Breaking News

ರಾಘವೇಂದ್ರ ಸ್ಟೋರ್ಸ್ ನಲ್ಲಿ ಹೊಸ ಟ್ರೆಂಡ್ ವಾಲ್‌ಪೇಪರ್ ಜೊತೆಗೆ ಹೊಸ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಜನತೆಗೆ ಪೈಂಟ್ ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ಟೋರ್ಸ್ ಸಂಸ್ಥೆಯು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಾ ಬಂದ್ತಿದೆ. ಬಣ್ಣದ ಲೋಕದಲ್ಲಿ ಉಪಯುಕ್ತ ಸೇವೆ ಹಾಗೂ ಮಾಹಿತಿಗಳನ್ನು ಒದಗಿಸುತ್ತಾ ಗ್ರಾಹಕರ ವಿಶ್ವಾಸ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವರ್ಷದಿಂದ ಪಕ್ಕದ ಹೊಸ ಕಟ್ಟಡದ ಮಹಾದೇವಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.ಏಷಿಯನ್ ಪೈಂಟ್ ಕಂಪೆನಿಯವರೇ ವಿನ್ಯಾಸ ಮಾಡಿರುವ ಆತ್ಯಾಧುನಿಕ ಶೋ ರೂಂ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ನಿಮ್ಮ ಮನೆಗೆ ಆತ್ಯಾಕರ್ಷಕ ಕಲರ್ ಕಾಂಬಿನೇಷನ್ ಮಾಡಿಕೊಡಲೆಂದು ಏಷಿಯನ್ ಪೈಂಟ್‌ಕಂಪೆನಿಯ ಕಲರ್ ಕನ್ಸಲ್‌ಟೆಂಟ್ ಒಬ್ಬರು ಸದಾ ಲಭ್ಯರಿರುತ್ತಾರೆ.

ಮನೆಯ ಒಂದೆರಡು ಗೋಡೆಗಳಿಗೆ ಆಕರ್ಷಕಹಾಗೂ ಉತ್ತಮ ಗುಣ ಮಟ್ಟದ ಏಷಿಯನ್ ಪೈಂಟ್ಸ್‌ನವರ ವಾಲ್ ಪೇಪರ್ (ವಾಲ್‌ಕವರಿಂಗ್ಸ್) ಹಚ್ಚಿರಿ. ಇದು ನಿಮ್ಮ ಮನೆಗೆ ಇತರರ ಮನೆಯಲ್ಲಿ ಇಲ್ಲದ ಒಂದು ವಿಭಿನ್ನ ನೋಟ ಕೊಡುತ್ತದೆ. ನೂರಕ್ಕೂ ಮಿಕ್ಕಿದ ಅಂದವಾದ ಡಿಸೈನ್‌ಗಳು ನಿಮಗಿಲ್ಲಿ ಲಭ್ಯವಿದೆ. ಪ್ಯಾಷನ್ ಲೋಕದ ದಿಗ್ಗಜ.ಸವ್ಯಸಾಚಿಯವರ ಅದ್ಭುತ ಕಲೆಕ್ಷನ್‌ಗಳು, ನಿಮ್ಮ ಮನೆಗೆ ವಿಶೇಷ ಮೆರುಗನ್ನು ತರಬಲ್ಲದು. ಮಕ್ಕಳಿಗಾಗಿ ಡಿಸ್ನಿ, ಮಾರ್‌ವೆಲ್, ಸ್ಟುಡಿಯೊ, ಬಾರ್ಬಿ, ಸುಪರ್ ಮ್ಯಾನ್, ಸ್ಪೈಡರ್‌ಮ್ಯಾನ್ ಕೂಡ ದೊರೆಯುತ್ತದೆ. ಸುಂದರವಾದ ವಾಲ್‌ಪೇಪರ್‌ಗಳು ಮನಸ್ಸಿಗೆ ಉಲ್ಲಾಸವನ್ನು ಕೊಡುವುದರ ಜೊತೆಗೆ, ಬಂದ ಅತಿಥಿಗಳ ಮೆಚ್ಚುಗೆಯನ್ನು ಪಡೆಯುವಂತೆ ಮಾಡುತ್ತದೆ. ನೀವೂ ನಮ್ಮ ವಿನೂತನ ಶೋ-ರೂಂಗೆ ಬಂದು ನಿಮಗಿಷ್ಟವಾದ ವಾಲ್‌ಪೇಪರ್ ಆಯ್ಕೆ ಮಾಡಿದ ಮೇಲೆ ನಿಮ್ಮ

ಮನೆಗೆ ಬಂದು ನಿಮ್ಮ ಆಯ್ಕೆಯ ಗೋಡೆಗಳಿಗೆ ಹಚ್ಚಿಕೊಡುವ ವ್ಯವಸ್ಥೆಯೂ ನಮ್ಮಲ್ಲಿದೆ. ಇದೀಗ ನೀವುಮೂರು ವಾಲ್ ಪೇಪರ್‌ಕೊಂಡಾಗ ಇನ್ನೊಂದು ಸಂಪೂರ್ಣ ಉಚಿತವಾಗಿ ಪಡೆಯಬಹುದು. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಇಂದಿನ ಹೊಸ ಟ್ರೇಂಡ್ ನಿಮ್ಮದಾಗಿಸಬಹುದು.

ನಿಮ್ಮ ಮನೆಗೆ ಉಪಯುಕ್ತವಾದ, ನೀವೇ ಮಾಡಬಹುದಾದ ಹಲವು ಹೊಸ ಉತ್ಪನ್ನಗಳು ನಮ್ಮ ಶೋರೂಂನಲ್ಲಿ ಲಭ್ಯವಿದೆ. ಸಂಸ್ಥೆಗೆ ಭೇಟಿ ನೀಡಿ ಇವೆಲ್ಲದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.