ಕುಂತೂರು: ಅಪ್ಪಿ ಶೆಟ್ಟಿಯವರ ಉತ್ತರಕ್ರಿಯೆ, ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಆ.೨೬ರಂದು ನಿಧನರಾದ ಕುಂತೂರು ಗ್ರಾಮದ ಕೇವಳ ಪಟ್ಟೆ ಶ್ರೀಮತಿ ಅಪ್ಪಿ ಶೆಟ್ಟಿಯವರ ಉತ್ತರಕ್ರಿಯೆ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮ ಸೆ.೭ರಂದು ನಡೆಯಿತು.

ಬೆಳಿಗ್ಗೆ ಮೃತರ ಮನೆಯಲ್ಲಿ ಬಂಟ ಸಮಾಜದ ಪ್ರಕಾರ ನಡೆಯುವ ಉತ್ತರ ಕ್ರಿಯಾಧಿ ಕಾರ್ಯಕ್ರಮ ನಡೆಸಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಪಿಂಡ ಪ್ರಧಾನ ನಡೆಯಿತು. ನಂತರ ಉಪ್ಪಿನಂಗಡಿ ಶಕ್ತಿ ಭವನದಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಯವರು ಮಾತನಾಡಿ, ಕೇವಳ ಪಟ್ಟೆ ದಿ. ತ್ಯಾಂಪಣ್ಣ ಶೆಟ್ಟಿಯವರ ಪತ್ನಿಯಾದ ಅಪ್ಪಿ ಶೆಟ್ಟಿಯವರು ೭ ಜನ ಪುತ್ರರು, ಓರ್ವ ಪುತ್ರಿ, ೧೬ ಮೊಮ್ಮಕ್ಕಳು ಹಾಗೂ ಇಬ್ಬರು ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೃತರು ಸತ್ಯ, ನಿಷ್ಟೆ, ಪ್ರಾಮಾಣಿಕತೆಯಿಂದ ಪ್ರೀತಿ ವಾತ್ಸಲ್ಯದ ಪ್ರತಿರೂಪವಾಗಿ ಎಲ್ಲರೊಂದಿಗೆ ಬೆರೆಯುವ ಮೂಲಕ ಗೌರವಾನ್ವಿತ ಸಾರ್ಥಕ ಬದುಕು ಕಂಡವರು ಎಂದು ಹೇಳಿದರು. ಮೃತರ ಪುತ್ರರಾದ ಕಿಟ್ಟಣ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಆನಂದ ಶೆಟ್ಟಿ, ಮೋಹನ ಶೆಟ್ಟಿ, ದಾಮೋದರ ಶೆಟ್ಟಿ, ಪ್ರಭಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪುತ್ರಿ ಶ್ರೀಮತಿ ಪ್ರೇಮ ಹಾಗೂ ಕುಟುಂಬಸ್ಥರು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.