Breaking News

ನೆಲ್ಲಿಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ನೆಲ್ಲಿಕಟ್ಟೆ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸೆ.6ರಂದು ಶ್ರಮದಾನದ ಮೂಲಕ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಶಾಲೆಯ ಅಭಿವೃದ್ಧಿಗಾಗಿ ಪುರೋಹಿತ್ ವೆಂಕಟೇಶ್ ಭಟ್‌ರವರು ಶಾಲೆಯನ್ನು ದತ್ತು ಸ್ವೀಕರಿಸಿದ್ದು ಇವರ ಹಾಗೂ ಶಾಲ ಎಸ್‌ಡಿಎಂಸಿಯವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ನಗರ ಸಭಾ ಸದಸ್ಯ ಶಕ್ತಿಸಿನ್ಹಾರವರು ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪಂಚಾಕ್ಷರಿ ಶಾಲಾ ದತ್ತು ಪಡೆದ ಪುರೋಹಿತ್ ವೆಂಕಟೇಶ್ ಭಟ್, ಅನಿತಾ ಆಯಿಲ್ ಮಿಲ್‌ನ ಮ್ಹಾಲಕ ಇಂದಾಜೆ ಪ್ರಕಾಶ್ ನಾಯಕ್, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಾಮೋದರ ಭಂಡಾರ್‌ಕರ್, ಉಲ್ಲಾಸ್ ಪೈ, ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್, ರೋಹಿತ್ ರೈ ಬನ್ನೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ, ಮುಖ್ಯ ಗುರು ರಾಜೇಶ್ವರಿ ಎಚ್., ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ, ರೋಹಿತ್ ಕುಮಾರ್ ನೆಲ್ಲಿಕಟ್ಟೆ, ಸನಂ ನಝೀರ್ರವರು ಉಪಸ್ಥಿತರಿದ್ದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಬ್ರಹ್ಮನಗರದ ಜಿನ ಪ್ರಕಾಶ್, ಜಗದೀಶ್, ಕೃಷ್ಣಾಜಿ, ಚೋಕ, ಗಂಗಾಧರ್, ಮಂಜು, ಕಿಶೋರ್ ಅಲ್ಲದೆ ಜೈಸನ್, ಜೋಯಿಲ್, ರಾಜೇಶ್, ದಿನೇಶ್ ಸಹಿತ ಹಲವಾರು ಮಂದಿ ಪಾಲ್ಗೊಂಡಿದ್ದರು. ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶೇಖ್ ಜೈನುದ್ದೀನ್ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.