ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಅಧ್ಯಕ್ಷ ಯು. ಗಂಗಾಧರ ಭಟ್‌ರವರ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಎಲ್ಲರೂ ನಮ್ಮವರೆಂಬ ಭಾವದಲ್ಲಿ ಎಲ್ಲರನ್ನು ಒಟ್ಟುಗೂಡಿಸುವ ಶಕ್ತಿ ಗಂಗಾಧರ ಭಟ್ ರವರಿಗಿತ್ತು. ಅವರ ಶಿಸ್ತುಬದ್ಧ ಜೀವನ ಇತರರಿಗೆ ಮಾದರಿಯಾಗಿದೆ ಎಂದು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ  ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್ ಯಸ್ ರವರು ಹೇಳಿದರು. 

ಅವರು ಅಳಿಕೆ ಸತ್ಯಸಾಯಿ ವಿಹಾರದಲ್ಲಿ ಸೆ.೬ರಂದು ನಡೆದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಯು. ಗಂಗಾಧರ ಭಟ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಅವರು ಮಕ್ಕಳಿಗೆ ಆದ್ಯಾತ್ಮಿಕ‌ ಶಿಕ್ಷಣದೊಂದಿಗೆ ಬೌತಿಕ ಶಿಕ್ಷಣವೂ ಅಗತ್ಯ ಎಂದು ನಂಬಿದವರು. ಅವರ ಪ್ರತಿಯೊಂದು ಮಾತು ಗೀತಾವಾಕ್ಯ ವಾಗಿದೆ. ಯಾರೊಂದಿಗೂ ಸಿಡುಕದೆ, ಯಾರೊಂದಿಗೂ ನಿಷ್ಟೂರ ಮಾಡಿಕೊಳ್ಳದೆ  ಮೃದುಸ್ವಭಾವದಿಂದ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ದಿವ್ಯಾತ್ಮ  ಶಕ್ತಿ ಅವರು.  ಸ್ವಾಮಿ ಅವರೊಂದಿಗೆ ಇರುವುದರಿಂದಲೇ ಇಷ್ಟೆಲ್ಲ ಬೆಳವಣಿಗೆಗೆ ಸಾಧ್ಯವಾಯಿತು ಎಂದು ಹೇಳಿ ಅವರು ನಡೆದು ಬಂದ ಹಾದಿಯ ಕುರಿತಾಗಿ ವಿವರಿಸಿದರು.

ಸಂಸ್ಥೆಯ ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ರವರು ಮಾತನಾಡಿ ಯು. ಗಂಗಾಧರ ಭಟ್ ರವರು ಅತ್ಯಂತ ಸರಳಜೀವಿಯಾಗಿದ್ದು, ಪ್ರಸಿದ್ಧ ಮನೆತನದಲ್ಲಿ ಜನಿಸಿದ ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಆಡಳಿತದಲ್ಲಿ ಯಾವುದೇ ಲೋಪವಿಲ್ಲದೆ ಕೆಲಸ ಮಾಡಿದ ವ್ಯಕ್ತಿ ಅವರಾಗಿದ್ದಾರೆ. ಏನೂ ಇಲ್ಲದ ಅಳಿಕೆಯ ಈ ಬೋರು ಗುಡ್ಡದಲ್ಲಿ ಇಷ್ಟೆಲ್ಲ ಬದಲಾವಣೆಗಳನ್ನು ಮಾಡಿ ಒಂದು ಶೈಕ್ಷಣಿಕ ಲೋಕವನ್ನೆ ಸೃಷ್ಟಿಸಿದ ಮಹಾನ್ ಸಾಧಕ ಅವರಾಗಿದ್ದಾರೆ. ನಮ್ಮ ಅಳಿಕೆ ವಿದ್ಯಾ ಸಂಸ್ಥೆಯಲ್ಲಿ ಕಲಿತ ಅನೇಕ‌ ವಿದ್ಯಾರ್ಥಿಗಳು ಇದೀಗ ದೇಶ ವಿದೇಶಗಳ ಲ್ಲಿ ಉನ್ನತ‌ಸ್ಥಾನದಲ್ಲಿ ಕೆಲಸ‌ಮಾಡುತ್ತಿದ್ದಾರೆ ಎನ್ನುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇವೆಲ್ಲದರ ಹಿಂದೆ ಗಂಗಾಧರ ಭಟ್ ರವರ ತ್ಯಾಗ, ಪರಿಶ್ರಮದ ಸೇವೆ ಅಡಗಿದೆ. ವೈಭವದ ಆಡಂಬರದ ಜೀವನಕ್ಕಿಂತ ಸರಳ ವ್ಯಕ್ತಿತ್ವ ಮೇಲೆಂಬುದನ್ನು ನಂಬಿದವರು ಎಂದರು.

ಅಳಿಕೆ ವಿದ್ಯಾಸಂಸ್ಥೆಯ  ಹಳೆ ವಿದ್ಯಾರ್ಥಿಗಳಾದ  ಡಾ| ಶ್ರೀಪಾದ್ ಮೆಹಂದಲೆ, ಡಾ| ಸುರೇಶ್, ಡಾ| ಗೀತಾ ಪ್ರಕಾಶ್, ಶ್ರೀಕುಮಾರ್, ಡಾ| ನರೇಂದ್ರ, ಜಯಂತ ನಾಯಕ್, ಪತ್ರಕರ್ತ ಉದಯಶಂಕರ ನೀರ್ಪಾಜೆ, ಮಹಾಲಿಂಗ ಭಟ್ ಬಾಯಾರು,  ಹರಿಪ್ರಸಾದ್, ಡಾ| ಉಮೇಶ್ ಎ.ವಿ., ಜ್ಞಾನೇಶ್, ಅಳಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಯಸ್.,ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಟ್ರಸ್ಟಿಯಾಗಿರುವ ಬಿ.ಆರ್. ವಾಸುಕಿ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಿ.ಯನ್. ರವೀಂದ್ರ ಸ್ವಾಗತಿಸಿದರು. ಹಳೆ ವಿದ್ಯಾರ್ಥಿಯಾಗಿರುವ ಡಾ| ವಿಕ್ರಮ್ ಶೆಟ್ಟಿ ವಂದಿಸಿದರು.  ಹಳೆ ವಿದ್ಯಾರ್ಥಿ ಮಂಜುನಾಥ್ ಬಿ.ಯು. ಕಾರ್ಯಕ್ರಮ ನಿರೂಪಿಸಿದರು.

ಕಿಟ್ ವಿತರಣೆ
ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್‌ರವರ ಸ್ಮರಣಾರ್ಥ  ಅಳಿಕೆ ಗ್ರಾಮದ ಎಲ್ಲಾ ಮನೆಗಳಿಗೆ  ಹಾಗೂ  ಅಳಿಕೆ ಗ್ರಾಮಕ್ಕೆ ತಾಗಿಕೊಂಡಿರುವ ಸುಮಾರು ೨೦೦೦ ಮನೆಗಳಿಗೆ ಆಹಾರ ಧಾನ್ಯಗಳ ಕಿಟ್‌ ಅನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.