ವಿಟ್ಲದಲ್ಲಿ ಮಕ್ಕಳ, ಮದುಮಗಳ ಬುರ್ಖಾ ಮಾರಾಟ, ಬುರ್ಖಾಗಳ ಸ್ಟಿಚಿಂಗ್ ಮಳಿಗೆ ನ್ಯೂ ಫ್ಯಾಶನ್ ಬುರ್ಖಾ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮಕ್ಕಳ, ಮದುಮಗಳ ಬುರ್ಖಾ ಮಾರಾಟ ಹಾಗೂ ಸ್ಟಿಚಿಂಗ್ ಮಳಿಗೆ ನ್ಯೂ ಫ್ಯಾಶನ್ ಬುರ್ಖಾ ವಿಟ್ಲದ ಎಂಪಾರ್ ಮಾಲ್ ನಲ್ಲಿರುವ ರಾಜಧಾನಿ ಜ್ಯವೆಲ್ಲರ್ಸ್ ನ ಮೇಲ್ಬಾಗದಲ್ಲಿ ಶುಭಾರಂಭಗೊಂಡಿದೆ.

ಸಂಸ್ಥೆಯನ್ನು ವಾಲೆಮುಂಡೋವ್ ಅಲ್ ಹಜ್ ಮಹ್‌ಮೂದ್ ಫೈಝಿ ಉದ್ಘಾಟಿಸಿದರು. ಸಯ್ಯದ್ ಉಮ್ಮರ್ ತಂಙಳ್ ಬನ್ನೂರುರವರು ದುವಾ ಆಶೀರ್ವಚನ ನೀಡಿದರು. ಪುತ್ತೂರಿನ ನ್ಯೂ ಫ್ಯಾಶನ್ ಬುರ್ಖಾ ಮಳಿಗೆಯ ಮಾಲಕರಾದ ಅಬ್ಬಾಸ್, ಜನತಾ ಸ್ಕೇಲ್ ಬಜಾರ್‌ನ ಮಾಲಕರಾದ ರಝಾಕ್, ಪುತ್ತೂರು ಹಸನ್ ಟೆಕ್ಸ್‌ಟೈಲ್‌ನ ಮಾಲಕರಾದ ಮಹಮ್ಮದ್ ಅಲಿ, ವಿಟ್ಲ ಶೀತಲ್ ಕಲೆಕ್ಷನ್ ನ ಮಾಲಕರಾದ ಇಕ್ಬಾಲ್, ಟೈಲರ್ ಫಯಾಝ್ ಪುತ್ತೂರು, ಅಬ್ದುಲ್ ಬಶಿರ್ ಪುತ್ತೂರು,‌ ಅಶ್ರಫ್ ಬೈತಡ್ಕ, ಹನೀಫ್ ಸಹದಿ ನೆಲ್ಯಾಡಿ, ಬಸೀರ್ ಮಣಿಯಂಪಾರೆ, ಅಝೀಜ್ ಬಪ್ಪಳಿಗೆ, ಡಿ.ಎ. ದಾವುದ್ ಬಪ್ಪಳಿಗೆ, ಖಲಂದರ್ ಕಬಕ, ಮಾಜಿ ಸೈನಿಕರಾದ ಸೇಸಪ್ಪ ಗೌಡ ಹಡೀಲು ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಸಯ್ಯದ್ ಹಾರಿಫ್ ಅತಿಥಿಗಳನ್ನು ಸ್ವಾಗತಿಸಿದರು.

ಶುಭಾರಂಭದ ಪ್ರಯುಕ್ತ ವಿಶೇಷ ರೀಯಾಯಿತಿ:
ಸಂಸ್ಥೆ ಶುಭಾರಂಭದ ಪ್ರಯುಕ್ತ ತನ್ನೆಲ್ಲಾ ಗ್ರಾಹಕರಿಗೆ ಪ್ರತಿ ಖರೀದಿ ಮೇಲೆ ವಿಶೇಷ ರೀಯಾಯಿತಿಯನ್ನು ನೀಡಲಿದೆ. ವಿವಿಧ ವಿನ್ಯಾಸದ ಮದುಮಗಳ ಬುರ್ಖಾ, ಮಕ್ಕಳ ಬುರ್ಖಾ, ನಮಾಝ್ ಡ್ರೆಸ್, ಹಿಜಾಬ್, ನ್ಯೂ ಮಾಡೆಲ್ ಶಾಲ್, ನಕಾಬ್ ಮಫ್ತಾ, ಕ್ಯಾಪ್, ಸಾಕ್ಸ್, ಗ್ಲೌಸ್ ಸಂಸ್ಥೆಯಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರ ಮನಸಿಗೊಪ್ಪುವ ಬುರ್ಖಾಗಳನ್ನು ಕ್ಲಪ್ತ ಸಮಯದಲ್ಲಿ ಸ್ಟಿಚಿಂಗ್ ಮಾಡಿಕೊಡುವ ವ್ಯವಸ್ಥೆಯೂ ಸಂಸ್ಥೆಯಲ್ಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.