ನರಿಮೊಗರು: ಮಾರುತಿ ಓಮ್ನಿಯಲ್ಲಿ ಅಕ್ರಮ ಗೋ ಸಾಗಾಟ ಆರೋಪ-ಇಬ್ಬರ ಬಂಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮಾರುತಿ ಓಮ್ನಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಕರುವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಪೊಲೀಸರು ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿದ್ದ ಕರುವನ್ನು ರಕ್ಷಣೆ ಮಾಡಿ ಇಬ್ಬರನ್ನು ಬಂಧಿಸಿರುವ ಘಟನೆ ನರಿಮೊಗರು ಸಮೀಪದ ಪುರುಷರಕಟ್ಟೆಯಲ್ಲಿ ಸೆ.೩ರಂದು ನಡೆದಿದೆ.

ಮಾರುತಿ ಓಮ್ನಿ ಚಾಲಕ ಕಾಸರಗೋಡು ಬಂದಡ್ಕ ನಿವಾಸಿ ಶಿವಪ್ರಸಾದ್ ಭಟ್(೫೨ವ) ಮತ್ತು ಬಂದಡ್ಕದ ಮಾಣಿಮೂಲೆ ನಿವಾಸಿ ಚಂದ್ರನ್ ಟಿ(೩೪ವ) ಬಂಧಿತರು.ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.ನರಿಮೊಗರು ಕಡೆಯಿಂದ ಬರುತ್ತಿರುವ ಮಾರುತಿ ಓಮ್ನಿಯನ್ನು ತಡೆದು ತಪಾಸಣೆ ನಡೆಸಿದಾಗ ಓಮ್ನಿಯ ಹಿಂದಿನ ಸೀಟ್‌ನಲ್ಲಿ ಒಂದೂವರೆ ವರ್ಷದ ಹೆಣ್ಣು ಕರುವೊಂದನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ.ಜೊತೆಗೆ ಗೋ ಸಾಗಾಟಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಕರು ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ನಿ(ಕೆಎಲ್ ೧೪ ಎಸ್.೭೮೧೯)ಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.