ನೆಲ್ಯಾಡಿ: ಜೇಸಿ ಸಪ್ತಾಹ-2020 ‘ಸಪ್ತ ಸಂಭ್ರಮ’ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಜೇಸಿಐ ನೆಲ್ಯಾಡಿ ಹಾಗೂ ಜೇಸಿರೆಟ್ ಮತ್ತು ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ಸೆ.೯ರಿಂದ ೧೫ರ ತನಕ ನಡೆಯುವ ೩೭ನೇ ವರ್ಷದ ಜೇಸಿ ಸಪ್ತಾಹ-೨೦೨೦’ಸಪ್ತ ಸಂಭ್ರಮ’ ಇದರ ಉದ್ಘಾಟನೆ, ಆಟೋ ರಿಕ್ಷಾ ಚಾಲಕ-ಮಾಲಕರಿಗೆ ಮಾಸ್ಕವಿತರಣೆ ಹಾಗೂ ನೆಲ್ಯಾಡಿ ಗ್ರಾ.ಪಂ.,ಮತ್ತು ಕೆನರಾ ಬ್ಯಾಂಕ್‌ಗೆ ಸ್ಯಾನಿಟೈಸರ್ ಸ್ಟ್ಯಾಂಡ್ ವಿತರಣೆ ಕಾರ್ಯಕ್ರಮ ಸೆ.೯ರಂದು ನೆಲ್ಯಾಡಿ ಆಟೋ ರಿಕ್ಷಾ ನಿಲ್ದಾಣದಲ್ಲಿ ನಡೆಯಿತು.

ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೇಸಿ ಸಂಸ್ಥೆಯ ಮೂಲಕ ವ್ಯಕ್ತಿತ್ವ ವಿಕಸನ ಆಗಲಿದೆ. ಇಲ್ಲಿನ ಜೇಸಿ ಸಂಸ್ಥೆಯ ಮೂಲಕ ಬೆಳೆಯುತ್ತಿರುವಂತಹ ನೆಲ್ಯಾಡಿಗೆ ಹಲವಾರು ಕೊಡುಗೆಗಳು ದೊರೆತಿದೆ. ಜೇಸಿ ಸಪ್ತಾಹದ ಅಂಗವಾಗಿ ಮುಂದಿನ ೧ ವಾರ ನಡೆಯುವ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ. ಯುವ ಸಮುದಾಯ ಜೇಸಿ ಸಂಸ್ಥೆಯಲ್ಲಿ ತೊಡಗಿಕೊಳ್ಳುವಂತೆ ಆಗಲಿ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಅಧ್ಯಕ್ಷ ಶಿವಪ್ರಸಾದ್‌ರವರು ಸ್ವಾಗತಿಸಿ ಮಾತನಾಡಿ, ಜೇಸಿ ಸಪ್ತಾಹದ ಅಂಗವಾಗಿ ಸೆ.೯ರಿಂದ ೧೫ರ ತನಕ ವಿವಿಧ ಕಾರ್ಯಕ್ರಮಗಳು, ಕೊಡುಗೆಗಳ ಹಸ್ತಾಂತರ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯರವರು ಕೊರೋನಾ ವೈರಸ್ ಬರದಂತೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಿದರು. ತಾ.ಪಂ.ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಆಡಳಿತಾಧಿಕಾರಿ ಹೊನ್ನಪ್ಪ ಗೌಡ, ನೆಲ್ಯಾಡಿ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಹರೀಶ್ ನಾಕ್, ನೆಲ್ಯಾಡಿ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ನೆಲ್ಯಾಡಿ ಜೆಸಿಐ ನಿಕಟಪೂರ್ವಾಧ್ಯಕ್ಷ ಇಸ್ಮಾಯಿಲ್ ಕೆ. ಸಂದರ್ಭೋಚಿತವಾಗಿ ಮಾತನಾಡಿದರು. ಜೇಸಿ ಸಪ್ತಾಹದ ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ವಂದಿಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಡಾ.ಸದಾನಂದ ಕುಂದರ್ ಕಾರ್‍ಯಕ್ರಮ ನಿರೂಪಿಸಿದರು. ಜೆಸಿಐ ಕಾರ್ಯದರ್ಶಿ ಗಿರೀಶ್, ಘಟಕಾಡಳಿತ ಮಂಡಳಿಯ ಸದಸ್ಯರುಗಳಾದ ದಯಾನಂದ ಕೆ.ಆದರ್ಶ, ರವಿಚಂದ್ರ ಹೊಸವೊಕ್ಲು, ಮೋಹನ್ ಕುಮಾರ್ ಡಿ., ಮೇರಿಜಾನ್, ಮೋಹನ್ ವಿ., ವಿನ್ಯಾಸ್ ಬಂಟ್ರಿಯಾಲ್ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕೊಡುಗೆ ಹಸ್ತಾಂತರ:
ನೆಲ್ಯಾಡಿ ಜೆಸಿಐ ವತಿಯಿಂದ ನೆಲ್ಯಾಡಿ ಗ್ರಾಮ ಪಂಚಾಯತ್ ಹಾಗೂ ಕೆನರಾ ಬ್ಯಾಂಕ್‌ನ ನೆಲ್ಯಾಡಿ ಶಾಖೆಗೆ ಪರ್ಮನೆಂಟ್ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆಯಾಗಿ ನೀಡಲಾಯಿತು. ಕೆನರಾ ಬ್ಯಾಂಕ್ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಹರೀಶ್ ನಾಕ್, ನೆಲ್ಯಾಡಿ ಗ್ರಾ.ಪಂ.ಆಡಳಿತಾಧಿಕಾರಿ ಹೊನ್ನಪ್ಪ ಗೌಡರವರು ಕೊಡುಗೆ ಸ್ವೀಕರಿಸಿದರು. ನೆಲ್ಯಾಡಿಯ ಆಟೋ ಚಾಲಕ ಮತ್ತು ಮಾಲಕರಿಗೆ ಈ ವೇಳೆ ಮಾಸ್ಕ್ ವಿತರಣೆ ಮಾಡಲಾಯಿತು. ನೆಲ್ಯಾಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆಯವರು ಮಾಸ್ಕ್ ಸ್ವೀಕರಿಸಿದರು.]

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.