ಕೋವಿಡ್ ಪ್ರಾಥಮಿಕ ಸಂಪರ್ಕಿತರಿಗೆ ವ್ಯಾದಿ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳು

Puttur_Advt_NewsUnder_1
Puttur_Advt_NewsUnder_1
  • ಪ್ರಶಾಂತಿ ಆಯುರ್ವೇದದಿಂದ ರೂ. 1.80 ಲಕ್ಷದ ಮೌಲ್ಯದ ಮಾತ್ರೆಗಳ ಉಚಿತ ವಿತರಣೆ
  • ಮಿನಿ ವಿಧಾನ ಸೌಧದಲ್ಲಿ ಡಾ. ಶಶಿಧರ್ ಕಜೆ ಅವರಿಂದ ಶಾಸಕರ ವಾರ್ ರೂಮ್‌ಗೆ ಹಸ್ತಾಂತರ

>ಕೋವಿಡ್ ಮುಕ್ತ ಸಮಾಜ ಆಗಬೇಕು – ಸಂಜೀವ ಮಠಂದೂರು
>ರಾಜ್ಯದಲ್ಲಿ ರೂ.1.5 ಕೋಟಿ ಮೌಲ್ಯದ ಮಾತ್ರೆಗಳ ವಿತರಣೆ – ಡಾ.ಶಶಿಧರ್ ಕಜೆ

ಪುತ್ತೂರು: ಕೋವಿಡ್ -19 ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೆ ಉಚಿತವಾಗಿ ವಿತರಿಸಲು ರೂ. 1.80ಲಕ್ಷ ಮೌಲ್ಯದ 1ಸಾವಿರ ವ್ಯಾದಿ ನಿರೋಧಕ ಮಾತ್ರೆಗಳನ್ನು ಪ್ರಶಾಂತಿ ಆಯುರ್ವೆದ ಸಂಸ್ಥೆಯಿಂದ ಡಾ. ಶಶಿಧರ್ ಕಜೆ ಅವರು ಶಾಸಕ ಸಂಜೀವ ಮಠಂದೂರು ಅವರ ಮೂಲಕ ಶಾಸಕರ ವಾರ್‌ರೂಮ್‌ಗೆ ಸೆ.7ರಂದು ಪುತ್ತೂರು ಮಿನಿ ವಿಧಾನ ಸೌಧದಲ್ಲಿ ಹಸ್ತಾಂತರಿಸಿದರು.

ಕೋವಿಡ್ ಮುಕ್ತ ಸಮಾಜ ಆಗಬೇಕು:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶವಿದೇಶಗಳಲ್ಲಿ ಕೋವಿಡ್‌ಗೆ ಸರಿಯಾದ ಔಷಧ ಸಿದ್ಧಗೊಂಡಿಲ್ಲ. ಕರ್ನಾಟಕದಲ್ಲಿ ಆಯುರ್ವೇದ ಪದ್ಧತಿಗೆ ಮಹತ್ವವಿದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಪುತ್ತೂರಿನವರೇ ಆಗಿರುವ ಪ್ರಶಾಂತಿ ಆಯುರ್ವೇದ ಸಂಸ್ಥೆಯ ಡಾ.ಗಿರೀಧರ್ ಕಜೆ ಮತ್ತು ಡಾ. ಶಶಿಧರ್ ಕಜೆ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಪುತ್ತೂರಿನ ಜನತೆಯ ಆರೋಗ್ಯ ಕಾಪಾಡುವ ಅವರ ಪ್ರಯತ್ನ ಯಶಸ್ವಿಯಾಗಲಿದೆ ಎಂದ ಅವರು ಕೊರೋನಾದ ಆರಂಭದ ಕಾಲಗಟ್ಟದಲ್ಲಿ ಸೋಂಕನ್ನು ತಡೆಗಟ್ಟಲು ಸಹಕಾರಿಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಶಾಂತಿ ಆಯುರ್ವೇದಿಕ್ ಸಂಸ್ಥೆಯ ಡಾ. ಗಿರಿಧರ್ ಕಜೆ ಮತ್ತು ಡಾ. ಶಶಿಧರ್ ಕಜೆ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನದಟ್ಟು ಮಾಡಿದಾಗ ಮುಖ್ಯಮಂತ್ರಿಗಳು ಒಪ್ಪಿಕೊಂಡು ಜನರು ಇದರ ಉಪಯೋಗಕ್ಕಾಗಿ ಸಂದೇಶ ನೀಡಿದ್ದರು. ಆದರೆ ಕಾನೂನಾತ್ಮಕ ಮತ್ತು ತಾಂತ್ರಿಕ ತೊಂದರೆಯಿಂದಾಗಿ ಸರಕಾರಿ ಔಷಧಿಯ ವ್ಯವಸ್ಥೆಯಲ್ಲಿ ಸಾಧ್ಯವಾಗದಾಗ ಅವರು ಸಮಾಜ ಸೇವೆಯ ಮೂಲಕ ಜನರ ಆರೋಗ್ಯ ಕಾಪಾಡಲು ಸ್ವಯಂ ಪ್ರೇರಣೆಯಿಂದ ಇವತ್ತು ಔಷಧಿಯನ್ನು ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಮತ್ತು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಡಾ. ಗಿರಿಧರ ಕಜೆ, ಡಾ.ಶಶಿಧರ್ ಕಜೆ ಮತ್ತು ಅವರ ತಂದೆ ಶಿವರಾಮ್ ಕಜೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪುತ್ತೂರಿನಲ್ಲಿ ಪ್ರಥಮವಾಗಿ ಕೊರೋನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿ ನಿಂತಿರುವ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರಿಗೆ ಉಚಿತವಾಗಿ ಮಾತ್ರೆ ವಿತರಣೆ ಮಾಡುವ ಮೂಲಕ ಪುತ್ತೂರು ಕೋವಿಡ್ ಮುಕ್ತ ಸಮಾಜ ಆಗಬೇಕೆಂದರು.

ರಾಜ್ಯದಲ್ಲಿ ರೂ.1.5 ಕೋಟಿ ಮೌಲ್ಯದ ಮಾತ್ರೆಗಳ ವಿತರಣೆ:
ಪುತ್ತೂರು ಪ್ರಶಾಂತಿ ಆಯುರ್ವೇದ ಸಂಸ್ಥೆಯ ಡಾ. ಶಶಿಧರ್ ಕಜೆ ಅವರು ಮಾತನಾಡಿ ಜಗತ್ತಿನಲ್ಲಿ ಕೊರೋನಾ ವ್ಯಾಪಿಸಿದ ಸಂದರ್ಭದಲ್ಲಿ ಜ್ವರ ಶೀತ ಸೇರಿದಂತೆ ಇನ್ನಿತರ ಖಾಯಿಲೆಗಳಿಗೆ ಸಂಬಂಧಿಸಿ ವ್ಯಾದಿ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ಪುತ್ತೂರು, ಬೆಂಗಳೂರು ಕಳೆದ 20 ವರ್ಷಗಳಿಂದ ಉಪಯೋಗ ಮಾಡುತ್ತಿದ್ದ. ಭೌಮ್ಯ ಮತ್ತು ಸಾತ್ಮ್ಯ ಎಂಬ ಮಾತ್ರೆಗಳನ್ನು ಜನರಿಗೆ ಕೊಡುತ್ತಾ ಬಂದಿದ್ದೇವೆ. ಹಲವಾರು ಕಾಯಿಲೆಗಳಲ್ಲಿ ಪ್ರಮುಖವಾಗಿ ಡೆಂಗ್ಯೂ, ಚಿಕನ್‌ಗುಣ್ಯ, ಹೆಚ್1 ಎನ್ 1ಗೆ ಈ ಮಾತ್ರೆಗಳು ಉತ್ತಮ ಪರಿಣಾಮ ಬೀರಿದ್ದರಿಂದ ಕೊರೋನಾದ ವ್ಯಾದಿಯನ್ನೂ ತಡೆಗಟ್ಟುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮೂಲಕ ಇದನ್ನು ತಲುಪಿಸಿದರೆ ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವ್ ಕಡಿಮೆ ಆಗಬಹುದು. ಆದರೆ ಸರಕಾರ ಇದಕ್ಕೆ ಮನಸ್ಸು ಮಾಡಿಲ್ಲ. ಹಾಗೆಂದು ಸರಕಾರ ತೊಂದರೆ ಕೊಟ್ಟಿಲ್ಲ ಎಂದರು. ಕೋವಿಡ್ ಪ್ರಾಥಮಿಕ ಸಂಪರ್ಕದಲ್ಲಿರುವ ಮತ್ತು ಕೊರೋನಾ ವಾರಿಯರ್ಸ್ ಗೆ ಉಚಿತ ಔಷಧಿ ನೀಡುವ ಕುರಿತು ವಾಗ್ದಾನ ಮಾಡಿದಂತೆ 85 ಸಾವಿರ ಜನರಿಗೆ ಸುಮಾರು ರೂ. 1.5 ಕೋಟಿ ಮೌಲ್ಯದ ಮಾತ್ರೆಗಳನ್ನು ಬೇರೆ ಬೇರೆ ಸಂಘ ಸಂಸ್ಥೆಗಳ ಮೂಲಕ ಹಸ್ತಾಂತರಿಸುತ್ತೇವೆ. ಅದೇ ರೀತಿ ಪುತ್ತೂರು ನಮ್ಮ ಊರು. ಹಾಗಾಗಿ ಇಲ್ಲಿನ ಶಾಸಕರ ವಿಶೇಷ ವಿನಂತಿಯ ಮೇರೆಗೆ ರೂ. 1.80 ಲಕ್ಷ ಮೌಲ್ಯದ 1 ಸಾವಿರ ಮಾತ್ರೆಗಳ ಕಿಟ್‌ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ಜನತೆಯಲ್ಲೊಂದು ಮನವಿ
ಔಷಧಿಗಳನ್ನು ತಿಂದ ತಕ್ಷಣ ಕೊರೋನಾ ಬರುವುದಿಲ್ಲ ಎಂದಲ್ಲ. ನಮ್ಮ ಜಾಗರುಕತೆಯಲ್ಲಿ ನಾವು ಇರಬೇಕು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೆರ್ ಕಡ್ಡಾಯ ಪಾಲಿಸಬೇಕು.  ಈ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿ, ಮನೆಯಲ್ಲಿ ಮಾಡುವ ಔಷಧಿಯನ್ನು ಮುಂದುವರಿಸಬಹುದು. ಈ ಔಷಧಿ ಸೋಂಕನ್ನು ತಡೆಗಟ್ಟುವಲ್ಲಿ ಬಹಳ ಉಪಯೋಗವಾಗಲಿದೆ. ಭೌಮ್ಯ ಎಂಬ ಮಾತ್ರೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ತಲಾ ೨ ರಂತೆ ದಿನಕ್ಕೆ ೬ ಮಾತ್ರೆಗಳು. ಸಾತ್ಮ್ಯ ಎಂಬ ಮಾತ್ರೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ತಲಾ ೧ ಮಾತ್ರೆಗಳನ್ನು ಸೇರಿ ಆಹಾರದ ನಂತರ ೧೦ ದಿವಸಕ್ಕೆ ಆಗುವಷ್ಟು ಮಾತ್ರೆಗಳನ್ನು ತೆಗೆದು ಕೊಳ್ಳಬೇಕು. ಮಾತ್ರೆಗಳು ಎರಡು ದಿನಗಳಲ್ಲಿ ಪುತ್ತೂರು ಪ್ರಶಾಂತಿ ಆಯುರ್ವೇದ ಸಂಸ್ಥೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಹಾಗೆಂದು ಮನೆಗೆ ಕೊಂಡು ಹೋಗಿ ದಾಸ್ತಾನು ಮಾಡಬೇಡಿ. ಸಮಸ್ಯೆ ಇದ್ದವರಿಗೆ ಮಾತ್ರ ಮಾತ್ರೆ ತಲುಪಿಸಲು ಸಹಾಯ ಮಾಡಿ – ಡಾ.ಶಶಿಧರ್ ಕಜೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.