Breaking News

ಮೋನಪ್ಪ ಗೌಡ ಪಮ್ಮನಮಜಲುರವರಿಗೆ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಜೆಸಿಐ ಘಟಕದ ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲುರವರಿಗೆ ಸೆ.6ರಂದು ಜೆಸಿಐ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಂಟ್ವಾಳದ ಬಂಟರ ಭವನದಲ್ಲಿ ಜರಗಿದ ಜೆಸಿಐ ವಲಯ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೋನಪ್ಪ ಗೌಡರವರ ವ್ಯವಹಾರ ಕ್ಷೇತ್ರದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿರುವ ಮೋನಪ್ಪ ಗೌಡರವರು ಬೆಳ್ಳಿಪ್ಪಾಡಿ ಗ್ರಾಮದ ಪಮ್ಮನಮಜಲು ನಿವಾಸಿಯಾಗಿದ್ದು ಶಾಂತಿನಗರದಲ್ಲಿ ಅಂಗಡಿ ವ್ಯವಹಾರ ಹೊಂದಿದ್ದಾರೆ. ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮೋನಪ್ಪ ಗೌಡರವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಮೋನಪ್ಪರವರ ಪತ್ನಿ ಮಮತರವರು ಪ್ರಸ್ತುತ ಉಪ್ಪಿನಂಗಡಿ ಜೇಸಿರೇಟ್ ಘಟಕದ ಅಧ್ಯಕ್ಷರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.