Breaking News

ಪಿತೃ ಪಕ್ಷ ಮಹಾಲಯ : ದೇವತಾಭ್ಯಃ ಪಿತೃ ಭ್ಯಶ್ಚ ಮಹಾಯೋಗಿ ಭ್ಯ ಏವಚ| ನಮಃ ಸ್ವ ಧಾಮೈ ಸ್ವಾಹಾಯೈ ನಿತ್ಯಮೇವ ನಮೋ ನಮಃ||

Puttur_Advt_NewsUnder_1
Puttur_Advt_NewsUnder_1

ಶ್ರದ್ಧೆ ಮತ್ತು ಅಚಲವಾದ ನಂಬಿಕೆ ಇಟ್ಟು ಮಾಡುವ ಪಿತೃ ಕಾರ್ಯವೇ ಶ್ರಾದ್ಧ. ಮನುಷ್ಯ ಹುಟ್ಟುವಾಗಲೇ ಮೂರು ವಿಧ ಋಣವನ್ನು ಪಡೆದುಕೊಂಡು ಬಂದಿರುತ್ತಾನೆ. ದೇವ ಋಣ, ಋಷಿ ಋಣ, ಪಿತೃ ಋಣ. ದೇವತೆಗಳನ್ನು ಯಜ್ಞಯಾಗಾದಿಗಳನ್ನು ಮಾಡುವುದರಿಂದ ದೇವಋಣ ತೀರಿಸಿದ ಹಾಗೆ. ಋಷಿಗಳು ತೋರಿಸಿಕೊಟ್ಟ ಮಾರ್ಗಗಳನ್ನು ಅನುಸರಿಸಿದಾಗ ಋಷಿಋಣ ತೀರಿಸಿದ ಹಾಗೆ. ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ಕೊಟ್ಟಾಗ ಅವರ ಋಣವನ್ನು ತೀರಿಸಿದ ಹಾಗೆ ಆಗುತ್ತದೆ. ವಾಸ ಮಾಡುವ ಗೃಹದಲ್ಲಿ ನಿತ್ಯ ಜಗಳ, ವೈ ಮನಸ್ಯ, ಮಕ್ಕಳು ಕಾದಾಡುವುದು, ವಿವಾಹ ಆಗದೆ ಇರುವುದು. ಇವು ಪಿತೃ ಕೋಪದಿಂದ ಬರತಕ್ಕಂತಹ ತೊಂದರೆಗಳು. ಮಹಾಲಯೇ ಗಯೋಶ್ರಾದ್ಧೇ ಪ್ರತಿಸಾಂವತ್ಸರೇ ತಡ್ರಾ|

ಪಿಂಡಮಿಚ್ಛಂತಿ ಪಿತರಃ ತರ್ಪಣಂ ತ್ವನ್ಯದಾ ಸ್ಮತಮ್||
ಭಾದ್ರ ಪದಮಾಸದ ಪಾಡ್ಯದಿಂದಾರಂಬಿಸಿ ಅಮಾವಾಸ್ಯೆವರೆಗೆ ಪಿತೃಪಕ್ಷ. ಈ ಸಮಯದಲ್ಲಿ ಪಿತೃಗಳು ಪಿಂಡವನ್ನು ಮತ್ತು ತರ್ಪಣವನ್ನು ಬಯಸುತ್ತಾರೆ. ತೀರಿ ಹೋದ ಎಲ್ಲಾ ಹಿರಿಯರಿರು ಇದರಿಂದ ತೃಪ್ತರಾಗಿ ಶ್ರೇಯಸ್ಸನ್ನು ಕರುಣಿಸುತ್ತಾರೆ.

ಭೂಲೋಕದಲ್ಲಿ ಕೊಟ್ಟಂತಹ ಪಿಂಡಪ್ರಧಾನದಿಂದ ಸ್ವರ್ಗದಲ್ಲಿರುವ ಪಿತೃಗಳಿಗೆ ಹೇಗೆ ತೃಪ್ತಿ, ಅದು ತಲುಪುದು ಹೇಗೆ ಇದೆಲ್ಲ ಸುಳ್ಳು ಎಂದು ಹೇಳುವವರಿಗೆ ಪರಮಾತ್ಮ ವೇದ ವ್ಯಾಸ ದೇವರು ಬ್ರಹ್ಮಾಂಡ ಪುರಾಣದಲ್ಲಿ ಉತ್ತರಿಸಿದ್ದಾರೆ. ಮಗುವನ್ನು ತಾಯಿ ತನ್ನ ಮಡಿಲಲ್ಲಿಟ್ಟುಕೊಂಡು ಹಾಲು ಉಣಿಸಿ ಬೆಳೆಸುತ್ತಾಳೆ. ನೀರಿನಲ್ಲಿ ಮೀನು ತನ್ನ ಮರಿಗೆ ಕೇವಲ ದರ್ಶನದಿಂದ (ಮರಿಯ ಸುತ್ತ ಸುತ್ತುವುದರಿಂದ) ಬೆಳವಣಿಗೆಯಾಗುತ್ತದೆ. ನವಿಲು ತನ್ನ ಮೊಟ್ಟೆಗೆ ಸ್ಪರ್ಶ ಮಾಡುವುದರಿಂದ ಹಾಲು ಇತ್ಯಾದಿ ಕೊಡದೇ ಬೆಳೆಸುತ್ತದೆ. ಆಮೆಯು ಎಲ್ಲಿಯೋ ಮರಿ ಇಟ್ಟು ಎಲ್ಲಿಯೋ ತಿರುಗುತ್ತದೆ. ಆದರೆ ಅದರ ತಲೆಯಲ್ಲಿ ನಾನು ಮರಿ ಇಟ್ಟಿದ್ದೇನೆ ಎಂದು ಆಗಾಗ ಜ್ಞಾಪಿಸಿ ಕೊಳ್ಳುವುದರಿಂದ ಮೆಗೆ ಬೆಳೆವಣಿಗೆಯಾಗುತ್ತದೆ. ಹಾಗೆಯೇ ಸ್ವರ್ಗದಲ್ಲಿರುವ ಪಿತೃಗಳಿಗೆ ಪಿಂಡಪ್ರದಾನ ಮಾಡುವುದರಿಂದ ಪಿತೃಗಳಿಗೆ ಆಹಾರ ಸಿಕ್ಕಿ ಅವರ ಸಂತೋಷಕ್ಕೆ ಕಾರಣವಾಗುತ್ತದೆ. ಹೀಗೆ ಪರಮಾತ್ಮನು ಸೃಷ್ಟಿಮಾಡುವಾಗಲೇ ದರ್ಶನಾತ್, ಧ್ಯಾನಾತ್, ಸ್ಪರ್ಷಾತ್, ಪಿಂಡಪ್ರಧಾನಾತ್, ಯೋಗ್ಯರನ್ನು ಯಾವ ರೀತಿ ಬೆಳೆಸಬೇಕು ಎಂಬುದಾಗಿ ನಿಶ್ಚಯಿಸಿರುತ್ತಾನೆ. ‘ಬಹುಚಿತ್ರ ಜಗತ್ ಬಹುಧಾಕರಣಾತ್’ ಈ ಜಗತ್ತೇ ವಿಚಿತ್ರವಾಗಿದೆ ನಾನಾ ಕಾರಣಗಳಿಂದ ಇದನ್ನು ತಿಳಿದುಕೊಳ್ಳಬೇಕು. ಈ ರೀತಿಯಾಗಿ ಪರಮಾತ್ಮನು ಶ್ರಾದ್ಧಾಹ ಮಹಿಮೆಯನ್ನು ತಿಳಿಸಿರುತ್ತಾನೆ. ಈ ವರ್ಷ ೩ನೇ ತಾರೀಕಿನಿಂದ ಪ್ರಾರಂಭಿಸಿ 17ರ ತನಕ ಪಿತೃ ಪಕ್ಷ. ಈ ಸಮಯದಲ್ಲಿ ಹೋಮಶ್ಚ ‘ಪಿಂಡದಾನಂ ಚತಢಾ ಬ್ರಾಹ್ಮಣ ಬೋಜನಂ ಎಂಬಂತೆ ದೇವಸ್ಥಾನಗಳಿಗೆ ಅನ್ನದಾನಕ್ಕೆ ಧಾನ್ಯ ದಾನ ಮಾಡುವುದು. ಕ್ಷೇತ್ರ (ಗಯಾಪದ)ದಲ್ಲಿ ಪಿಂಡದಾನ, ತಿಲಹೋಮ ತರ್ಪಣಾದಿಗಳನ್ನು ಮಾಡಿ ಹಿರಿಯರನ್ನು ಸಂತೋಷಗೊಳಿಸಿ ಪಿತೃಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗೋಣ.

ಶುಭಂ ಭೊಯೊತ್

ಎ.ವಸಂತ ಕುಮಾರ್ ಕೆದಿಲಾಯ
ಪ್ರಧಾನ ಅರ್ಚಕರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.