ಕೃಷ್ಣನಗರ:ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವುದನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ನಗರಸಭಾ ಅಧಿಕಾರಿಗಳು

Puttur_Advt_NewsUnder_1
Puttur_Advt_NewsUnder_1
  • ದಂಡ ಪಾವತಿಸಲು ಹಿಂದೇಟು, ನಗರ ಸಭಾ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ, ಪೌರಕಾರ್ಮಿಕರ ಮೇಲೆ ಹಲ್ಲೆಗೆ ಯತ್ನ

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವುದನ್ನು ನಗರ ಸಭಾ ಅಧಿಕಾರಿ ಹಾಗೂ ಪೌರಕಾರ್ಮಿಕರು ರೆಡ್‌ಹ್ಯಾಂಡ್ ಹಿಡಿದು ಅವರಿಗೆ ದಂಡ ಪಾವತಿಸುವಂತೆ ಸೂಚಿಸಿದ ಬಳಿಕ ಸ್ಥಳಕ್ಕಾಗಮಿಸಿ ನಗರ ಸಭಾ ಅಧಿಕಾರಿಗಳೊಂದಿಗೆ ಮಾತಿ ಚಕಮಕಿ ನಡೆದು ಆ ತಂಡವು ಪೊಲೀಸರ ಎದುರೇ ಪೌರಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸೆ.5ರಂದು ಕೃಷ್ಣನಗರದಲ್ಲಿ ನಡೆದಿದೆ.

ಪುತ್ತೂರು-ಉಪ್ಪಿನಂಗಡಿ ಮುಖ್ಯ ರಸ್ತೆಯ ಕೃಷ್ಣ ನಗರ ಜಂಕ್ಷನ್‌ನಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವುದನ್ನು ಪತ್ತೆ ಮಾಡಲು ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರರವರ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುತ್ತಿದ್ದರು. ಈ ಸಂದರ್ಭದಲ್ಲಿ ಆಟೋ ರಿಕ್ಷಾ(ಕೆಎ೨೧ಎ೯೩೫೦)ವೊಂದರಲ್ಲಿ ಬಂದ ಮಹಿಳೆಯರಿಬ್ಬರು ಪ್ಲಾಸ್ಟಿಕ್ ಲಕೋಟೆಯಲ್ಲಿ ತ್ಯಾಜ್ಯ ತಂದು, ರಸ್ತೆ ಬದಿ ನಿಂತಿದ್ದ ನಗರ ಸಭಾ ಅಧಿಕಾರಿಗಳ ವಾಹನದ ಎದುರೇ ರಸ್ತೆ ಬದಿ ಎಸೆದರು. ಇದನ್ನು ಕಂಡ ಅಲ್ಲಿದ್ದ ಅಧಿಕಾರಿ ಹಾಗೂ ಪೌರಕಾರ್ಮಿಕರು ಅವರನ್ನು ನಿಲ್ಲಿಸಿ, ನೀವು ಸಾರ್ವಜನಿಕ ರಸ್ತೆ ಬದಿ ತ್ಯಾಜ್ಯ ಎಸೆಯುವುದು ಸರಿಯಲ್ಲ. ತ್ಯಾಜ್ಯ ಎಸೆಯದಂತೆ ಹಲವು ಬಾರಿ ಮುನ್ಸೂಚನೆಗಳನ್ನು ನೀಡಲಾಗಿದೆ. ಹಾಗಿದ್ದರೂ ನೀವು ರಸ್ತೆ ಬದಿ ತ್ಯಾಜ್ಯ ಎಸೆದಿದ್ದೀರಿ. ಹೀಗಾಗಿ ನೀವು ದಂಡ ಪಾವತಿಸುವಂತೆ ಮಹಿಳೆಯರಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಸ್ಥಳಕ್ಕಾಗಮಿಸಿದ ತಂಡ ನಗರ ಸಭಾ ಅಧಿಕಾರಿಗಳ ಕ್ರಮದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ನಗರ ಠಾಣಾ ಎಎಸ್‌ಐ ಹಾಗೂ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರೂ ಮನವರಿಕೆ ಮಾಡಿದ್ದಾರೆ. ಇದಕ್ಕೆ ಜಗ್ಗದ ಆ ತಂಡ ಹಾಗೂ ನಗರ ಸಭಾಅಧಿಕಾರಿಗಳ ಮಧ್ಯೆ ಮಾತಿನ ತೀವ್ರ ಚಕಮಕಿ ನಡೆದು ತಂಡವು ಪೊಲೀಸ್ ಎಎಸ್‌ಐಯವರ ಎದುರೇ ಪೌರಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆಯಿತು. ಹಲ್ಲೆ ನಡೆಸಲು ಯತ್ನಿಸಿದವರನ್ನು ತಡೆದು  ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಲಾಯಿತು.

ಕರ್ತವ್ಯಕ್ಕೆ ಅಡ್ಡಿ:
ಇಲಾಖೆಯ ಸೂಚನೆಯಂತೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದರೂ, ಸಾರ್ವಜನಿಕರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅವರು ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪೌರಕಾರ್ಮಿಕರು ಸುದ್ದಿಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.