ಕಾಂಗ್ರೆಸ್ ಕಾರ್ಯಕರ್ತ, ಎಪಿಎಂಸಿ ಡಾಯಸ್ ಕಾಂಪ್ಲೆಕ್ಸ್ ಮಾಲಕ ಇಗ್ನೀಶಿಯಸ್ ಡಾಯಸ್ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಎಪಿಎಂಸಿ ಸಿಟಿ ಆಸ್ಪತ್ರೆಯ ಬಳಿಯ ಲಿಗೋರಿ ಡಾಯಸ್ ಹಾಗೂ ಲಿಲ್ಲಿ ಡಾಯಸ್‌ರವರ ಪುತ್ರ, ಡಾಯಸ್ ಕಾಂಪ್ಲೆಕ್ಸ್‌ನ ಮಾಲಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಇಗ್ನೀಶಿಯಸ್ ಡಾಯಸ್(64ವ.)ರವರು ಅನಾರೋಗ್ಯದಿಂದ ಸೆ.4ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಇಗ್ನೀಶಿಯಸ್ ಡಾಯಸ್‌ರವರೂ ಕೂಡ ಹಲವು ವರುಷಗಳಿಂದ ಅಸ್ತಮಾ ಕಾಯಿಲೆಯಲ್ಲಿ ಬಳಲುತ್ತಿದ್ದರು. ಅಲ್ಲದೆ ಇಗ್ನೀಶಿಯಸ್ ಡಾಯಸ್‌ರವರ ಸಹೋದರ ಕಂಬಳ ಪ್ರೇಮಿ ರಿಚರ್ಡ್ ಲೂಯಿಸ್ ಡಾಯಸ್‌ರವರು ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ನಿಧನ ಹೊಂದಿದ್ದರು. ನೇರ ನಡೆ-ನುಡಿಯ, ಜನಾನುರಾಗಿ ವ್ಯಕ್ತಿತ್ವದ ಇಗ್ನೀಶಿಯಸ್‌ರವರು ಹಲವರ ಕಷ್ಟಗಳಿಗೆ ನೇರವಾಗಿ ಸ್ಪಂದಿಸುವ ಗುಣವನ್ನೂ ಮೈಗೂಡಿಸಿಕೊಂಡಿರುವುದಕ್ಕೆ ಇತ್ತೀಚೆಗೆ ಕೊರೋನಾ ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ತನ್ನ ಕಟ್ಟಡವಾದ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಶಾಪ್‌ಗಳಿಗೆ ಒಂದು ತಿಂಗಳಿನ ಬಾಡಿಗೆ ಮನ್ನಾ ಮಾಡಿ ಮಾನವೀಯತೆಯನ್ನು ಮೆರೆದಿದ್ದರು. ಇಗ್ನೀಶಿಯಸ್‌ರವರು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಎರಡು ಬಾರಿ ನಿರ್ದೇಶಕರಾಗಿ, ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಸದಸ್ಯರಾಗಿ, ಕ್ರಿಸ್ಟೋಫರ್ ಅಸೋಸಿಯೇಶನ್‌ನ, ಕಥೋಲಿಕ್ ಸಭಾದ ಅಧ್ಯಕ್ಷರಾಗಿಯೂ ಮತ್ತು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಮೃತ ಇಗ್ನೀಶಿಯಸ್ ಡಾಯಸ್‌ರವರು ಪತ್ನಿ ಶಿಕ್ಷಕಿ ಫ್ಲೋರಿನ್ ಡಿ’ಸೋಜ, ಬೆಂಗಳೂರಿನ ಕಂಪೆನಿಯೊಂದರಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿರುವ ಪುತ್ರ ದೀಪಕ್, ಪುತ್ರಿ ದೀಪ್ತಿ, ಸಹೋದರ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನ ಮಾಲಕ ವಲೇರಿಯನ್ ಡಾಯಸ್, ಸಹೋದರಿಯರಾದ ಗ್ರೇಸಿ ಡಾಯಸ್, ಝೀಟ ಡಾಯಸ್, ರೀಟ ಡಾಯಸ್‌ರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೆ.೪ ರಂದೇ ಸಂಜೆ ಏಳ್ಮುಡಿ ಸಿಮೆತರಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಇಗ್ನೀಶಿಯಸ್ ಡಾಯಸ್‌ರವರು ನಿಧನರಾದ ಹಿನ್ನೆಲೆಯಲ್ಲಿ ಇಗ್ನೀಶಿಯಸ್ ಡಾಯಸ್‌ರವರ ಮಾಲಕತ್ವದ ಡಾಯಸ್ ಕಾಂಪ್ಲೆಕ್ಸ್, ಸಹೋದರರಾದ ವಲೇರಿಯನ್ ಡಾಯಸ್ ಮಾಲಕತ್ವದ ಕ್ರಿಸ್ಟೋಫರ್ ಕಾಂಪ್ಲೆಕ್ಸ್, ದಿ.ರಿಚರ್ಡ್ ಡಾಯಸ್‌ರವರ ಮಾಲಕತ್ವದ ಲಿಲ್ಲಿ ಕಾಂಪ್ಲೆಕ್ಸ್‌ನಲ್ಲಿ ವ್ಯವಹಾರ ಮಳಿಗೆಗಳು ತಮ್ಮ ಮಳಿಗೆಗಳನ್ನು ಬಂದ್ ಮಾಡಿ ಹರತಾಳ ನಡೆಸುವ ಮೂಲಕ ಇಗ್ನೀಶಿಯಸ್ ಡಾಯಸ್‌ರವರ ಆತ್ಮಕ್ಕೆ ಚಿರಶಾಂತಿ ಸಲ್ಲಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.