ನೂಜಿಬಾಳ್ತಿಲ ಉ.ಹಿ.ಪ್ರಾ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ:  ನೂಜಿಬಾಳ್ತಿಲ ಉ.ಹಿ.ಪ್ರಾ ಶಾಲೆಯಲ್ಲಿ ಸೆ.5ರಂದು ಶಿಕ್ಷಕ ರ ದಿನಾಚರಣೆ ಆಚರಿಸಲಾಯಿತು. ಪತ್ರಕರ್ತರಾದ ಖಾದರ್ ಸಾಹೇಬ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ಅಧ್ಯಕ್ಷ ತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಸುಂದರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ಸಚಿದೇವಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್ ಡಿ ಎಂ ಸಿ  ಸದಸ್ಯರಾದ ಭಾರತಿ ಪಾಲೆತ್ತಡಿ, ಸುದೇಶ್ ನೂಜಿಬಾಳ್ತಿಲ ಅಂಚೆಪಾಲಕ, ಜಿನೇಂದ್ರ ಜೈನ್ ಪ್ರಮುಖರಾದ ಬಿರ್ಮಣ ಗೌಡ, ಸೀತಾರಾಮಗೌಡ ಎಳುವಾಲೆ, ಕುಸುಮಾದರ, ಚಂದ್ರಾವತಿ ದಿವ್ಯ ಕಟ್ಟತಡ್ಕ, ಶೇಕ್ ದಾವುದ್ ಸಾಹೇಬ್ ಉಪಸ್ಥಿತರಿದ್ದರು.

ಈ ಶಾಲೆಯಲ್ಲಿ ಕಳೆದ 13 ವರ್ಷಗಳಿಂದ ಶಾರೀರಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಸ.ಪ ಪೂರ್ವ ಕಾಲೇಜ್ ಕೊಣಾಲು ಶಾಲೆಗೆ ವರ್ಗಾವಣೆಗೊಂಡಿದ್ದು ಅವರಿಗೆ ಶುಭಹಾರೈಸಿದರು.

ಸಂದರ್ಭದಲ್ಲಿ ಶಾರೀರಿಕ ಶಿಕ್ಷಕ ಬಾಲಕೃಷ್ಣ ರವರ ಪತ್ನಿ ಮೋಹನಾಂಗಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಲೂಸಿ ವಿ ಕೆ ಗೀತ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶೈಲ ಟಿ ಐ. ವಂದಿಸಿದರು. ಪದೋನ್ನತಿ ಹೊಂದಿ ಪ್ರೌಢ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಶಿಕ್ಷಕ ಬಾಲಕೃಷ್ಣ ರವರು ಕೃತಜ್ಞತೆ ಅರ್ಪಿಸಿದರು. ಭಾಗವಹಿಸಿದ ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.