Breaking News

ಮುರ ಛತ್ರಪತಿ ಶಾಖೆಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಛತ್ರಪತಿ ಶಾಖೆ ಮುರ ಇದರ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗು ವಿತರಣೆ ಕಾರ್ಯಕ್ರಮ ಮತ್ತು ಕೊರೋನಾ ವಾರಿಯರ್‍ಸ್ ಆಗಿರುವ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಸನ್ಮಾನಕಾರ್ಯಕ್ರಮ ಸೆ.6ರಂದು ಮುರ ಗೌಡ ಸಭಾಭವನದಲ್ಲಿ ನಡೆಯಿತು. 

 

ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಸರ್ಪಂಗಳ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಹಾಗು ದಾದಿಯರಿಗೆ ಸನ್ಮಾನಮಾಡಲಾಯಿತು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ, ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ವಿ.ಜಿ ಭಟ್, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಗೌಡ ಸಮಾಜಭವನದ ಅಧ್ಯಕ್ಷ ಬಾಬು ಗೌಡ, ನಾರಾಯಣ ಗೌಡ ಕಲ್ಲೇಗ, ಬಿಜೆಪಿ ಮುಖಂಡರಾದ ಅಭಿಜಿತ್ ಕೊಳಕೆಮಾರ್, ಗ್ರಾ.ಪಂ ಸದಸ್ಯ ವಿನಯ್ ಕುಮಾರ್ ಕಲ್ಲೇಗ, ವಿಶ್ವ ಹಿಂದೂ ಪರಿಷತ್ ಮುರ ಘಟಕದ ಅಧ್ಯಕ್ಷ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಕಾರ್ಯದರ್ಶಿ ರೂಪೇಶ್ ಶೇವಿರೆ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.