ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯುಷ್ಮಾನ್ ನೋಂದಣಿ, ಸರಕಾರಿ ಸೌಲಭ್ಯಗಳ ಮಾಹಿತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ. ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಂಗವಾಗಿ ಸರಕಾರಿ ಸೌಲಭ್ಯಗಳ ಮಾಹಿತಿ ಹಾಗೂ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಸೆ.5ರಂದು ತಾಲೂಕು ಯೋಜನಾಧಿಕಾರಿ‌ ಕಚೇರಿಯಲ್ಲಿ‌ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ಸ್ವಾವಲಂಬಿ, ಸ್ವಾಭಿನಾನದ ಬದುಕಿಗೆ ಅವಕಾಶ ದೊರೆತಿದೆ. ಯೋಜನೆಯ ಪ್ರತಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದರ ಸದುಪಯೋಗ ಪಡೆದುಕೊಂಡು ಅರಸರಂತೆ ಬದುಕಲು ಪ್ರೇರಣೆ ನೀಡುವುದರ ಜೊತೆಗೆ ಆರೋಗ್ಯದ ರಕ್ಷಣೆಗೂ ಯೋಜನೆ ಸಹಕಾರಿಯಾಗಿದೆ ಎಂದರು. ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯ ಕುರಿತು ಸರಕಾರಕ್ಕಿಂತ ಮೊದಲೇ ಪರಿಚಯಿಸಿರುವ ವೀರೇಂದ್ರ ಹೆಗ್ಗಡೆಯವರು ಜನರ ಆರೋಗ್ಯಯುತ ಬದುಕಿಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಮಾಹಿತಿ ನೀಡಿ ಪ್ರತಿ ವ್ಯಕ್ತಿಗೂ ತಲುಪಿಸುವಲ್ಲಿ ಯೋಜನೆಯ ಮೂಲಕ ನಡೆಯುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ,ಯೋಜನೆಯ ಮೂಲಕ ಜನರ ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರಾರಂಭದಿಂದಲೂ ನಡೆಸುತ್ತಿದೆ. ಇದೀಗ ಸರಕಾರಿ ಕಾರ್ಯಕ್ರಮ ವನ್ನು ಜನರಿಗೆ ಮಾಹಿತಿ ನೀಡಿ ಯೋಜನೆಯನ್ನು ತಲುಪಿಸುವ ಉದ್ದೇಶದಿಂದ ಆ.15ರಿಂದ ಪ್ರಾರಂಭಗೊಂಡ ಅಭಿಯಾನ ಸೆ.30ರ ತನಕ ನಡೆಯಲಿದ್ದು ಜಿಲ್ಲೆಯಲ್ಲಿ ಕನಿಷ್ಟ ಒಂದು ಲಕ್ಷ ಜನರಿಗೆ ಯೋಜನೆಯನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಪ್ರತಿ ವ್ಯಕ್ತಿಗಳಿಗೂ ತಲುಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶ್ರಮಿಸುತ್ತಿದೆ ಎಂದರು.

ಪರಿಹಾರ ಧನ ವಿತರಣೆ:
ಈ ವರ್ಷದ ಪ್ರಾಕೃತಿಕ ವಿಕೋಪದಿಂದ ಮನೆ,ಕೊಟ್ಟಿಗೆ ಹಾನಿಗೊಳಗಾದವರಿಗೆ ಯೋಜನೆಯಿಂದ ನೀಡಲಾಗುವ ಪರಿಹಾರ ಧನವನ್ನು ಲೀಲಾ ಉಪ್ಪಿನಂಗಡಿ, ಹೊನ್ನಪ್ಪ ಗೌಡ ಬೆಳಂದೂರು, ಚೆನ್ನಲತಾ ಉಪ್ಪಿನಂಗಡಿ ಹಾಗೂ ಪರಿಣಾಕ್ಷಿ ಸವಣೂರುರವರಿಗೆ ವಿತರಿಸಲಾಯಿತು. ಆಯುಷ್ಮಾನ್ ಕಾರ್ಡ್ ನೋಂದಾಯಿಸಿಕೊಂಡವರಿಗೆ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಕಾರ್ಡನ್ನು ಶಾಸಕರು ಹಾಗೂ ಅತಿಥಿಗಳು ವಿತರಿಸಿದರು.

ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್ ಸ್ವಾಗತಿಸಿದರು. ಮೇಲ್ವಿಚಾರಕಿಯರಾದ ಪಾವನ ಕಾರ್ಯಕ್ರಮ ನಿರೂಪಿಸಿ, ಸುಜಾತ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.