ಗ್ರಾಹಕರಿಗೆ ಬಿಲ್ ನೀಡದ ವಿಟ್ಲ ಮೆಸ್ಕಾಂ ವಿರುದ್ಧ  ಪ್ರತಿಭಟನೆ

ವಿಟ್ಲ:  ಮೆಸ್ಕಾ ಇಲಾಖೆ ತಮ್ಮ ಬಳಕೆದಾರರಿಗೆ ಕಳೆದ ಕೆಲ‌ಸಮಯಗಳಿಂದ  ಬಿಲ್ ನೀಡಿಲ್ಲ. ಇದರಿಂದಾಗಿ ಬಡ ಹಾಗೂ ಮಾಧ್ಯಮದ ಕುಟುಂಬಗಳಿಗೆ ತುಂಬಾ ಸಮಸ್ಯೆಯಾಗಿದೆ. ಈ ಸಮಸ್ಯೆ ಇಷ್ಟೊಂದು ಜಟಿಲವಾಗಲು ಸರಕಾರ, ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಬಂಟ್ವಾಳ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿ ಗೌರವಾಧ್ಯಕ್ಷ ರಮಾನಾಥ ವಿಟ್ಲರವರು ಆರೋಪಿಸಿದರು.

ಮೆಸ್ಕಾಂ ಇಲಾಖೆ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡದೆ ತೊಂದರೆ ಮಾಡುತ್ತಿರುವ ಹಾಗೂ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಮೆಸ್ಕಾಂ ಇಲಾಖೆ ಹಾಗೂ ಸರ್ಕಾರದ ಬೇಜಾಬ್ದಾರಿಯನ್ನು ಖಂಡಿಸಿ ಸೆ.7ರಂದು ಬಂಟ್ವಾಳ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿ ವತಿಯಿಂದ  ವಿಟ್ಲ ಮೆಸ್ಕಾಂ ಉಪವಿಭಾಗ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು‌ ಮಾತನಾಡಿದರು.

ಈ ಹಿಂದೆ ಇದ್ದ ಮೀಟರ್ ರೀಡರ್ ಗಳಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳವೂ ನೀಡದೆ ಇದೀಗ ಅವರನ್ನು‌ ಕೆಲಸದಿಂದ ವಜಾ ಮಾಡಿ ಹೊಸಬರನ್ನು ನೇಮಕ ಮಾಡಿದ್ದಾರೆ.  ಮೀಟರ್ ರೀಡರ್ ಗಳನ್ನು ನೇಮಕ ಮಾಡಿರುವ ಗುತ್ತಿಗೆದಾರರು ಅವರಿಗೆ ಇಂತಿಷ್ಟು ದಿನಗಳ ಗಡುವು ನೀಡಿ ಮೀಟರ್ ರೀಡಿಂಗ್ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ. ಸರಕಾರದ ಮಾನದಂಡದಂತೆ ಸರಿಯಾಗಿ ಸಂಬಳವನ್ನೂ ನೀಡದೆ ಅವರನ್ನು ವಂಚಿಸುತ್ತಿದ್ದಾರೆ. ಕೆಲವೊಂದು ಪ್ರಭಲ ವ್ಯಕ್ತಿಗಳು ಈ ಗುತ್ತಿಗೆಯನ್ನು ವಹಿಸಿಕೊಂಡಿರುವುದರಿಂದ ಮೆಸ್ಕಾಂ ಹಾಗೂ ಸರಕಾರ ಅವರ ತಾಳಕ್ಕೆ ತಕ್ಕ ಕುಣಿಯುತ್ತಿದೆ ಎಂದು ಅವರು ಆರೋಪಿಸಿದರು.

 

ಸಮಿತಿ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡುರವರು ಮಾತನಾಡಿ ಮೆಸ್ಕಾ ಸರಿಯಾದ ಸಮಯಕ್ಕೆ ಬಿಲ್ ನೀಡದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಕುರಿತು ಈ ಹಿಂದೆಯೇ ನಾವು  ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಮೆಸ್ಕಾಂ ಅಧಿಕಾರಿಗಳಿಗೆ ಮನವಿ‌ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಸರಕಾರದಿಂದ ಟೆಂಡರ್ ಪಡೆದುಕೊಂಡಿರುವ ವ್ಯಕ್ತಿಗಳು ಈ ಹಿಂದೆ ಇದ್ದ ಮಾಪಕ ಓದುಗರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಆ ಬಳಿಕ ಅವರಿಗೆ ಸರಿಯಾಗಿ ಸಂಬಳವನ್ನು ನೀಡದೆ ಅರ್ಧಕ್ಕೆ ಕೆಲಸದಿಂದ ಬಿಟ್ಟು, ಹೊಸಬರನ್ನು ನೇಮಕ ಮಾಡಿದ್ದಾರೆ. ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಮಾಪನ‌ ಓದುಗರಿಗೆ ಟ್ರೈನಿಂಗ್ ನೀಡಿ ಅವರು ಬಿಲ್ ಕಲೆಕ್ಟ್ ಗೆ ಬರುವಾಗ ಇನ್ನೆರಡು ತಿಂಗಳಾದರೂ ಬೇಕಾಗಬಹುದು. ಕೊರೋನದಿಂದಾಗಿ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಮೆಸ್ಕಾಂ ಬಿಲ್ ನೀಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೋಂದು ಸಾಂಕೇತಿ ಪ್ರತಿಭಟನೆಯಾಗಿದೆ. ಮುಂದಿನ ಹದಿನೈದಯ ದಿನಗಳ ಒಳಗಡೆ ಸಮಸ್ಯೆ ಪರಿಹಾರವಾಗದಿದ್ದರೆ ಮಂದಿನ ದಿನಗಳಲ್ಲಿ ಜಿಲ್ಲಾ, ರಾಜ್ಯಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಹದಿನೈದು ವರುಷದಿಂದ ದುಡಿಯುತ್ತಿದ್ದ ಮಾಪಕ ಓದುಗರನ್ನು ಕೆಲಸದಿಂದ ತೆಗೆದು ಹಾಕುವ ಪ್ರಕ್ರೀಯೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ. ದಲಿತ್ ಸೇವಾಸಮಿತಿ ಸಮಾಜದಲ್ಲಿ ಅನ್ಯಾಯಕ್ಕೊಳಗಾದ ಪ್ರತಿಯೋರ್ವ ವ್ಯಕ್ತಿಯ ಧ್ವನಿಯಾಗಿ ಅವರ ಸಮಸ್ಯೆಗೆ ಸ್ಪಂದಿಸಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಮಾರಪ್ಪ ಸುವರ್ಣ ಕೆದಿಲ, ಉಪಾಧ್ಯಕ್ಷ ಮಹಮ್ಮದ್ ಕಡಂಬು, ಪ್ರಸಾದ್ ಬೊಳ್ಮಾರ್, ಸಂಚಾಲಕ ರಮೇಶ್ ಕಡಂಬು,ಪ್ರಧಾನ ಕಾರ್ಯದರ್ಶಿ ನೌಫಲ್ ಕೆಬಿಯಸ್ ಕುಡ್ತಮುಗೇರು, ಜತೆ ಕಾರ್ಯದರ್ಶೀ ಬಿ.ಕೆ ಪ್ರಸಾದ್ ಅನಂತಾಡಿ, ಸಂಘಟನಾ ಕಾರ್ಯದರ್ಶಿಗಳಾದ ರಾಮಣ್ಣ ಪಿಲಿಂಜ, ರಮೇಶ್ ಕುದ್ರೆಬೆಟ್ಟು, ಸೋಮನಾಥ ಗಡಿಯಾರ, ಸೋಮಪ್ಪ ನಾಯ್ಕ ಪುಣಚ, ಗಂಗಯ್ಯ ಅನಂತಾಡಿ, ಸೋಮಪ್ಪ ಸುರುಳಿಮೂಲೆ, ಗಣೇಶ್ ಸೀಗೆಬಲ್ಲೆ, ವಿಶ್ವನಾಥ ಮಾಣಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.