ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಂದುವರಿದ ಸೇವಾಕಾರ್ಯ| ಪೆರ್ನೆ ಬೆಳಿಯೂರು: ಸಂಕಷ್ಟದಲ್ಲಿದ್ದ ಕುಟುಂಬದ ಮನೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲಾ ಸಮಿತಿ ವತಿಯಿಂದ `ಸೂರಿಲ್ಲದವರಿಗೊಂದು ಆಸರೆ’ ವತಿಯಿಂದ 20ನೇ ಮನೆಯ ದುರಸ್ತಿ ಕಾರ್ಯವನ್ನು ಮಾಡಲಾಗಿದ್ದು ಪೆರ್ನೆ ಬೆಳಿಯೂರು ರಝಿಯಾ ಎಂಬವರ ಮನೆಯನ್ನು ದುರಸ್ತಿಗೊಳಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪ್ರ.ಕಾರ್ಯದರ್ಶಿ ಗಿರೀಶ್ ಸೇಠ್ ಅವರ ಸಹಕಾರದಿಂದ ಮನೆಯನ್ನು ದುರಸ್ತಿಗೊಳಿಸಲಾಯಿತು. ದುರಸ್ತಿ ಕಾರ್ಯಕ್ಕೆ ನಮ್ಮ ಬಳಗದ ಹಲವಾರು ಮಂದಿ ಸಹಕಾರ ನೀಡಿದ್ದು ಈಗಾಗಲೇ ಮನೆಗೆ ಶೀಟು ಹಾಕಿ, ಕಿಟಕಿ ಮತ್ತಿತರ ಕಾಮಗಾರಿಯನ್ನು ಪೂರ್ತಿಗೊಳಿಸಿದ್ದು ಮುಂದಕ್ಕೆ ಮನೆಯ ಅಗತ್ಯವಿರುವ ಕಾಮಗಾರಿಯನ್ನು ಪೂರ್ತಿಗೊಳಿಸಲು ನಾವು ಸಿದ್ದರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲ್ಲಾಧ್ಯಕ್ಷ ಹಾಜಿ ಮುಹಮ್ಮದ್ ಕುಕ್ಕುವಳ್ಳಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.