HomePage_Banner
HomePage_Banner
HomePage_Banner

ಅಕ್ರಮ, ಅವ್ಯವಹಾರಗಳಿಗೆ ಕಠಿಣ ಕಡಿವಾಣ: ಪುತ್ತೂರು ಉಪವಿಭಾಗದ ನೂತನ ಎಎಸ್‌ಪಿ ಲಖನ್ ಸಿಂಗ್ ಯಾದವ್

Puttur_Advt_NewsUnder_1
Puttur_Advt_NewsUnder_1

ಸಂದರ್ಶನ
ಲೋಕೇಶ್ ಬನ್ನೂರು
ಶಿವಪ್ರಸಾದ್ ರೈ ಪೆರ್ವಾಜೆ

 

ಪುತ್ತೂರು: ಪೊಲೀಸ್ ಇಲಾಖೆಯ ಎದುರು ಸವಾಲುಗಳ ಮೇಲೆ ಸವಾಲುಗಳಿವೆ. ಒಂದಲ್ಲ ಒಂದು ರೀತಿಯ ಅಕ್ರಮ, ಅವ್ಯವಹಾರಗಳು ಹೆಚ್ಚುತ್ತಲೇ ಇವೆ. ಇವುಗಳ ಸಂಪೂರ್ಣ ನಿಯಂತ್ರಣ ಖಡಕ್ ಪೊಲೀಸ್ ಅಧಿಕಾರಿಗಳ ಖಡಕ್ ನಿರ್ಧಾರಗಳಿಂದ ಮಾತ್ರ ಸಾಧ್ಯವಾಗಬಲ್ಲುದು. ಪುತ್ತೂರು ಉಪವಿಭಾಗಕ್ಕೆ ನೂತನ ಎಎಸ್‌ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ, ಮೈಸೂರಿನಲ್ಲಿ ಪ್ರೊಬೆಷನರಿ ಅವಧಿ ಮುಗಿಸಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಜವಾಬ್ದಾರಿಯುತ ಅಧಿಕಾರ ವಹಿಸಿಕೊಂಡಿರುವ ಐಪಿಎಸ್ ಅಧಿಕಾರಿ ಲಖನ್ ಸಿಂಗ್ ಯಾದವ್‌ರವರನ್ನು `ಸುದ್ದಿ ವಿಶೇಷ ಸಂದರ್ಶನ ನಡೆಸಿದೆ. ಸಂದರ್ಶನದ ಆಯ್ದ ವಿಚಾರಗಳನ್ನು ಇಲ್ಲಿ ನೀಡಿ‌ದ್ದೇವೆ. ಇದರ ವಿಡಿಯೋ ಸಂದರ್ಶನ `ಸುದ್ದಿ ನ್ಯೂಸ್ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿ.

ನಿಮ್ಮ ಪ್ರೊಬೆಷನರಿ ಅವಧಿಯ ಅನುಭವ ಹೇಗಿತ್ತು ?: ಪ್ರೊಬೆಷನರಿ ಅವಧಿ ಎಂಬುದು ಸಂಪೂರ್ಣ ಕಲಿಕೆಯ ಅವಧಿ. ಈಗ ಪುತ್ತೂರಿಗೆ ಎಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡು ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುತ್ತೇನೆ. ಈಗ ಕಲಿಕೆಯ ಜೊತೆಗೆ ಜವಾಬ್ದಾರಿಯ ಕೆಲಸವೂ ನಿರ್ವಹಿಸಬೇಕಾಗಿದೆ. ೯ ಪೊಲೀಸ್ ಸ್ಟೇಷನ್‌ಗಳಲ್ಲಿ ಬೇರೆ ಬೇರೆ ರೀತಿಯ ಕರ್ತವ್ಯಗಳನ್ನು ಮಾಡಿ ಇಲ್ಲಿಗೆ ಬಂದಿರುತ್ತೇನೆ.

ಪುತ್ತೂರು ಉಪವಿಭಾಗದ ಬಗ್ಗೆ ನಿಮಗೇನು ಗೊತ್ತಿದೆ ?
ಈ ಬಗ್ಗೆ ಈಗಾಗಲೇ ಡಿಎಸ್‌ಪಿ ದಿನಕರ್ ಶೆಟ್ಟಿ ಜೊತೆ ಚರ್ಚಿಸಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ.

ಅಕ್ರಮ ಗೋ ಸಾಗಾಟ ಮತ್ತು ಇದರಿಂದ ಉಂಟಾಗುವ ಕೋಮು ಸಂಘರ್ಷ ತಡೆಗಟ್ಟಲು ಏನು ಕ್ರಮ ಕೈಗೊಳ್ಳುತ್ತೀರಿ ?
ಇದೊಂದು ಅತ್ಯಂತ ಸೂಕ್ಷ್ಮ ತನಿಖೆಯಾಗಿರುತ್ತದೆ. ಮೊದಲು ಗೋ ಸಾಗಾಟ ಅಕ್ರಮವಾ ? ಅಥವಾ ಸಾಕಾಣಿಕೆಗೆ ತಗೊಂಡು ಹೋಗ್ತಿದ್ದಾರಾ ಎಂಬುದನ್ನು ಕಂಡುಹಿಡಿಯಬೇಕಾಗಿದೆ. ಈ ಬಗ್ಗೆ ನನ್ನ ಪೊಲಿಸ್ ಇನ್ಸ್‌ಪೆಕ್ಟರ್ ಮತ್ತು ಸಿಬಂದಿಗಳಿಗೆ ಸೂಕ್ಷ್ಮವಾಗಿ ಪರಿಗಣಿಸಲು ಸೂಚನೆ ನೀಡುತ್ತೇನೆ. ಆದರೆ ಇಲ್ಲಿ ಯಾವುದೇ ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಇದು ಕಾನೂನು ಬಾಹಿರ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವವರಿಗೆ  ಇದು ಎಚ್ಚರಿಕೆಯೂ ಆಗಿದೆ.

ಡ್ರಗ್ಸ್, ಗಾಂಜಾದಂತಹ ಮಾದಕ ವಸ್ತುಗಳ ವ್ಯವಹಾರ ತಡೆಗಟ್ಟಲು ಕ್ರಮಗಳೇನು ?
ಮಾದಕ ವ್ಯಸನ ವಿರೋಧಿ ಕಾಯ್ದೆಯಡಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯ ಕ್ರಮಗಳ ಬಗ್ಗೆಯೂ ಚರ್ಚಿಸಬೇಕಾಗಿದೆ. ಸಬ್‌ಇನ್ಸ್‌ಪೆಕ್ಟರ್‌ಗಳ ಜೊತೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.

ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಗಾಂಜಾ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಏನು ಕ್ರಮ ?
ನಮ್ಮ ಪೊಲೀಸ್ ಇಲಾಖೆಯ ಗುಪ್ತಚರ ಕಾರ್ಯತಂತ್ರಗಳನ್ನು ಅನುಸರಿಸಿ ಎಲ್ಲೆಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿದೆ ಎಂದು ತಿಳಿದುಕೊಂಡು ಇದರ ಬಗ್ಗೆ ಅತ್ಯಂತ ಗಂಭೀರವಾಗಿ ಕ್ರಮ ಕೈಗೊಳ್ಳಲಿದ್ದೇನೆ. ಸುಳಿವು ಲಭ್ಯವಾದೊಡನೆ ದಾಳಿ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದೇವೆ. ಡ್ರಗ್ಸ್ ವಿಷಯದಲ್ಲಿ ವಿಚಾರಣೆಯೂ ಅತೀ ಮುಖ್ಯವಾಗಿರುತ್ತದೆ. ಆರೋಪ ಸಾಬೀತಾದರೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ.

ಗಾಂಜಾ ಸೇವನೆ ಮತ್ತು ವ್ಯವಹಾರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಹೇಗೆ ?
ಗಾಂಜಾ ವ್ಯವಹಾರಗಳಿಂದ ಉಂಟಾಗುವ ಹಾನಿ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಇಲಾಖೆಯಲ್ಲಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿದ್ದೇವೆ. ಗಾಂಜಾ ವ್ಯವಹಾರದಲ್ಲಿ ಉಂಟಾಗುವ ಹಾನಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಭೀತಿ ಸೃಷ್ಟಿಸುವ ಕಾರ್ಯ ನಡೆಸಲಿದ್ದೇವೆ.

ಹೆಣ್ಮಕ್ಕಳ ಮೇಲೆ ದೌರ್ಜನ್ಯ ತಡೆಗೆ ಕ್ರಮಗಳೇನು ?
ಹೆಣ್ಮಕ್ಕಳ ಮೇಲೆ ದೌರ್ಜನ್ಯ ವಿಚಾರದಲ್ಲಿ ಪುತ್ತೂರು ಉಪವಿಭಾಗದಲ್ಲಿ ಈ ಹಿಂದಿನ ಕೆಲವು ಘಟನೆಗಳನ್ನು ಅಧ್ಯಯನ ನಡೆಸಬೇಕಾಗಿದೆ. ಆ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಮಹಿಳಾ ಪೊಲೀಸ್ ಠಾಣೆ ಇದೆ. ವಿಶೇಷ ಮಹಿಳಾ ಪೊಲೀಸ್ ಪಡೆ ಇದೆ. ಮಹಿಳೆಯರ ಮೇಲಿನ ದೌರ್ಜನ್ಯ, ಸಮಸ್ಯೆಗಳನ್ನು ಪರಿಹರಿಸಲು ಅವರು ವಿಶೇಷವಾಗಿ ಕರ್ತವ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುತ್ತೇನೆ.

ಪೋಕ್ಸೋ ಕಾಯ್ದೆ ದುರ್ಬಳಕೆ ಮಾಡುವುದರ ವಿರುದ್ದ ಕ್ರಮಗಳೇನು ?
ಈ ಬಗ್ಗೆ ಸೂಕ್ಷ್ಮ ಮತ್ತು ಅತ್ಯಂತ ಆಂತರಿಕ ತನಿಖೆಗಳನ್ನು ನಡೆಸುವ ತಂತ್ರಗಳಿವೆ. ಇದರಿಂದಾಗಿ ದುರ್ಬಳಕೆ ಮಾಡುವುದು ನಿಲ್ಲುತ್ತದೆ.

ಪುತ್ತೂರಿನಲ್ಲಿ ನಿಮ್ಮ ಆರಂಭದ ಕ್ರಮವೇನು ?
ಯಾವುದೇ ಕ್ರಮ ಕೈಗೊಳ್ಳುವ ಮೊದಲು ಇಲ್ಲಿನ ಪಾಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ಅಧ್ಯಯನ ಮಾಡಬೇಕಿದೆ. ೨-೩ ದಿನಗಳಲ್ಲಿ ಅಧ್ಯಯನ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಬಹಿರಂಗಪಡಿಸಲಿದ್ದೇನೆ. ಅಲ್ಲಿಯ ತನಕ ಕೇವಲ ಪೊಲೀಸ್ ಸಿಬಂದಿಯಾಗಿ ವರ್ಕ್ ಮಾಡಲಿದ್ದೇನೆ. ಪಾಸಿಟಿವ್ ವಿಚಾರಗಳ ಬಗ್ಗೆ ಫೋಕಸ್ ಮಾಡಲು ಇನ್ಸ್‌ಪೆಕ್ಟರ್ ಮತ್ತು ಸಿಬಂದಿಗಳಿಗೆ ಸೂಚನೆ ನೀಡುತ್ತೇನೆ.

ಪೊಲೀಸ್ ಸಿಬಂದಿ ಮತ್ತು ಪುತ್ತೂರಿನ ಜನತೆಯಿಂದ ಏನು ಬಯಸುತ್ತೀರಿ ?
ಪುತ್ತೂರಿನ ಜನತೆಯಿಂದ ನಾನು ಪ್ರೀತಿಯನ್ನು ಬಯಸುತ್ತೇನೆ. ಅವರು ನನ್ನನ್ನು ಸ್ವೀಕರಿಸಬೇಕು. ಹೊರರಾಜ್ಯದಿಂದ ಬಂದವನಾದ್ದರಿಂದ ಇಂಗ್ಲೀಷ್ ಭಾಷೆ ಮಾತನಾಡಿದರೂ ಕನ್ನಡದಲ್ಲಿ ಮಾತನಾಡಬಲ್ಲೆ, ವ್ಯವಹರಿಸಬಲ್ಲೆ. ಪೊಲೀಸ್ ಸಿಬಂದಿಗಳು ಈಗಾಗಲೇ ಕೋವಿಡ್‌ನಿಂದಾಗಿ ಹೆಚ್ಚುವರಿಯಾಗಿ ಕಠಿಣ ಶ್ರಮ ವಹಿಸುತ್ತಿದ್ದಾರೆ. ಅವರ ಮೇಲೆ ಒತ್ತಡವಿದೆ. ಅವರಿಂದ ಜನತೆಗೆ ಒಳ್ಳೆಯದನ್ನು ಆಗುವುದನ್ನೇ ಬಯಸುತ್ತೇನೆ. ಜನರ ಕಾರ್ಯದಲ್ಲಿ ಅವರೊಂದಿಗೆ ಸದಾ ಇರುತ್ತೇನೆ.

ನಮ್ಮ ಪೊಲೀಸ್ ಇಲಾಖೆಯ ಗುಪ್ತಚರ ಕಾರ್ಯತಂತ್ರಗಳನ್ನು ಅನುಸರಿಸಿ ಎಲ್ಲೆಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿದೆ ಎಂದು ತಿಳಿದುಕೊಂಡು ಇದರ ಬಗ್ಗೆ ಅತ್ಯಂತ ಗಂಭೀರವಾಗಿ ಕ್ರಮ ಕೈಗೊಳ್ಳಲಿದ್ದೇನೆ. ಸುಳಿವು ಲಭ್ಯವಾದೊಡನೆ ದಾಳಿ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದೇವೆ ಲಖನ್ ಸಿಂಗ್ ಯಾದವ್ ನೂತನ ಎಎಸ್‌ಪಿ ಪುತ್ತೂರು ಉಪವಿಭಾಗ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.