ಸಂಪ್ಯ: ಎಸ್.ವೈ.ಎಸ್, ಎಸ್ಸೆಸ್ಸೆಫ್‌ನಿಂದ ಸರಕಾರಿ ಯೋಜನೆಗಳ ನೋಂದಣಿ, ಕಾರ್ಡ್ ವಿತರಣೆ

ಪುತ್ತೂರು: ಎಸ್.ವೈ.ಎಸ್ ಹಾಗೂಎಸ್ಸೆಸ್ಸೆಫ್ ಸಂಪ್ಯ ಶಾಖೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳು ಹಾಗೂ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ನೋಂದಣಿ ಅಭಿಯಾನ ಹಾಗೂ ಕಾರ್ಡು ವಿತರಣಾ ಕಾರ್ಯಕ್ರಮ ಸಂಪ್ಯ ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು. ಪಿ.ಎಂ ಕಿಸಾನ್ ಯೋಜನೆ, ಹಿರಿಯ ನಾಗರಿಕ ಕಾರ್ಡ್ ಹಾಗೂ ಆಯುಷ್ಮಾನ್ ಕಾರ್ಡ್ ಹೀಗೆ ಹಲವು ಯೋಜನೆಗಳ ನೋಂದಣಿ ಹಾಗೂ ಕಾರ್ಡು ವಿತರಣೆ ಮಾಡಲಾಯಿತು. ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ವಾಗ್ಲೆ ಸಭಾಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಉದ್ಘಾಟಿಸಿ ಶುಭಹಾರೈಸಿದರು.

ಎಸ್.ವೈ.ಎಸ್ ಬ್ರಾಂಚ್ ನಿಕಟಪೂರ್ವ ಅಧ್ಯಕ್ಷ ಎಸ್. ಅಬೂಬಕರ್, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಎಸ್ಸೆಸ್ಸೆಫ್ ಬ್ಲಡ್ ಸೈಬೋ ದ. ಕ. ಕೋರ್ಡಿನೇಟರ್ ಕರೀಂ ಕದ್ಕಾರು, ಎಸ್.ವೈ.ಎಸ್ ಜಿಲ್ಲಾ ಟೀಂ ಇಸಾಬ ನಾಯಕರಾದ ಇಕ್ಬಾಲ್ ಬಪ್ಪಳಿಗೆ, ಪುತ್ತೂರು ಸೆಂಟರ್ ಪ್ರ. ಕಾರ್ಯದರ್ಶಿಂ ಸ್ವಾಲಿಹ್ ಮುರ, ಸೆಂಟರ್ ಟೀಂ ಇಸಾಬ ನಾಯಕ ಶಾಹುಲ್ ಹಮೀದ್ ಕಬಕ, ಸದಸ್ಯರಾದ ರಫೀಕ್ ಸಖಾಫಿ ಕೆಮ್ಮಾಯಿ, ಅಬ್ದುಲ್ ಅಝೀಝ್ ಕೆಮ್ಮಾಯಿ, ಎಸ್ಸೆಸ್ಸೆಫ್ ಬ್ಲಡ್ ಸೈಬೋ ಝೋನ್ ಉಸ್ತುವಾರಿ ಇಮ್ರಾನ್ ರೆಂಜಲಾಡಿ, ಡಿವಿಷನ್ ಉಸ್ತುವಾರಿ ಹಾರಿಸ್ ಅಡ್ಕ, ಬ್ರಾಂಚ್ ಕೋಶಾಧಿಕಾರಿ ಅಶ್ರಫ್ ಕಲ್ಲರ್ಪೆ, ಎಸ್ಸೆಸ್ಸೆಫ್ ಶಾಖಾ ಪ್ರ. ಕಾರ್ಯದರ್ಶಿ ರಾಝಿಲ್ ಕಲ್ಲರ್ಪೆ, ಕೆ.ಸಿ.ಎಫ್ ಕಾರ್ಯಕರ್ತ ಹಮೀದ್ ಅಮ್ಮಿ ವಾಗ್ಲೆ, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಬಿ.ಕೆ. ಕಾಮಿಲ್ ಮದನಿ, ಪುತ್ತು ವಾಗ್ಲೆ ರಶೀದ್ ಹಾಗೂ ಸೆಕ್ಟರ್, ಶಾಖಾ ನಾಯಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಶಾಖಾ ಉಪಾಧ್ಯಕ್ಷ ಬಿ.ಕೆ. ಯಾಸೀನ್ ಅಹ್ಸನಿ ಅಲ್‌ಹಿಮಮಿ ಸ್ವಾಗತಿಸಿದರು. ಎಸ್.ವೈ.ಎಸ್ ಬ್ರಾಂಚ್ ಪ್ರ.ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ ವಂದಿಸಿದರು. ಹಂಝ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.