ಡ್ರಗ್ಸ್ ದಂಧೆ ನಡೆಸುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಎಬಿವಿಪಿ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಷ್ಟ್ರವ್ಯಾಪಿ ಕರಾಳ ಡ್ರಗ್ಸ್ ದಂಧೆ ನಡೆಸುವವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಹಲವು ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಕೋಡ್ ವರ್ಡ್‌ಗಳ ಮೂಲಕ ನಡೆಯುತ್ತಿದೆ. ಇದರಿಂದ ಕಾಲೇಜುಗಳಲ್ಲಿ ಡ್ರಗ್ ಅಡಿಕ್ಟ್ ಆಗುವುದು ಒಂದು ರೀತಿಯಲ್ಲಿ ಫ್ಯಾಶನ್ ಆಗಿ ಮಾರ್ಪಡುತ್ತಿರುವ ಅಂಶವೂ ಬಯಲಾಗುತ್ತಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕಾಗಿದೆ ಮತ್ತು ಈ ಜಾಲದಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ಗೃಹ ಇಲಾಖೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ನೀಡಬೇಕೆಂದು ಎಬಿವಿಪಿ ರಾಜ್ಯ ಸರಕಾರಕ್ಕೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಬಿವಿಪಿ ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ಮನೀಶ್ ಕುಲಾಲ್, ಕಾರ್ಯದರ್ಶಿ ಹರ್ಷಿತ್, ಕಾರ್ಯಕರ್ತರಾದ ಸ್ವಸ್ತಿಕ್, ನಿಶಾಂತ್, ವನೀಶ್, ಮಿತೇಶ್, ಮನೀಶ್ ಬಿರ್ವ, ಕೌಶಿಕ್, ನವೀನ್, ಅಜಯ್, ದೀಕ್ಷಿತ್, ಹೃತೇಶ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.