ಬಿಳಿನೆಲೆ: ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆ | ಬಿಳಿನೆಲೆ ಗ್ರಾ.ಪಂ.ನಿಂದ ದೇವಪ್ಪ ಗೌಡ ಮಾಲಕತ್ವದ ಅಂಗಡಿ, ವಾಸದ ಮನೆಯ ಲಾಕ್ ʼಓಪನ್ʼ

Puttur_Advt_NewsUnder_1
Puttur_Advt_NewsUnder_1

ಕಡಬ: ಕಳೆದ ಕೆಲವು ದಿನಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಬಿಳಿನೆಲೆ ಅಕ್ರಮ ಶೆಡ್ ವಿಚಾರದಲ್ಲಿ ಕೊನೆಗೆ ಗ್ರಾ.ಪಂ. ಅನಧಿಕೃತ ಅಂಗಡಿಗಳಿಗೆ ಬೀಗ ಜಡಿದಿದ್ದು, ಈ ಸಂದರ್ಭದಲ್ಲಿ ದೇವಪ್ಪ ಗೌಡ ಎಂಬವರಿಗೆ ಸೇರಿದ ಅಂಗಡಿ ಹಾಗೂ ವಾಸದ ಮನೆಗೆ ಏಕಾಏಕಿ ಬೀಗ ಜಡಿದಿರುವ ಪ್ರಕರಣಕ್ಕೆ ಸಂಬಂಧಿಸಿ ದೇವಪ್ಪ ಗೌಡರವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದೇವಪ್ಪ ಗೌಡರ ಸ್ವಾಧಿನತೆ ಇದ್ದ (ಡೋರ್ ನಂ.೩೦೧, ಸರ್ವೆ ನಂ.೭೮/೧ಎ೧ಎ೧) ಅಂಗಡಿ ಕಟ್ಟಡ ಹಾಗೂ ವಾಸದ ಮನೆಗೆ ಜಡಿದಿರುವ ಬೀಗವನ್ನು ಕೂಡಲೇ ತೆರವುಗೊಳಿಸಿ ಅವರ ಉಪಯೋಗಕ್ಕೆ ನೀಡಬೇಕು, ಅಲ್ಲದೆ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪಂಚಾಯತ್‌ಗೆ ಹೈಕೋರ್ಟ್ ಆ.3ರಂದು ಮಧ್ಯಂತರ ಆದೇಶ ನೀಡಿದ್ದು ಈ ಆದೇಶದ ಹಿನ್ನಲೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ದೇವಪ್ಪ ಗೌಡ ಮಾಲಕತ್ವದ ದಯಾನಂದ ಅವರ ಅಂಗಡಿ ಹಾಗೂ ವಾಸದ ಮನೆಯ ಬೀಗವನ್ನು ತೆಗೆದ ಘಟನೆ ಸೆ.5ರಂದು 4.30ರ ಸುಮಾರಿಗೆ ನಡೆದಿದೆ. ಬಿಳಿನೆಲೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶೀನ, ಸಿಬ್ಬಂದಿ ಶೇಷಪ್ಪ ಹಾಗೂ ಅಂಗಡಿ ಮಾಲಕ ದಯಾನಂದ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.