ಕೂಡುರಸ್ತೆ: ಎಸ್ಕೆಎಸ್ಸೆಸ್ಸೆಫ್‌ನಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕೂಡುರಸ್ತೆ ಶಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡುರಸ್ತೆ ರಿಫಾಯಿಯ್ಯ ಮದ್ರಸ ಸಭಾಂಗಣದಲ್ಲಿ ನಡೆಯಿತು. ಕೂಡುರಸ್ತೆ ಮಸೀದಿ ಗೌರವಾದ್ಯಕ್ಷ ಮಾಹಿನ್ ಹಾಜಿ ಬಾಳಾಯ ಸಭೆಯ ಅದ್ಯಕ್ಷತೆ ವಹಿಸಿದ್ದರು. ಕೂಡುರಸ್ತೆ ಖತೀಬ್ ಹಾಜಿ ಯಾಕೂಬ್ ದಾರಿಮಿ ದುವಾ ಮಾಡಿದರು.

ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯ ಅಧ್ಯಕ್ಷ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆಯವರು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಕೂಡುರಸ್ತೆ ಶಾಖಾಧ್ಯಕ್ಷ ಅಬ್ದುಲ್ ಮಜೀದ್ ಬಾಳಾಯ ಸಮಯೋಚಿತವಾಗಿ ಮಾತನಾಡಿದರು.

ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ರಹ್ಮಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಲಯ ಸಂಘಟನಾ ಕಾರ್ಯದರ್ಶಿ ನಝೀರ್ ಅರ್ಶದಿ, ವಿಖಾಯ ಚೇರ್‌ಮೆನ್ ಮನ್ಸೂರ್ ಮೌಲವಿ ಅಮ್ಚಿನಡ್ಕ, ವಿಖಾಯ ಕನ್ವೀನರ್ ಇಬ್ರಾಹಿಂ ಕಡವ, ಶುಭ ಹಾರೈಸಿದರು.

ಕೂಡುರಸ್ತೆ ಮಸೀದಿ ಅಧ್ಯಕ್ಷ ಪಿ.ಕೆ.ಮಹಮ್ಮದ್, ರಿಫಾಯಿಯ್ಯ ಯೂತ್ ಫೆಡರೇಶನ್ ಅಧ್ಯಕ್ಷ ಇಬ್ರಾಹಿಂ ಅಜ್ಜಿಕಲ್ಲು, ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಶಾಖಾಧ್ಯಕ್ಷ ಅಬ್ದುಲ್ ಅಝೀಝ್ ರೆಂಜಲಾಡಿ, ಕೂಡುರಸ್ತೆ ಮಸೀದಿ ಪ್ರ. ಕಾರ್ಯದರ್ಶಿ ಉಮ್ಮರ್ ಬಾಳಾಯ, ಎಸ್ಕೆಎಸ್ಸೆಸ್ಸೆಫ್ ಕೂಡುರಸ್ತೆ ಶಾಖಾ ಉಪಾಧ್ಯಕ್ಷ ಮಹಮ್ಮದ್ ಅಝರುದ್ದೀನ್, ಸಂಘಟನಾ ಕಾರ್ಯದರ್ಶಿ ನೌಫಲ್ ಅಜ್ಜಿಕ್ಕಲ್, ಕೋಶಾಧಿಕಾರಿ ಸಾದಿಕ್ ಬಾಳಾಯ, ಸದರ್ ಮುಅಲ್ಲಿಂ ಸಿದ್ದೀಕ್ ಅಝ್ಹರಿ, ಖಾಸಿಂ ಯಮಾನಿ, ಹಾರಿಸ್ ಕೂಡುರಸ್ತೆ, ಶರೀಫ್ ಅಜ್ಜಿಕ್ಕಲ್, ಇಸ್ಮಾಯಿಲ್ ಸುಲ್ತಾನ್, ಹನೀಫ್ ಕೂಡುರಸ್ತೆ, ಆರಿಫ್ ಕೂಡುರಸ್ತೆ, ಬಾತಿಷಾ ಸುಲ್ತಾನ್, ಆಶಿಷ್ ಪಿ.ಕೆ, ಸುಹೈಲ್ ಪಿ.ಕೆ, ಹುಸೈನ್, ಅನ್ಸಾರ್ ಬಾಳಾಯ, ಶಾಕಿಫ್ ಕೂಡುರಸ್ತೆ ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ಕೂಡುರಸ್ತೆ ಪ್ರಧಾನ ಕಾರ್ಯದರ್ಶಿ ಆಶಿಕ್ ಅಜ್ಜಿಕ್ಕಲ್ ಸ್ವಾಗತಿಸಿದರು. ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ:
ದ್ವಿತೀಯ ಪಿ.ಯು.ಸಿ.ಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಿತೇಶ್ ರೈ ಮೇಗಿನಗುತ್ತು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ೬೧೩ ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡ ಸರ್ವೆ ಎಸ್.ಜಿಎಂ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯೀಷತ್ ಶಮಾ ಬಡಕೋಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.