ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಆಸರೆಯಾದ ಪುಣಚ ನಾಗರೀಕ ಹಿತ ರಕ್ಷಣಾ ವೇದಿಕೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ರಸ್ತೆ ಬದಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಹಿಡಿದು ಸ್ನಾನ ಮಾಡಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಪುಣಚದಿಂದ ವರದಿಯಾಗಿದೆ.

ಪುಣಚ ಪರಿಯಾಲ್ತಡ್ಕದಲ್ಲಿ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದ ವೃದ್ಧರೋರ್ವರು ಅಲೆದಾಡುತ್ತಿರುವುದನ್ನು ನೋಡಿದ ಪುಣಚ ನಾಗರೀಕ ಹಿತ ರಕ್ಷಣಾ ವೇದಿಕೆಯ ಕಾರ್ಯದರ್ಶಿ ವೆಂಕಟ್ರಮಣ ಪುಣಚರವರು ಅವರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ಮಾಹಿತಿ ತಿಳಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ಜಿಪಂ ಇಒ ಸೆಲ್ವಮಣಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್‌ರವರಿಗೆ ಸೂಚನೆ ನೀಡಿದ್ದರು. ಉಸ್ಮಾನ್‌ರವರು ಪುಣಚ ಗ್ರಾಪಂ ಆಡಳಿತಾಧಿಕಾರಿ ಸುಧಾ ಜೋಶಿಯವರಿಗೆ ಮಾಹಿತಿ ನೀಡಿದ್ದರು. ಸುಧಾ ಜೋಶಿಯವರು ನಿರ್ದೇಶನದ ಮೇರೆಗೆ ಪುಣಚ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಮಾನಸಿಕ ವ್ಯಕ್ತಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಕೆಲಸ ನಡೆದಿದೆ.

 

ಹೊಸ ಬಟ್ಟೆ ಕೊಡಿಸಿದ ರಾಮ ನಾಯ್ಕರು
ಮಾನಸಿಕ ಅಸ್ವಸ್ಥರಾಗಿದ್ದ ವೃದ್ಧ ಕೊಳಕು ಬಟ್ಟೆಯನ್ನು ಉಟ್ಟಿದ್ದರು. ಗ್ರಾಪಂ ಬಿಲ್ ಕಲೆಕ್ಟರ್ ರಾಮ ನಾಯ್ಕರವರು ವೃದ್ಧರಿಗೆ ಹೊಸ ಬಟ್ಟೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವೃದ್ಧರನ್ನು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಅಜ್ಜಿನಡ್ಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ಕನ್ಯಾನದ ವೃದ್ಧಾಶ್ರಮಕ್ಕೆ ಸೇರಿಸಲಾಗಿದೆ. ರಸ್ತೆಯುದ್ಧಕ್ಕೂ ಅಳೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗಳನ್ನು ಮಾನವೀಯ ನೆಲೆಯಲ್ಲಿ ಉಪಚರಿಸುವ ಮೂಲಕ ಅವರಿಗೂ ನೆಮ್ಮದಿಯ ಬದುಕು ದೊರಕಿಸಿ ಕೊಡುವುದರಿಂದ ತೃಪ್ತಿ ಸಿಗುತ್ತದೆ ಎನ್ನುತ್ತಾರೆ ವೆಂಕಟ್ರಮಣ ಪುಣಚರವರು. ಇವರ ಈ ಕಾರ್ಯಕ್ಕೆ ಗ್ರಾಮದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.