆ, ಮನೋಜ್ ಉಡ್ಡಂಗಳ, ಪವಿತ್ರ, ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು, ರತನ್ ಕುಮಾರ್, ಸಂತೋಷ್ ಕುಮಾರ್, ಶೇಖರ್ ಗೌಡ ಬನ್ನೂರು, ಹೊನ್ನಪ್ಪ ಪೂಜಾರಿ ಕೈಂದಾಡಿ, ಮನೀಶ್ ಕುಲಾಲ್ ಬನ್ನೂರು, ಮನೀಶ್ ಬಿರ್‍ವಾ ಬನ್ನೂರು ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ, ರಾಷ್ಟ್ರೀಯ ರಕ್ಷಣೆಯ ವಿಚಾರದಲ್ಲಿ ಸಮಾಜ ಸನ್ನಧರಾಬೇಕು:
ಸಾಮಾಜಿಕ ಮತ್ತು ರಾಷ್ಟ್ರಿಯ ರಕ್ಷಣೆಯ ವಿಚಾರದಲ್ಲಿ ಇವತ್ತು ಸಮಾಜ ಸನ್ನದವಾಗಬೇಕು. ಕರಾವಳಿಯಲ್ಲಿ ಸಮಾಜಘಾತುಕ ಶಕ್ತಿಗಳು ದಿನದಿಂದ ದಿನಕ್ಕೆ ತನ್ನ ಹಿಡಿತವನ್ನು ಸಾಧಿಸುವ ಒಂದು ಯೋಜನಾ ಬದ್ದವಾದ ಪ್ರಯತ್ನ ನಿರಂತರನವಾಗಿ ನಡೆಯತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಇದು ನಿರಂತರವಾಗಿ ನಡೆಯುತ್ತಿದೆ. ಸಿಎಎ ಸಂದರ್ಭದಲ್ಲಿ ಮಂಗಳೂರು ನಗದಲ್ಲಿ ನಡೆದ ಘಟನೆ ನಮ್ಮ ಸಮಾಜಿಕ ಸುರಕ್ಷತೆಗಾಗಿ ಇರುವ ಪೊಲೀಸರ ಮೇಲೆ ದಾಳಿ ಮಾಡಿದ ದೃಶ್ಯ, ಬೆಂಗಳೂರು ಡಿಜೆ ಮತ್ತು ಕೆ.ಜೆ ಹಳ್ಳಿಯ ಘಟನೆ ನೋಡಿದಾಗ ದಂಗೆಯ ರೀತಿಯಲ್ಲಿ ಸಾಮಾಜಿಕ ಬದ್ಧತೆಯನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ರಾಷ್ಟ್ರ ವಿರೋಧಿ ಶಕ್ತಿಗಳನ್ನು ನಿಯಂತ್ರಣ ಮಾಡುವ ಅಗತ್ಯವಿದೆ. ಇದನ್ನು ಯಾವುದೇ ಜಾಗೃತ ಸಮಾಜ ಸಹಜ ಘಟನೆ ಎಂದು ಪರಿಗಣಿಸಿದರೆ ಪ್ರತಿ ಹಳ್ಳಿಯಲ್ಲೂ ಘಟನೆ ಮುಂದುವರಿಯಬಹುದು. ಆಗ ಯಾವ ಸರಕಾರವೂ ಪ್ರತಿ ಮನೆಗೂ ಮತ್ತು ಜೀವಕ್ಕೆ ರಕ್ಷಣೆ ಕೊಡಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಆತ್ಮರಕ್ಷಣೆ ಮೂಲಭೂತ ಅಧಿಕಾರ ನಿನ್ನ ಕುಟುಂಬದ ರಕ್ಷಣೆ, ಇದನ್ನು ಉಳಿಸುವ ಹೊಣೆಗಾರಿಕೆ ನಿನ್ನದು. ಅದಕ್ಕೆ ತಕ್ಕಂತೆ ನಾವು ಕ್ರೀಯಾಶೀಲರಾಗಬೇಕು.
ಜಗದೀಶ್ ಕಾರಂತ್

ಕಾರ್ತಿಕ್‌ನ ಧೈಯ ಪೂರ್ಣವಾಗಲಿ
ಅಪ್ರತಿಮ ದೇಶ ಭಕ್ತ, ಅಜಾತ ಶತ್ರು, ಎಲ್ಲರ ಕಣ್ಮಣಿ, ಬಡಬಗ್ಗರ ಬಗ್ಗೆ ಕಾಳಜಿ ಉಳ್ಳವ. ಇಂತಹ ಕಾರ್ತಿಕನನ್ನು ದುಷ್ಕರ್ಮಿಗಳು ಒಂದು ವರ್ಷದ ಹಿಂದೆ ಹತ ಮಾಡಿದ್ದರು. ಯಾಕೆ ಏನು ಗೊತ್ತಿಲ್ಲ. ಆದರೆ ಅವನ ಹಿತೈಷಿಗಳು, ಸಹಪಾಠಿಗಳು, ಹಿಂದೂ ಜಾಗರಣಾ ಸಮಿತಿ ಸರ್ವ ಸದಸ್ಯರು ಸೇರಿ ಸಾರ್ವಜನಿಕ ಬಸ್ ತಂಗುದಾಣ ಮಾಡಿದ್ದಾರೆ. ಅವರು ಸದಾ ಎಲ್ಲರ ಮನಸ್ಸಿನ್ಲಿ ನೆಲೆಸಿದ್ದವನಾಗಿದ್ದು, ಅವನ ಧ್ಯೇಯ ಪೂರ್ಣ ಆಗಲಿ  – ರಮೇಶ್ ಸುವರ್ಣ ದಿ.ಕಾರ್ತಿಕ್ ಮೇರ್ಲರವರ ತಂದೆ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.