Breaking News

ಬ್ಯಾಂಕ್ ಆಫ್ ಬರೋಡಾ ಆದ ವಿಜಯಾ ಬ್ಯಾಂಕ್‌ | ಖಾತೆ ಸಂಖ್ಯೆ ಬದಲಾವಣೆಯ ಗೊಂದಲ, ಬ್ಯಾಂಕ್ ಮುಂದೆ ಗ್ರಾಹಕರ ಸರತಿ ಸಾಲು

Puttur_Advt_NewsUnder_1
Puttur_Advt_NewsUnder_1
  • ಗೊಂದಲ, ಆತುರ ಪಡಬೇಕಾಗಿಲ್ಲ-ಮೆನೇಜರ್

ಉಪ್ಪಿನಂಗಡಿ: ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವರ್ಷದ ಹಿಂದೆ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಂಡಿದೆ. ಅದರ ಖಾತೆ ಸಂಖ್ಯೆ ಬದಲಾವಣೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಬದಲಾದ ತನ್ನ ಖಾತೆ ಸಂಖ್ಯೆಯನ್ನು ತಿಳಿಯಲು ಮತ್ತು ತನ್ನ ಖಾತೆ ಪುಸ್ತಕದಲ್ಲಿ ನಮೂದಿಸಲು ಗ್ರಾಹಕರು ಬ್ಯಾಂಕ್‌ನತ್ತ ಧಾವಿಸುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ತಮಗೆ ಎದುರಾಗಿರುವ ಸಮಸ್ಯೆ, ಗೊಂದಲ ನಿವಾರಣೆಯ ದೃಶ್ಯ ವ್ಯಕ್ತವಾಗಿದೆ.

ವಿಜಯಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಗ್ರಾಹಕರಿಗೆ ಇದೀಗ ಬದಲಾದ ಬ್ಯಾಂಕ್ ಆಫ್ ಬರೋಡಾ ಪ್ರಕಾರದಂತೆ ಹೊಸ ಖಾತೆ ಸಂಖ್ಯೆ, ಐ.ಡಿ.ಐ.ಎಫ್.ಎಸ್.ಸಿ. ಕೋಡ್ ಮತ್ತು ಎಂ.ಐ.ಸಿ.ಆರ್. ಕೋಡ್‌ಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ತನ್ನ ಖಾತೆ ಸಂಖ್ಯೆಯನ್ನು ತಿಳಿಯಲು ಮತ್ತು ತನ್ನ ಖಾತೆ ಪುಸ್ತಕದಲ್ಲಿ ನಮೂದಿಸಲು ಗ್ರಾಹಕರು ಬ್ಯಾಂಕ್‌ನತ್ತ ಧಾವಿಸುತ್ತಿದ್ದು, ಅದಕ್ಕೆ ಪೂರಕವಾಗಿ ಬ್ಯಾಂಕ್ ನಲ್ಲಿ ವಿಶೇಷ ಸೇವೆಗಳು ಆರಂಭವಾಗಿರುವುದು ಕಂಡು ಬಂದಿದೆ.

ಹೊಸ ತಂತ್ರಜ್ಞಾನದೊಂದಿಗೆ ಸೇವೆ:
ಬ್ಯಾಂಕ್ ಬದಲಾವಣೆ ಆಗುವುದರೊಂದಿಗೆ ವ್ಯವಸ್ಥೆಯಲ್ಲಿಯೂ ಬದಲಾವಣೆ ವ್ಯಕ್ತವಾಗಿದ್ದು, ಇದೀಗ ಹೊಸ ಸಾಫ್ಟ್‌ವೇರ್‌ನೊಂದಿಗೆ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಅಡಕವಾಗಿದೆ. ಹೊಸ ವ್ಯವಸ್ಥೆಯನ್ನು ಬಳಸಿಕೊಳ್ಳುವಲ್ಲಿ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತ ಗ್ರಾಹಕರ ಬಳಿಗೆ ಅಧಿಕಾರಿ, ಸಿಬ್ಬಂದಿಗಳು ಬಂದು ಸೇವೆ ನೀಡುತ್ತಿದ್ದು, ಬ್ಯಾಂಕ್‌ನ ಸೇವೆಯ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತವಾಗಿದೆ.

ಗೊಂದಲ, ಆತುರ ಪಡಬೇಕಾಗಿಲ್ಲ-ಮೆನೇಜರ್:
ವಿಜಯಾ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾ ಆಗಿ ಕಾರ್‍ಯನಿರ್ವಹಿಸುತ್ತಿದೆ. ಅದರಂತೆ ಖಾತೆದಾರರಿಗೆ ಬದಲಾದ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಮೊದಲಾದ ಮಾಹಿತಿಯನ್ನು ಪತ್ರದ ಮೂಲಕ ಮತ್ತು ಫೋನ್ ಸಂದೇಶ ಮೂಲಕ ನೀಡಲಾಗುತ್ತಿದೆ. ಬದಲಾದ ಬ್ಯಾಂಕ್ ವ್ಯವಸ್ಥೆ ಬಗ್ಗೆ ಯಾರೂ ಗೊಂದಲ, ಆತುರ ಪಡಬೇಕಾಗಿಲ್ಲ, ಇನ್ನೂ ಕೆಲ ದಿನಗಳ ಕಾಲ ತಮ್ಮ ಹಿಂದಿನ ಖಾತೆಯ ಮುಖಾಂತರ ವ್ಯವಹಾರ ನಡೆಯುತ್ತದೆ, ಇನ್ನೂ ಕಾಲಾವಕಾಶ ಇದೆ, ಹೀಗಾಗಿ ಆತುರ ಪಟ್ಟು, ತುರ್ತಾಗಿ ಬಂದು ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳಬೇಕಾಗಿಲ್ಲ, ಸಮಯವಕಾಶ ಇದ್ದಾಗ ಬಂದು ತಮ್ಮ ಪುಸ್ತಕದಲ್ಲಿ ಖಾತೆ ಸಂಖ್ಯೆ ಬರೆಸಿಕೊಳ್ಳಬಹುದಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ  ಉಪ್ಪಿನಂಗಡಿ ಶಾಖೆಯ ಸೀನಿಯರ್ ಮೆನೇಜರ್ ಎಡ್ರಿಚ್ ಅಜೇಯ್ ಡಿ’ಸೋಜಾ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.