ದರ್ಬೆ ಹವ್ಯಕವಲಯದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಹವ್ಯಕವಲಯದ ಸೆ.೫ರಂದು ಬರೆಕರೆ ಹಾಲ್‌ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು.

 

ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ದೀಪ್ತಿಶಂಕರಿ ಯಂ, ಕೆ.ಸಿ.ಚಿನ್ಮಯಿ, ತೇಜಸ್ ಪ್ರಕಾಶ್ ಭಟ್, ಶುಭಶ್ರೀ ಕೆ., ಮತ್ತು ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಪಿ.ಕಾವ್ಯಶ್ರೀ, ಶ್ರೇಯಾ, ಶ್ರೀಹರಿ ಯಸ್, ವರುಣ್ ಕೆರವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇಂಜಿನಿಯರಿಂಗ್‌ನಲ್ಲಿ ೬ ಚಿನ್ನದ ಪದಕ ಪಡೆದ ಸಿಂದೂರ ಸರಸ್ವತಿಗೆ ಹವ್ಯಕ ಮಹಾಮಂಡಲದಿಂದ ಮಂಡಲದ ಮೂಲಕ ಕೊಡಮಾಡಲ್ಪಟ್ಟ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಅನುಗ್ರಹೀತವಾದ ಅಭಿನಂದನಾ ಪತ್ರ ಹಾಗೂ ಅಭಿನಂದನಾ ಫಲಕ ವಿತರಿಸಲಾಯಿತು.

ಮಹಾಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಶ್ರೀಮತಿ ಸಂಧ್ಯಾ ಕಾನತ್ತೂರು ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಪತ್ರ ವಿತರಿಸಿದರು. ವಲಯಾಧ್ಯಕ್ಷೆ ಈಶ್ವರಿ ರಾಮಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರಾಪುರ ಮಠದ ಶಾಸನತಂತ್ರ ಪದಾಧಿಕಾರಿ ರವಿಶಂಕರ್ ಆಚಳ್ಳಿ, ವಲಯ ಸಂಯೋಜಕ ಜಯಾನಂದ ಕೆ, ಮಂಡಲ ಶಿಷ್ಯಮಾಧ್ಯಮ ಪ್ರಧಾನರಾದ ಶ್ರೀ ರಾಮಪ್ರಸಾದ್, ಕರಿಯಾಲ
ಸನ್ಮಾನಿತ ವಿದ್ಯಾರ್ಥಿಗಳ ಹೆತ್ತವರು, ವಲಯದ ಗುರಿಕಾರರು, ಪದಾಧಿಕಾರಿಗಳು, ಉಪಸ್ಥಿತರಿದ್ದರು. ಶಿಕ್ಷಕ ದಿನಾಚರಣೆಯ ಅಂಗವಾಗಿ ವಲಯದ ಎಲ್ಲಾ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಅತಿಥಿಗಳು ಶುಭಾಶಯ ಸಲ್ಲಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.