ಮುರ: ಹಿಟ್ ಆಂಡ್ ರನ್ – ಟ್ರಾಫಿಕ್ ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ಚೇಸಿಂಗ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರದಲ್ಲಿ ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿರುವ ಮಾರುತಿ ಓಮ್ನಿಯನ್ನು ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರು ಇಲಖಾ ಜೀಪಿನಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಕುಳ ಗ್ರಾಮದ ಅಳಕೆಮಜಲಿನಲ್ಲಿ ಓಮ್ನಿಯನ್ನು ರೌಂಡ್‌ಅಪ್ ಮಾಡಿದ ಘಟನೆ ಸೆ.9ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ.

ಮುರದಲ್ಲಿ ಸ್ಕೂಟರ್‌ವೊಂದಕ್ಕೆ ಕೇರಳ ನೊಂದಾವಣೆಯ ಮಾರುತಿ ಓಮ್ನಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಡಾಮರು ರಸ್ತೆಗೆ ಬಿದ್ದು, ಸವಾರನಿಗೆ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿ ಮಾರುತಿ ಓಮ್ನಿ ಡಿಕ್ಕಿಯಾಗಿ ಪರಾರಿಯಾಗಿತ್ತು. ಈ ಕುರಿತು ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಠಾಣೆಯಿಂದ ಅದೇ ಪರಿಸರದಲ್ಲಿನ ಎಸ್.ಐ ಅವರಿಗೆ ಮಾಹಿತಿ ನೀಡಿದಂತೆ ಕಾರ್ಯಪ್ರವೃತರಾದ ಎಸ್.ಐ ರಾಮನಾಯ್ಕ ಅವರು ಪರಾರಿಯಾಗುತ್ತಿದ್ದ ಮಾರುತಿ ಓಮ್ನಿಯನ್ನು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿ ಅಳಕೆಮಜಲಿನಲ್ಲಿ ಮಾರುತಿ ಓಮ್ನಿಯನ್ನು ರೌಂಡ್‌ಅಪ್ ಮಾಡಿ ಓಮ್ನಿ ಚಾಲಕನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಮೋಟಾರು ಕಾಯ್ದೆ, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ತಕ್ಷಣ ಕಾರ್ಯಪ್ರವೃತರಾಗಿರುವ ವಾರದ ಹಿಂದೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಆಗಿ ಕರ್ತವ್ಯಕ್ಕೆ ಹಾಜರಾಗಿರುವ ಎಸ್.ಐ ರಾಮ ನಾಯ್ಕ ಅವರಿಗೆ ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.