Breaking News

ಪುತ್ತೂರು ಇಂಡಸ್ಟ್ರಿಯಲ್, ಐಟಿ ಹಬ್ ಆಗಬೇಕು -ಮುಳಿಯ ಕ್ಯೂಬಿಕ್ ಸ್ಪೇಸ್ ಸೆಂಟರ್ ಉದ್ಘಾಟಿಸಿ ಶಾಸಕ ಮಠಂದೂರು ಆಶಯ

Puttur_Advt_NewsUnder_1
Puttur_Advt_NewsUnder_1

*ಪುತ್ತೂರಿನ ಬೆಳವಣಿಗೆಗೆ ಪೂರಕ ಯೋಜನೆ -ರೂಪಾ ಶೆಟ್ಟಿ
*ಪುತ್ತೂರು ಕೂಡಾ ಬೆಳೆಯುವ ಉದ್ದೇಶ-ಕೇಶವಪ್ರಸಾದ್ ಮುಳಿಯ

ಪುತ್ತೂರು:ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಗಳನ್ನು ಅರಿತ ಶಾಸಕರು ಶಾಸಕರ ವಾರ್ ರೂಮ್ ಮೂಲಕ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಪೈಕಿ ಮಹಾನಗರ ಬಿಟ್ಟು ಗ್ರಾಮಾಂತರ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಐಟಿ ಕಂಪೆನಿ ಉದ್ಯೋಗಿಗಳಿಗೆ ವರ್ಕ್‌ಪ್ರಮ್ ಹೋಮ್‌ಗೆ ಇಂಟರ್‌ನೆಟ್ ಸಮಸ್ಯೆ ಆಗಬಾರದು ಎಂದು ರಾಜ್ಯದಲ್ಲೇ ಪ್ರಥಮ ಬಾರಿಗೆ ಪುತ್ತೂರು ಮುಳಿಯ ಸಂಸ್ಥೆಯ ಸಹಕಾರದೊಂದಿಗೆ ಆರಂಭಿಸಲಾಗಿರುವ ಮುಳಿಯ ಕ್ಯೂಬಿಕ್ ಸ್ಪೇಸ್ ಸೆಂಟರ್ ಕೂಡಾ ಒಂದು ಮಹತ್ತರ ಯೋಜನೆಯಾಗಿದೆ.ತಿಂಗಳ ಹಿಂದೆ ಕ್ಯೂಬಿಕ್ ಸ್ಪೇಸ್ ಸೆಂಟರ್ ಆರಂಭಿಸಲಾಗಿದ್ದರೂ ಅದರ ಅಧಿಕೃತ ಉದ್ಘಾಟನೆಯನ್ನು ಸೆ.7ರಂದು ಶಾಸಕ ಸಂಜೀವ ಮಠಂದೂರು ಅವರು ನೆರವೇರಿಸಿದರು.
ಪುತ್ತೂರು ಇಂಡಸ್ಟ್ರಿಯಲ್, ಐಟಿ ಹಬ್ ಆಗಬೇಕು:
ಉದ್ಘಾಟಿಸಿದ ಬಳಿಕ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಮಾನವನ ಬದುಕಿಗೆ ಅವಿಭಾಜ್ಯ ಅಂಗವಾಗಿದೆ. ಹಳ್ಳಿಯ ಕೃಷಿ ಚಟುವಟಿಕೆಯಲ್ಲೂ ಅಗತ್ಯವಾಗಿದೆ.ಇಂತಹ ಸಂದರ್ಭದಲ್ಲಿ ಕೋವಿಡ್-೧೯ ಬಂದ ಬಳಿಕ ಐಟಿ ಕ್ಷೇತ್ರ ಹಳ್ಳಿ ಹಳ್ಳಿಗೂ ತಲುಪಲು ಸಾಧ್ಯವೆಂಬುದನ್ನು ಮುಳಿಯ ಸಂಸ್ಥೆಯಿಂದ ತೋರಿಸಿಕೊಡಲಾಗಿದೆ.ಒಟ್ಟಿನಲ್ಲಿ ಪುತ್ತೂರು ಮುಂದಿನ ದಿನಗಳಲ್ಲಿ ಇಂಡಸ್ಟ್ರಿಯಲ್ ಹಬ್ ಮತ್ತು ಐಟಿ ಹಬ್ ಆಗಬೇಕು ಎಂಬ ಗುರಿ ನಮ್ಮದು ಎಂದು ಹೇಳಿದರು.ಐಟಿ ಕಂಪೆನಿಗಳು ಮುಂದಿನ ದಿನಗಳಲ್ಲಿ ಯಾಕೆ ಪುತ್ತೂರನ್ನು ಆಯ್ಕೆ ಮಾಡಬಾರದು ಎಂದ ಶಾಸಕರು, ನಮ್ಮೂರಿನ ಯುವಕರು ನಮ್ಮೂರಿನಲ್ಲೇ ಕೆಲಸ ಮಾಡಬೇಕು.ವರ್ಕ್ ಪ್ರಮ್ ಹೋಮ್ ಕಾನ್ಸೆಪ್ಟ್ ಮುಂದೆ ವರ್ಕ್ ಪ್ರಮ್ ಮುಳಿಯ ಎಂದಾಗಬೇಕೆಂದರು.
ಪುತ್ತೂರಿನ ಬೆಳವಣಿಗೆಯಲ್ಲಿ ಪೂರಕ ಯೋಜನೆ:
ಪೌರಾಯುಕ್ತೆ ರೂಪಾ ಶೆಟ್ಟಿಯವರು ಮುಳಿಯ ಕ್ಯೂಬಿಕ್ ಸ್ಪೇಸ್ ಸೆಂಟರ್‌ನ ವೆಬ್ ಪೋರ್ಟ್ ಉದ್ಘಾಟಿಸಿ ಮಾತನಾಡಿ ಶಾಸಕರ ಕಾಳಜಿ ಮತ್ತು ಪ್ರಯತ್ನ ಪುತ್ತೂರಿನ ಬೆಳವಣಿಗೆಗೆ ಪೂರಕವಾಗಿದೆ.ಕ್ಯೂಬಿಕ್ ಸ್ಪೇಸ್ ಸೆಂಟರ್ ಮೂಲಕ ಮಹಾನಗರದಲ್ಲಿರುವ ಪುತ್ತೂರಿನ ಉದ್ಯೋಗಿಗಳಿಗೆ ತುಂಬಾ ಪ್ರಯೋಜನ ಆಗಲಿದೆ ಎಂದರಲ್ಲದೆ ಪುತ್ತೂರಿನ ಮುಳಿಯ ಕ್ಯೂಬಿಕ್ ಸ್ಪೇಸ್ ಮತ್ತು ಮಂಗಳೂರಿನ ದರ ಹೋಲಿಸಿದರೆ ಪುತ್ತೂರಿನಲ್ಲಿ ಬಹಳ ಕಡಿಮೆ ದರ ಇಟ್ಟಿರುವುದು ಉತ್ತಮ ವಿಚಾರ ಎಂದರು.
ಪುತ್ತೂರು ಕೂಡಾ ಬೆಳೆಯುವ ಉದ್ದೇಶ:
ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಐಟಿ ಕಂಪೆನಿ ಉದ್ಯೋಗಿಗಳಿಗೆ ವ್ಯವಸ್ಥೆ ಕಲ್ಪಿಸುವುದು ನಮಗೆ ಚಾಲೆಂಜಿಂಗ್ ಆಗಿ ಬಂದಿತ್ತು.ಆದರೆ ಶಾಸಕರ ಪ್ರೇರಣೆಯಿಂದಾಗಿ ಮುಳಿಯ ಕ್ಯೂಬಿಕ್ ಸ್ಪೇಸ್ ಸೆಂಟರ್ ಆರಂಭಿಸಲಾಯಿತು.ಇಂಟರ್‌ನೆಟ್ ಸೌಲಭ್ಯ ಅಡಚಣೆಯ ಸಮಸ್ಯೆಯಿಂದ ವರ್ಕ್ ಪ್ರಮ್ ಹೋಮ್ ಮಾಡುತ್ತಿರುವ ಐಟಿ ಕಂಪೆನಿಯವರಿಗೆ ಇಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.ಅಡಚಣೆ ಇಲ್ಲದ ವೈ-ಪೈ ಸಂಪರ್ಕ,ಹವಾನಿಯಂತ್ರಿತ ವರ್ಕ್ ಸ್ಟೇಷನ್, ಕಂಪ್ಯೂಟರ್, ತರಬೇತಿ ಹಾಲ್, ಪ್ರೊಜೆಕ್ಟರ್, ಕಾನರೆನ್ಸ್ ಹಾಲ್, ಕಾಫಿ/ಟೀ ಸೌಲಭ್ಯ ನೀಡಲಾಗುತ್ತದೆ.ಒಟ್ಟಿನಲ್ಲಿ ಬೆಂಗಳೂರೊಂದೇ ಬೆಳೆಯದೆ ಅದನ್ನು ಪುತ್ತೂರಿಗೂ ತಲುಪಿಸುವ ಮೂಲಕ ಊರಿನ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗಿದೆ.ಈ ವ್ಯವಸ್ಥೆಯಿಂದ ಕಂಪೆನಿಯ ಉದ್ಯೋಗಿಗಳಿಗೆ ಸಮಯದ ಉಳಿತಾಯ ಆಗಲಿದ್ದು, ದುಬಾರಿ ಖರ್ಚು ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದರು. ಮುಳಿಯ ಸಂಸ್ಥೆಯ ಇನ್ನೋರ್ವ ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಕು.ಆಪ್ತಾ ಚಂದ್ರಮತಿ, ಅಕೌಂಟ್ ಮೆನೇಜರ್ ಹರಿಹರ, ಹೆಚ್.ಆರ್ ಮೆನೇಜರ್ ಶ್ಯಾಮಮೂರ್ತಿ ಅತಿಥಿಗಳನ್ನು ಗೌರವಿಸಿದರು.ಭವ್ಯಶ್ರೀ ಪ್ರಾರ್ಥಿಸಿದರು. ಮುಳಿಯ ಸಂಸ್ಥೆಯ ಅಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸ್ವಾಗತಿಸಿದರು. ಸಂಜೀವ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.ಸುಚಿತ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಗರಸಭಾ ಸದಸ್ಯ ಬಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್‍ಯದರ್ಶಿ ಯುವರಾಜ್, ಯುವಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಜೀವನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಆಫರ್
ಕ್ಯಾಬಿನ್ ರೂ.250 ಮತ್ತು ಜಿಎಸ್‌ಟಿ
ಕೌಂಟರ್ ರೂ.100 ಮತ್ತು ಜಿಎಸ್‌ಟಿ

ಪುತ್ತೂರಿನಲ್ಲಿ ಐಟಿ ಕಂಪೆನಿ:
ದ.ಕ.ಜಿಲ್ಲೆಯ ಯುವಕರು ಮಹಾನಗರಕ್ಕೆ ಹೋಗುವ ಸಂದರ್ಭದಲ್ಲಿ ಸಾವಿರಾರು ರೂ.ಖರ್ಚು ಮಾಡುವ ಬದಲು ತಮ್ಮೂರಿನಲ್ಲೇ ಕೆಲಸ ಮಾಡಬೇಕು.ಅದಕ್ಕಾಗಿ ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಐಟಿ ಕಂಪೆನಿ ನಿರ್ಮಾಣಕ್ಕೆ ಏನು ಮೂಲ ಭೂತ ಸೌಲಭ್ಯ ಬೇಕೋ ಅದನ್ನು ಒದಗಿಸಲು ನಾವು ಬದ್ದರು.ಈಗಾಗಲೇ ಬೆಂಗಳೂರಿನಲ್ಲಿ ಕೌಶಲ್ಯ ವೃದ್ದಿ ಮತ್ತು ಉದ್ಯೋಗ ಮಿತ್ರ ಇಲಾಖೆಯೊಂದಿಗೆ ಮಾತುಕತೆ ಮಾಡಿ ನಮ್ಮ ಯುವಕರಿಗೆ ಉದ್ಯೋಗಾವಕಾಶ ನೀಡಲು ಪುತ್ತೂರಿನಲ್ಲಿ ಇಂಡಸ್ಟ್ರಿಯಲ್ ಏರಿಯಾ ಮಾಡಲು ೧೦೦ ಎಕ್ರೆಯಷ್ಟು ನಿವೇಶನ ಗುರುತಿಸಿ ಪಹಣಿ ಪತ್ರಗಳು ಸಿದ್ಧವಾಗುತ್ತಿದೆ.ಎಲ್ಲಾ ವ್ಯವಸ್ಥೆಯ ದೃಷ್ಟಿಯಿಂದ ಪುತ್ತೂರು ಕೇಂದ್ರ ಸ್ಥಾನ ಆಗಿದ್ದರಿಂದ ಪುತ್ತೂರಿನಲ್ಲಿ ಐಟಿ ಕಂಪೆನಿಗಳು ಆರಂಭ ಆಗಬೇಕು.ಅದಕ್ಕೆ ನಾಂದಿಯಾಗಿ ಮುಳಿಯಲ್ಲಿ ಕ್ಯೂಬಿಕ್ ಸ್ಪೇಸ್ ಸೆಂಟರ್ ಆರಂಭಿಸಿದ್ದು, ಜಿಲ್ಲೆಯ ಎಲ್ಲಾ ಯುವಕರು ಬಂದರೂ ಅವರಿಗೆ ಕ್ಯೂಬಿಕ್ ಸ್ಪೇಸ್ ಸೆಂಟರ್ ಮಾಡಲು ಮುಳಿಯ ಸಹೋದರರು ಬದ್ಧರಾಗಿದ್ದಾರೆ.
ಸಂಜೀವ ಮಠಂದೂರು,
ಶಾಸಕರು ಪುತ್ತೂರು

ದೂರದಲ್ಲಿರುವ ತಮ್ಮ ಕಂಪನಿಗಳಿಗೆ ಕೆಲಸ ನಿರ್ವಹಿಸಲು ಅಸಾಧ್ಯವಾದರೆ ಇನ್ನೊಂದು ಕಡೆ ಮನೆಯಲ್ಲಿ ಕುಳಿತು ಕೆಲಸ ಮಾಡುವುದಕ್ಕೂ ಕಷ್ಚ ಸಾಧ್ಯತೆಯಿದೆ.ಇದರ ಜೊತೆಯಲ್ಲೇ ಇಂಟರ್‌ನೆಟ್ ಸಮಸ್ಯೆಯೂ ಎದುರಾಗುತ್ತಿರುವ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು, ಪ್ರೊ-ಶನಲ್ ಕೆಲಸದ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ.ಅಡಚಣೆ ಇಲ್ಲದ ವೈ-ಫೈ ಸಂಪರ್ಕವಿದೆ.ಸಂಪೂರ್ಣ ಹವಾ ನಿಯಂತ್ರಿತ ವರ್ಕ್ ಸ್ಟೇಷನ್, ಕಂಪ್ಯೂಟರ್, ಕಾನರೆನ್ಸ್ ಹಾಲ್, ಕೆಲಸದ ನಡುವೆ ಸವಿಯಲು ಕಾಫಿ, ಟೀ ವ್ಯವಸ್ಥೆಯಿದೆ. ಈಗಾಗಲೇ 30ಕ್ಕಿಂತಲೂ ಹೆಚ್ಚು ಕ್ಯೂಬಿಕಲ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಕ್ಯೂಬಿಕ್ ಸ್ಪೇಸ್‌ಗೆ ದಿನಕ್ಕೆ ರೂ.೧೦೦ ಮತ್ತು ಜಿಎಸ್‌ಟಿ, ಪ್ರತ್ಯೇಕ ಕೊಠಡಿಯಾದಲ್ಲಿ ರೂ.250ಮತ್ತು ಜಿಎಸ್‌ಟಿ ದರ ನಿಗದಿ ಪಡಿಸಲಾಗಿದೆ.
ಕೇಶವಪ್ರಸಾದ್ ಮುಳಿಯ
ಸಿಎಂಡಿ, ಮುಳಿಯ ಜ್ಯುವೆಲ್ಸ್

ನನಗಂತೂ ತುಂಬಾ ಪ್ರಯೋಜನ ಆಗಿದೆ
ಲಾಕ್‌ಡೌನ್ ಸಂದರ್ಭದಲ್ಲಿ ಊರಿಗೆ ಬಂದಾಗ ಮನೆಯಲ್ಲೇ ಕಂಪೆನಿ ಕೆಲಸ ಮಾಡುವ ಅವಶ್ಯಕತೆ ಇತ್ತು.ಆದರೆ ಮನೆಯಲ್ಲಿ ಇಂಟರ್‌ನೆಟ್ ಸಮಸ್ಯೆ ಇದ್ದಾಗ ಪುತ್ತೂರಿಗೆ ಬಂದು ಸಂಬಂಽಕರ ಮನೆಯಲ್ಲಿ, ಇತರ ಸ್ನೇಹಿತರ ಮನೆ ಸೇರಿದಂತೆ ಇಂಟರ್‌ನೆಟ್ ಸಂಪರ್ಕ ಇರುವಲ್ಲಿಗೆ ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಈ ನಡುವೆ ಮುಳಿಯ ಸಂಸ್ಥೆಯಿಂದ ಕ್ಯೂಬಿಕ್ ಸ್ಪೇಸ್ ಸೆಂಟರ್ ಆರಂಭಿಸಿದ್ದರಿಂದ ನಮ್ಮಂತವರಿಗೆ ಇಲ್ಲಿಗೆ ಬಂದು ತಮ್ಮ ಕಂಪೆನಿ ಕೆಲಸ ಕಾರ್ಯ ಮಾಡಲು ಸುಲಭವಾಗಿದೆ.ಇಲ್ಲಿ ಇಂಟರ್‌ನೆಟ್‌ನ ಸ್ಪೀಡ್ ಕೂಡಾ ಹೆಚ್ಚಾಗಿದ್ದರಿಂದ ನನಗಂತೂ ತುಂಬಾ ಪ್ರಯೋಜನ ಆಗಿದೆ.
ದುರ್ಗಾಪ್ರಸಾದ್ ಪೆರ್ಲಂಪಾಡಿ
ಬೆಂಗಳೂರಿನ ಸಿಸ್ಕೋ ಸಿಸ್ಟಮ್ ಉದ್ಯೋಗಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.