ಪುಣ್ಚತ್ತಾರು- ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು:ಶ್ರೀ ಹರಿ ಭಜನಾಮಂಡಳಿ ಪುಣ್ಚತ್ತಾರು ಹಾಗೂ ಸಾರ್ವಾಜನಿಕ ಗಣೇಶೊತ್ಸವ ಸಮಿತಿ ಪುಣ್ಚತ್ತಾರು ಇದರ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಕಾರ್ಯಕ್ರಮವು ಸೆ 6ರಂದು ಪುಣ್ಚತ್ತಾರು ಶ್ರೀಹರಿ ಕೃಪಾ ಸಭಾಭವನದಲ್ಲಿ ನಡೆಯಿತು.

ಕಾಣಿಯೂರು ಹಾಲು ಉತ್ಪದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲುರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದಲ್ಲಿ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ನಾರಾಯಣ ಗೌಡ ಇಡ್ಯಡ್ಕ. ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಮತ್ತು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಅಧ್ಯಕ್ಷ ಸುಂದರ ನಾಯ್ಕ ಉಪ್ಪಡ್ಕ, ಕಾರ್ಯದರ್ಶಿ ಗಿರೀಶ್ ಬೆಂಗಡ್ಕ, ಗ್ರಾಮ ದೈವ ಸ್ಥಾನದ ಮೊಕ್ತೇಸರರಾದ ಪುಟ್ಟಣ್ಣ ಗೌಡ ಪೈಕ , ಉತ್ತಮಕುಮಾರ್ ಮೇಲಾಂಟ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವಾನಂದ ಪುಣ್ಚತ್ತಾರು , ಸುಲಕ್ಪನ್ ರೈ ಪೈಕ , ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಇದರ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ ,ಸದಾನಂದ ರೈ ಮಾಳೆಂಗಿರಿ , ಲೋಕನಾಥ ಕಡಿರ , ವಿಠಲ ಗೌಡ ನಿಡ್ದಾಜೆ, ಪುಣ್ಚತ್ತಾರು ನಿಸರ್ಗ ಚಿಕನ್ ಸೆಂಟರ್ ಮಾಲಕರದ ನೇಮೀರಾಜ್ ಕಡೀರ, ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಇದರ ಅಧ್ಯಕ್ಷ ಹರೀಶ್ ಕಟೀಲ್ ಪೈಕ ಉಪಸ್ಥಿತರಿದ್ದರು. ಎಸ್ ಡಿ ಎಲ್ ಆನ್ ಲೈನ್ ಪುಣ್ಚತ್ತಾರು ಇವರು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.