ಇಂದು ಶಿಕ್ಷಕರ ದಿನಾಚರಣೆ: ಶಿಕ್ಷಕರ ಮನಸ್ಸನ್ನು ಅರ್ಥ ಮಾಡಿಕೊಳ್ಳೋಣವೇ..

Puttur_Advt_NewsUnder_1
Puttur_Advt_NewsUnder_1

ಶಿಕ್ಷಕನು ಪುಸ್ತಕಗಳಿಂದ ಶಿಕ್ಷಕನಲ್ಲ, ಹೃದಯದಿಂದ ವಿಷಯಗಳನ್ನು ಕಲಿಸುವವನು. ಶಿಕ್ಷಕರು ಮಕ್ಕಳ ಜ್ಞಾನ ಮತ್ತು ಬುದ್ದಿವಂತಿಕೆಯ ನಿಜವಾದ ಪ್ರತಿಮೆಗಳು. ವಿದ್ಯಾರ್ಥಿ ಸಮೂಹವನ್ನು ಅರ್ಥೈಸಿಕೊಂಡು ಅವರ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಕರ ಮನಸ್ಸನ್ನು ಅರಿಯುವ ಗೋಜಿಗೆ ನಾವು ಎಂದೂ ಹೋಗುವುದೇ ಇಲ್ಲ. ಅಂದಿನ ಗುರುಕುಲ ಪದ್ದತಿಯಿಂದ ಹಿಡಿದು ಇಂದಿನ ಆಧುನಿಕ ಶಿಕ್ಷಣ ಪದ್ದತಿಗಳಿಗೆ ಒಗ್ಗಿಕೊಳ್ಳುತ್ತಾ ಬಂದವರು ಶಿಕ್ಷಕರು. ಈಗ ಶಿಕ್ಷಕ ಸಮುದಾಯವೇ ಆನ್‌ಲೈನ್ ಶಿಕ್ಷಣದ ತಂತಿಯಲ್ಲಿದೆ. ಹೀಗೆ ಆಯಾಯ ಕಾಲಕ್ಕೆ ಒಗ್ಗಿಕೊಳ್ಳುವ ಶಿಕ್ಷಕರ ಮನಸ್ಸನ್ನು ಮೆಚ್ಚಲೇಬೇಕು.

ತಮ್ಮ ವೈಯಕ್ತಿಕ ಜಂಜಡಗಳನ್ನು ಬದಿಗೊತ್ತಿ ವಿದ್ಯಾರ್ಥಿ ಸಮೂಹಕ್ಕೆ ನಗುಮುಖವನ್ನೇ ತೋರಿಸುತ್ತಾ ಬಂದ, ಸಮಾಜಕ್ಕೆ ನಗುವನ್ನೇ ಹಂಚಿದ ಮನಸ್ಸೆಂದರೆ ಆದರ್ಶಶಿಕ್ಷಕ, ಭಾರತರತ್ನ ಡಾ. ಸರ್ವೇಪಳ್ಳಿ ರಾಧಾಕೃಷ್ಣನ್. ಅವರು ರಾಷ್ಟ್ರಪತಿಯಾದಾಗ ಅವರ ಕೆಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆ.೫ರಂದು ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ವಿನಂತಿಸಿದರು.

ಶಿಕ್ಷಕರು ಪರ್ವತವೆಂಬ ಯಶಸ್ಸಿನ ಮಾರ್ಗದರ್ಶಿಗಳಿದ್ದಂತೆ. ಅವರು ಕಡಿದಾದ ಪರ್ವತ ಶ್ರೇಣಿಯನ್ನು ಏರುವ ವೇಗದ ಮಾರ್ಗಗಳನ್ನು ತೋರಿಸುತ್ತಾರೆ. ಹಿನ್ನಡೆಗಳನ್ನು ನಿಲ್ಲಿಸಲು ಮತ್ತು ವಿಶ್ರಾಂತಿ ಪಡೆಯಲು ಎಲ್ಲಾ ವ್ಯವಸ್ಥೆಗಳನ್ನು, ಬಹು ಮುಖ್ಯವಾಗಿ ಅವರು ನಮ್ಮ ಪ್ರಯಾಣದಲ್ಲಿ ಅಡೆತಡೆಗಳು ಮತ್ತು ಎದುರಿಸಲು ಚೇತರಿಸಿಕೊಳ್ಳುವ ಬಗೆಯನ್ನು, ಸಾಹಸಮಯ ಗಾಥೆಗಳನ್ನು ಹಾಗೂ ಸೂಕ್ಷ್ಮವಾದ ಎಲ್ಲಾ ಪ್ರಮುಖ ಮಾನಸಿಕ ತಂತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿಯೇ ಶಿಕ್ಷಣದಲ್ಲಿ ಸಮಾನತೆ, ಶಿಕ್ಷಕರ ಪ್ರತಿ ಮಾತು, ವರ್ತನೆ, ತೀರ್ಮಾನ ಪಾರದರ್ಶಕವಾಗಿರುತ್ತದೆ. ಅಜ್ಞಾನದಿಂದ ಕತ್ತಲೆಯಾಗಿರುವ ಜಗತ್ತಿನಲ್ಲಿ ಬೆಳಕಿನ ಮೂಲಗಳಾಗಿ ಶಿಕ್ಷಕರು ಕಾಣಸಿಗುತ್ತಾರೆ. ಯಶಸ್ಸಿನ ನಿಜವಾದ ಆಧಾರಸ್ತಂಭಗಳಾಗಿರುವ ಶಿಕ್ಷಕರು ಜ್ಞಾನವನ್ನು ಗಳಿಸಲು, ಕೌಶಲ್ಯವನ್ನು ಸುಧಾರಿಸಲು, ಆತ್ಮವಿಶ್ವಾಸವನ್ನು ಆಯ್ಕೆ ಮಾಡಲು ಸಹಾಯ ಮಾಡುವವರು. ಅಂತೆಯೇ ವಿದ್ಯಾರ್ಥಿಗಳ ಜೀವನದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅಂತಹ ನಿರ್ಣಾಯಕ ಪಾತ್ರವನ್ನು ಕೂಡ ವಹಿಸುತ್ತಾರೆ.

ಶಿಕ್ಷಕರು ಐಷಾರಾಮಿ ಜೀವನವನ್ನು ನಡೆಸದೆಯೇ, ಯಾವುದೇ ಸಂಪತ್ತನ್ನು ಹೊಂದದೇ, ಬಯಸದೇ ವಿದ್ಯಾರ್ಥಿಗಳ ಹೃದಯದ ಲೋಕದಲ್ಲಂತು ಮಹಾ ಚಕ್ರವರ್ತಿಗಳಾಗಬಲ್ಲರು. ಶಿಕ್ಷಕರ ಕೊಡುಗೆಯನ್ನು ನೆನೆಸಿ ಕೇವಲ ಒಂದು ದಿನ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ನಾವು ಅವುಗಳನ್ನು ಮೌಲ್ವೀಕರಿಸಬಾರದು. ಶಾಲೆಯಲ್ಲಿ ಹೆತ್ತವರಂತೆ ಪ್ರೀತಿ-ವಾತ್ಸಲ್ಯವನ್ನು ನೀಡುವ ಶಿಕ್ಷಕರನ್ನು ಮನೆಯಿಂದ ದೂರವಿರುವ ಹೆತ್ತವರು ಎಂತಲೂ ಕರೆಯಬಹುದು. ಇಂತಹ ವಿಶ್ವಾಸಕ್ಕೆ ಅರ್ಹರಾದ ಶಿಕ್ಷಕರ ಮುಖದಲ್ಲಿಯೂ, ಜೀವನ ಹಂತದಲ್ಲಿಯೂ ಮಂದಹಾಸದ ನಗುವಿರಬೇಕಾದರೆ ನಾವು ಅವರಿಗಾಗಿ ಏನು ಮಾಡಿzವೆ ಎಂಬುದು ಸಮಾಜಕ್ಕಿರುವ ಯಕ್ಷಪ್ರಶ್ನೆ. ಅದಕ್ಕೆ ಹೇಳುವುದು ವಿದ್ಯಾರ್ಥಿಗಳ ಮನಸ್ಸನ್ನು ಅರ್ಥೈಸುವುದರೊಂದಿಗೆ ಶಿಕ್ಷಕರ ಮನಸ್ಸನ್ನು ಅರಿಯೋಣ. ಅವರಿಗೂ ಕೂಡ ನೋವು, ಸಂಕಟಗಳಿವೆ ಎನ್ನುವುದನ್ನು ಅರಿಯೋಣ. ಇದೆಲ್ಲವನ್ನು ಬದಿಗೊತ್ತಿ ಶಾಲೆಗೆ ಬಂದಾಗ ಶಿಕ್ಷಕರ ಮನಸ್ಥಿತಿಯೇ ಬೇರೆಯಾಗುತ್ತದೆ. ಶಿಕ್ಷಕರು ಶಾಲೆಯಲ್ಲಿ ನಮಗೆ ಕಾಣಸಿಗುವುದು ನಗುಮುಖದ ಪರಿಪೂರ್ಣ ವ್ಯಕ್ತಿಗಳಾಗಿಯೇ ಎಂಬುದು ವಾಸ್ತವಕ್ಕೆ ಹತ್ತಿರವಾದುದು. ಹಾಗಾಗಿ ಶಿಕ್ಷಕರು ಒಳ್ಳೆಯ ಮನಸ್ಸುಗಳಾಗುತ್ತಾರೆ. ಶಿಕ್ಷಕ ವೃತ್ತಿ ಎಂಬುದು ಸುಲಭವಲ್ಲ. ಒಂದಲ್ಲ ಒಂದು ಲೋಪವನ್ನು ಹೊತ್ತು ಬರುವ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುವುದೇ ನ್ಯಾಯಯುತ ಕೆಲಸ. ಆದರೆ ಪ್ರಸ್ತುತತೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಹೃದಯವಂತರನ್ನಾಗಿ ಮಾಡುವ ಶಿಕ್ಷಕರು ಅನಿವಾರ್ಯವೂ ಹೌದು. ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಕೊರೊನಾ ವಾರಿಯರ್ಸ್ ಶಿಕ್ಷಕರಿಗೊಂದು ಸಲಾಂ..
ದೇಶವನ್ನು ವಕ್ಕರಿಸಿದ ಕೋವಿಡ್-19  ಸಾಂಕ್ರಾಮಿಕ ರೋಗವು ತಂದಿರುವ ಭೂದೃಶ್ಯಕ್ಕೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡುತ್ತಾ, ರೋಗದ ವಿರುದ್ದ ಅನೇಕ ಮಂದಿ ಶಿಕ್ಷಕರು ವಾರಿಯರ್ಸ್‌ಗಳಾಗಿ ಸೇವೆಗೈಯುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ ವಾರಿಯರ್ಸ್ ಸಮೂಹಕ್ಕೊಂದು ಸಲಾಂ ಎನ್ನಲೇಬೇಕು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.