ಪುತ್ತೂರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ | ಶಿಕ್ಷಕರ ವೃತ್ತಿ ತೃಪ್ತಿ ತಪ್ಪಿದ್ದಿಲ್ಲ-ರೆ.ಫಾ. ಅಶೋಕ್ ರಾಯನ್ ಕ್ರಾಸ್ತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯು ಸೆ.5ರಂದು ಪುತ್ತೂರು ಫಿಲೋಮಿನಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್‍ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಫಿಲೋಮಿನಾ ಕಾಲೇಜಿನ ವಾರ್ಡನ್ ರೆ.ಫಾ. ಅಶೋಕ್ ರಾಯನ್ ಕ್ರಾಸ್ತರವರು ಮಾತನಾಡಿ ಶಿಕ್ಷಕರ ವೃತ್ತಿಯು ಅದೊಂದು ಗೌರವಿತ ಶ್ರೇಷ್ಠ ವೃತ್ತಿಯಾಗಿದ್ದು,  ಶಿಕ್ಷಕರಿಗೆ ಈ ವೃತ್ತಿಯಿಂದ ಸಿಗುವ ಗೌರವ ಬೇರೊಂದಿಲ್ಲ, ಈ ವೃತ್ತಿಯಿಂದ ಶಿಕ್ಷಕರಿಗೆ ತೃಪ್ತಿ‌ ಎಂದೂ ತಪ್ಪಿದಿಲ್ಲ ಎಂದು ಅವರು ಹೇಳಿದರು. ಶಿಕ್ಷಕರು ಇಡೀ ಜಗತ್ತಿಗೆ ಶಿಕ್ಷಕರಾಗಿದ್ದಾರೆ. ಜಗತ್ತಿನಲ್ಲಿ ಯಾವುದೇ ವೃತ್ತಿಯಲ್ಲಿರಲಿ ಅಥವಾ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಲು ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದ ಅವರು ಶಿಕ್ಷಕರು ಜಗತ್ತನ್ನು ಬೆಳಗಿಸುವ ಮಹಾಶಕ್ತಿ ಎಂದರು. ಶಿಕ್ಷಕರು ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದೆ ಬರಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಕರುಗಳ ವೀಕ್ಷಣೆಯನ್ನು ಅವಲಂಬಿಸಿಕೊಂಡು ಬರುತ್ತಿದ್ದು ಶಿಕ್ಷಕರ ಹಾದಿಯಲ್ಲಿ ಮುಂದುವರಿಸಿಕೊಂಡು ತಮ್ಮ ಜೀವನ, ಜ್ಞಾನ ಬೆಳೆಸಿಕೊಂಡು ಬರುವಂತಾಗಿದೆ ಎಂದು ಅವರು ಹೇಳಿದರು.

ಪುತ್ತೂರು ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್‌ರವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದ್ದು, ಶಿಕ್ಷಕರು ಸಮಾಜ ಪರಿವರ್ತನೆಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದಂತಾಗಿದೆ ಎಂದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಮೋಘವಾಗಿದ್ದು ಅವರ ಜೀವನ ಶೈಲಿ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಡಾ. ಸೂರ್ಯನಾರಾಯಣರವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರ ಸೇವೆ ಎಷ್ಟು ನೆನೆದರೂ ಸಾಕಾಗದು. ಇಂತಹ ಸಂದರ್ಭದಲ್ಲಿ ಶಿಕ್ಷಕರ ಮನೋಭಾವನೆಯನ್ನು ಅರ್ಥೈಸಿಕೊಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದರು.

ಫಿಲೋಮಿನಾ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನಿವಾಸ ರಾವ್‌ರವರು ಮಾತನಾಡಿ ನಮ್ಮನ್ನು ತಿದ್ದಿ ತೀಡಿ ನಮ್ಮ ಜೀವನಕ್ಕೆ ಆಧಾರವಾಗಿರುವ ಶಿಕ್ಷಕರು ಮಹಾಪುಣ್ಯವಂತರು. ಅವರಿಂದ ಇಡೀ ಜಗಕ್ಕೆ ಬೆಳಕು ಚೆಲ್ಲುವಂತಾಗಿದೆ. ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯ ಅಮೂಲ್ಯವಾಗಿದೆ ಎಂದ ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡದೆ ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಗೆ ಸಹಾಯ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಪುತ್ತೂರು ಫಿಲೋಮಿನಾ ಹಿರಿಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ್‌ರವರು ಶಿಕ್ಷಣ ರಂಗದಲ್ಲಿ ಶಿಕ್ಷಕರ ಹೊಣೆಯ ಬಗ್ಗೆ ಮಾತನಾಡಿ ಶಿಕ್ಷಕರಿಗೆ ಶುಭ ಹಾರೈಸಿದರು.

ಪುತ್ತೂರು ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಓಸ್ವಾಲ್ಡ್ ರೋಡ್ರಿಗಸ್‌ರವರು ಮಾತನಾಡಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರ ಹಾದಿಯಲ್ಲಿ ವಿದ್ಯಾರ್ಥಿಗಳು ನಡೆದಾಗ ಸಮಾಜದ ಬದಲಾವಣೆ ಸಾಧ್ಯವಾಗಲಿದೆ ಎಂದರು. ಈ ಶಾಲೆಯ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಇಲ್ಲಿನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಫಾದರ್ ಪತ್ರಾವೋ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ. ಡೆನ್ನಿಸ್ ಡಿಸೋಜರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸದ ಸೇವೆ ಅಮೋಘವಾಗಿದ್ದು ಅವರನ್ನು ನೆನೆವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಶಿಕ್ಷಕಿ ರೇಷ್ಮಾ ರಬೆಲ್ಲೊ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರ ಜೀವನ ಘಾತೆಯ ಬಗ್ಗೆ ವಿವರಿಸಿ ಅವರೊಬ್ಬ ಧೀಮಂತ ವ್ಯಕ್ತಿಯಾಗಿದ್ದರು, ತನ್ನ ಪಾಂಡಿತ್ಯ ಹಾಗೂ ನಡೆ ನುಡಿಯ ಮೂಲಕ ಭಾರತದ ಶ್ರೇಷ್ಠತೆಯನ್ನು ವಿಶ್ವದಲ್ಲೇ ಪಸರಿಸಿದವರಾಗಿದ್ದಾರೆ ಎಂದರು. ಶಾಲಾ ಶಿಕ್ಷಕ ರಾಜಶೇಖರ್‌ರವರು ಕಾರ್‍ಯಕ್ರಮ ನಿರೂಪಿಸಿದರು. ಶಿಕ್ಷಕ ಪೀಟರ್ ನ ರೇಶ್ ಲೋಬೊ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಮಾಝಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಿದರು, ಅಲ್ಲದೆ ರಲ್ಲಾ ಶಿಕ್ಷಕರಿಗೆ ಹೂ ಗುಚ್ಚ ನೀಡಿ ಗೌರವಿಸಿದರು.

ಶ್ರದ್ಧಾಂಜಲಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶಾಲಾ ಹಿರಿಯ ವಿದ್ಯಾರ್ಥಿ ಇಗ್ನೀಶಿಯಸ್ ಡಯಾಸ್‌, ಪೂವಣಿ ಗೌಡರವರಿಗೆ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.