ಕಾವು: ಮದ್ಲ ಗೂಡಂಗಡಿ ಮಾಲಕ, ತುಡರ್ ಯುವಕ ಮಂಡಲದ ಹಿರಿಯ ಸದಸ್ಯ ಆನಂದ ಮೂಲ್ಯ ನಿಧನ

Puttur_Advt_NewsUnder_1
Puttur_Advt_NewsUnder_1

ವರದಿ: ಸುನೀಲ್ ಎನ್ ಕಾವು

ಕಾವು: ಮಾಡ್ನೂರು ಗ್ರಾಮದ ಮದ್ಲ ನಿವಾಸಿ ದಿ. ರಾಮಣ್ಣ ಮೂಲ್ಯರವರ ಪುತ್ರ ಆನಂದ ಮೂಲ್ಯ(೫೭ವ.)ರವರು ಸೆ.೪ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದ ಆನಂದ ಮೂಲ್ಯರವರು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಮೃತರು ಪತ್ನಿ ಲಲಿತಾ, ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಜಿತ್, ಪುತ್ರಿ ಅಶ್ವಿತಾರವರನ್ನು ಅಗಲಿದ್ದಾರೆ.

ಮದ್ಲದಲ್ಲಿ ಅಂಗಡಿ ನಡೆಸುತ್ತಿದ್ದರು:
ಮೃತರಾದ ಆನಂದ ಮೂಲ್ಯರವರು ತಮ್ಮ ಯೌವನದಲ್ಲಿ ಕುಂಬಾರ ವೃತ್ತಿಯನ್ನು ನಡೆಸಿ ಜೀವನ ಮಾಡುತ್ತಿದ್ದರು, ಕಳೆದ ೫ ವರ್ಷದಿಂದ ಕುಂಬಾರ ವೃತ್ತಿಯನ್ನು ಬಿಟ್ಟು ಮದ್ಲದಲ್ಲಿ ಅಂಗಡಿ, ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು.

ತುಡರ್ ಯುವಕ ಮಂಡಲದ ಹಿರಿಯ ಸದಸ್ಯ:
ಮದ್ಲ ಸುಬ್ರಾಯ ಬಲ್ಯಾಯರವರು ೨೦೧೧ರಲ್ಲಿ ತುಡರ್ ಯುವಕ ಮಂಡಲವನ್ನು ಸ್ಥಾಪನೆ ಮಾಡಿದಾಗ ಯುವಕ ಮಂಡಲದಲ್ಲಿ ಆರಂಭಿಕ ಸದಸ್ಯರಾಗಿ ಸೇರಿ ಕಳೆದ ೧೦ವರ್ಷದಲ್ಲಿ ಗೌರವ ಸಲಹೆಗಾರರಾಗಿ, ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಯುವಕ ಮಂಡಲದ ಎಲ್ಲಾ ಸಮಾಜಮುಖಿ ಕಾರ್ಯಕ್ಕೂ ತನ್ನದೇ ಆದ ಸಹಕಾರವನ್ನು ನೀಡಿ ಯುವಕರಿಗೆ ಸ್ಫೂರ್ತಿಯಾಗಿದ್ದರು. ಮದ್ಲ ಸುಬ್ರಾಯ ಬಲ್ಯಾಯರು ನನ್ಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ವೇಳೆ ಆನಂದ ಮೂಲ್ಯರವರು ಎಸ್‌ಡಿಎಂಸಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ನನ್ಯ ದಂಡನಾಯಕ ದೈವದ ಪಲ್ಲಕ್ಕಿ ಹೊರುತ್ತಿದ್ದರು:
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ನನ್ಯ ದಂಡನಾಯಕ ಶ್ರೀ ಉಳ್ಳಾಕುಲು ದೈವದ ಪಲ್ಲಕ್ಕಿ ಹೊರುವ ಪಾರಂಪರ್ಯ ಕಾರ್ಯವನ್ನು ಆನಂದ ಮೂಲ್ಯರವರು ಮಾಡುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.